ತಿರುಚಿರಾಪಳ್ಳಿ (ತಮಿಳುನಾಡು): ತಿರುಚಿಯ ತರಣಲ್ಲೂರಿನ ಈಸ್ಟ್ ಬೌಲೆವರ್ಡ್ ರಸ್ತೆಯಲ್ಲಿರುವ ವಿಸ್ಕೌಂಟೆಸ್ ಗೋಸ್ಚೆನ್ ಸರ್ಕಾರಿ ಬಾಲಕಿಯರ (ಮುಸ್ಲಿಂ) ಉರ್ದು ಹೈಯರ್ ಸೆಕೆಂಡರಿ ಶಾಲೆಯು ಶತಮಾನಗಳಿಂದ ಶಿಕ್ಷಣದ ಮೂಲಕ ಮುಸ್ಲಿಂ ಮಹಿಳಾ ಸಮಾಜದ ಸಬಲೀಕರಣದ ಬಹುದೊಡ್ಡ ಪಾಲು ತನ್ನದಾಗಿಸಿಕೊಂಡಿದೆ. ವಿಶೇಷವಾಗಿ ಸಮಾಜದ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬರೋಬ್ಬರಿ 1 ಶತಮಾನಗಳಿಂದ ಶ್ರಮಿಸುತ್ತಿದೆ.
ಮುಸ್ಲಿಂ ಬಾಲಕಿಯರ ಶಿಕ್ಷಣದ ದೃಷ್ಟಿಯಿಂದ 1910ರಲ್ಲಿ ಆರಂಭಗೊಂಡ ಉರ್ದು ಮಾಧ್ಯಮ ಶಾಲೆಯೂ ಇಂದಿಗೂ ವಿದ್ಯಾರ್ಜನೆಯಲ್ಲಿ ತೊಡಗಿದೆ. ಒಂದು ಕಾಲದಲ್ಲಿ ಈ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಿಕೊಡುವುದೇ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಆದರೆ 2005 ರಿಂದ ಈ ಶಾಲೆ ಸಹ ಸಂಕಷ್ಟದಲ್ಲಿ ತೊಡಗಿದೆ. ಬರ ಬರುತ್ತಾ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಇಳಿಕೆಯಾಗಿದೆ. ಶಾಲೆಯಲ್ಲಿ ಕೇವಲ ಇಬ್ಬರು ವಿದ್ಯಾರ್ಥಿನಿಯರಷ್ಟೇ ದಾಖಲಾಗಿದ್ದ ಇತಿಹಾಸ ಸಹ ಇದೆ.
ಇಂಗ್ಲಿಷ್ ಮಾಧ್ಯಮ ಶಾಲೆಗಳ ಆರಂಭದಿಂದಾಗಿ ಉರ್ದು ಮಾಧ್ಯಮದಲ್ಲಿ ಕಲಿಕೆ ಆಸಕ್ತಿ ಗಣನೀಯವಾಗಿ ಕಡಿಮೆಯಾಯಿತು. ಬಳಿಕ ಶಾಲೆಯನ್ನೇ ಮುಚ್ಚುವ ತೀರ್ಮಾನಕ್ಕೆ ಬರಲಾಯಿತ್ತಾದರೂ ಆಡಳಿತ ಮಂಡಳಿ ಹಾಗೂ ಸಂಸ್ಥೆ ಈ ನಿರ್ಧಾರದಿಂದ ಹೊರಬಂದು ಶಾಲೆಯನ್ನು ಮುಂದುವರಿಸಲು ನಿರ್ಧರಿಸಲಾಯಿತು.
ಬಳಿಕ ಶಾಲೆಯನ್ನು ಪ್ರೌಢಶಾಲೆ ದರ್ಜೆಗೇರಿಸಿದಾಗ ಮತ್ತೆ ವಿದ್ಯಾರ್ಥಿನಿಯರ ಆಗಮವಾಗಿತ್ತು. ಇದೀಗ ಶಾಲೆಯಲ್ಲಿ 512 ವಿದ್ಯಾರ್ಥಿನಿಯರು ಕಲಿಯುತ್ತಿದ್ದು, ಹಳೆಯ ಕಟ್ಟಡಕ್ಕೆ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು ಎಂದು ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.