ETV Bharat / bharat

ಏಳು ವರ್ಷದ ಬಾಲಕಿ ಮೇಲೆ ತಂದೆ ಮಗನಿಂದ ಅತ್ಯಾಚಾರ - ತಂದೆ ಮಗನಿಂದ ಅತ್ಯಾಚಾರ

ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮಹಿಳೆಯರು ಮಧ್ಯರಾತ್ರಿ ಮಾತ್ರವಲ್ಲ ಹಗಲು ಹೊತ್ತಿನಲ್ಲೂ ಒಬ್ಬಂಟಿಯಾಗಿ ಹೊರಗೆ ಹೋಗಲು ಬಯಸುವುದಿಲ್ಲ. ಸರಕಾರ ಎಷ್ಟೇ ಕಠಿಣ ಕಾನೂನು ತಂದರೂ.. ಎಷ್ಟೇ ಕಠಿಣ ಶಿಕ್ಷೆ ನೀಡಿದರೂ.. ಹಿಂಸೆ ನಿಲ್ಲುತ್ತಿಲ್ಲ. ಇತ್ತೀಚೆಗಷ್ಟೇ ತೆಲಂಗಾಣದಲ್ಲಿ ಇಂಥದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ.

seven year old girl was brutally raped  girl was brutally raped by her father and son  Gang rape in Hyderabad  ಬಾಲಕಿ ಮೇಲೆ ತಂದೆ ಮಗನಿಂದ ಅತ್ಯಾಚಾರ  ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ  ಎಷ್ಟೇ ಕಠಿಣ ಕಾನೂನು ತಂದರೂ  ಕಠಿಣ ಶಿಕ್ಷೆ ನೀಡಿ  ನಗರಕ್ಕೆ ವಲಸೆ ಬಂದಿದ್ದ ಕುಟುಂಬ  ತಂದೆ ಮಗನಿಂದ ಅತ್ಯಾಚಾರ  ಕಠಿಣ ಕ್ರಮ ಕೈಗೊಳ್ಳುವಂತೆ ಪೋಷಕರ ಆಗ್ರಹ
ಏಳು ವರ್ಷದ ಬಾಲಕಿ ಮೇಲೆ ತಂದೆ ಮಗನಿಂದ ಅತ್ಯಾಚಾರ
author img

By

Published : Aug 12, 2023, 2:12 PM IST

ಹೈದರಾಬಾದ್​, ತೆಲಂಗಾಣ: ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ನಿತ್ಯ ಎಲ್ಲಾದರೂ ಒಂದು ಕಡೆ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ಪ್ರಕರಣಗಳ ನಡೆಯುತ್ತಿರುವುದರ ಬಗ್ಗೆ ಬೆಳಕಿಗೆ ಬರುತ್ತಿವೆ. ಅದರಂತೆ ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ತಂದೆ ಮತ್ತು ಮಗ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.

ನಗರಕ್ಕೆ ವಲಸೆ ಬಂದಿದ್ದ ಕುಟುಂಬ: ಬಾಲಕಿಗೆ ಮೊಬೈಲ್ ಕೊಡಿಸುವುದಾಗಿ ಆಸೆ ತೋರಿಸಿ ತಂದೆ ಮತ್ತು ಮಗ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪೇಟಬಶಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸರು ವಿವರ ಬಹಿರಂಗಪಡಿಸಿದ್ದಾರೆ. 7 ವರ್ಷಗಳ ಹಿಂದೆ ಬದುಕಿಗಾಗಿ ಕುಟುಂಬವೊಂದು ನಗರಕ್ಕೆ ವಲಸೆ ಬಂದಿತ್ತು. ಆ ಕುಟುಂಬ ಇಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು. ತಮ್ಮ ಮಗುವನ್ನು ಮನೆಯಲ್ಲಿ ಬಿಟ್ಟು ಎಂದಿನಂತೆ ಕೆಲಸಕ್ಕೆ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಂದೆ ಮಗನಿಂದ ಅತ್ಯಾಚಾರ: ಶಿವಕುಮಾರ್ ಎಂಬುವರ ಕುಟುಂಬ ಅವರ ಮನೆ ಸಮೀಪ ವಾಸಿಸುತ್ತಿದೆ. ಶಿವಕುಮಾರ್ (45) ಮತ್ತು ಅವರ ಮಗ ಶ್ಯಾಮೇಲ್ (19) ಮನೆಯಲ್ಲಿ ಬಾಲಕಿ ಒಬ್ಬಳೇ ಇರುವುದನ್ನು ಗಮನಿಸಿದ್ದಾರೆ. ಇದರ ಭಾಗವಾಗಿಯೇ ಬಾಲಕಿ ಜೊತೆ ಮೊದಲು ಸ್ನೇಹ ಬೆಳಸಿಕೊಂಡಿದ್ದಾರೆ. ಬಾಲಕಿ ಶಿವಕುಮಾರ್​ನನ್ನು ತಾತಾ ಎಂದು ಕರೆಯುತ್ತಿತ್ತು. ಅದರಂತೆ ಶ್ಯಾಮೇಲ್​ನನ್ನು ಅಣ್ಣ ಎಂದು ಕರೆಯುತ್ತಿತ್ತು. ಕಾಲ ಕಳೆಯುತ್ತಿದ್ದಂತೆ ಇವರ ಸ್ನೇಹ ಬಲಗೊಂಡಿತ್ತು. ಒಂದು ದಿನ ಶಿವಕುಮಾರ್​ ಬಾಲಕಿಗೆ ಸೆಲ್ ಫೋನ್ ಕೊಡಿಸುವುದಾಗಿ ಭರವಸೆ ನೀಡಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಮಗನೂ ಸಹ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ರಕ್ತದ ಮಡುವಿನಲ್ಲೇ ಬಾಲಕಿ ಮನೆಗೆ ತೆರಳಿದ್ದಾಳೆ. ಸಂಜೆ ಕೆಲಸದಿಂದ ಪೋಷಕರು ಮನೆಗೆ ಬಂದಿದ್ದಾರೆ. ಮನೆಯಲ್ಲಿ ರಕ್ತದ ಕಲೆಗಳನ್ನು ಕಂಡ ಪೋಷಕರು ತಮ್ಮ ಮಗಳನ್ನು ವಿಚಾರಿಸಿದ್ದಾರೆ. ಈ ವೇಳೆ ಬಾಲಕಿ ಹೊಟ್ಟೆ ನೋವಿನಿಂದ ಬಳಲುತ್ತಿರುವುದಾಗಿ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಠಿಣ ಕ್ರಮ ಕೈಗೊಳ್ಳುವಂತೆ ಪೋಷಕರ ಆಗ್ರಹ: ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಬಾಲಕಿಯನ್ನು ಪರೀಕ್ಷಿಸಿದ್ದಾಗ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಬಾಲಕಿಯನ್ನು ಉತ್ತಮ ಚಿಕಿತ್ಸೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮತ್ತೊಂದೆಡೆ ಸಂತ್ರಸ್ತೆಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ದುಷ್ಕೃತ್ಯ ಎಸಗಿದ ತಂದೆ - ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿ ಹೇಳಿದ್ದಾರೆ. ಇನ್ನು ತಮ್ಮ ಮಗಳ ಮೇಲೆ ಇಂತಹ ದೌರ್ಜನ್ಯ ಎಸಗಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಬಾಲಕಿಯ ಪೋಷಕರು ಆಗ್ರಹಿಸಿದ್ದಾರೆ.

ಓದಿ: ಖಾಸಗಿ ಕಾಲೇಜು ವಿದ್ಯಾರ್ಥಿನಿಯರ ಫೋಟೋ ವೈರಲ್ ಪ್ರಕರಣ: ಮತ್ತಿಬ್ಬರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.