ETV Bharat / bharat

Video: ಬೈಕ್​ ಮೇಲೆ ಹೋಗ್ತಿದ್ದಾಗ ದಿಢೀರ್​ ಎಂದು ಬಂದ ಹಾವು.. ಆಕ್ರೋಶದಲ್ಲಿ ಈ ಕೆಲಸ ಮಾಡಿದ ವ್ಯಕ್ತಿ! - ಬೈಕ್​ ಮೇಲೆ ಹೋಗ್ತಿದ್ದಾಗ ರಸ್ತೆ ಮೇಲೆ ಬಂದ ಹಾವು

ಹಳ್ಳಿ ಪ್ರದೇಶದ ರಸ್ತೆವೊಂದರಲ್ಲಿ ತೆರಳುತ್ತಿದ್ದಾಗ ಹಾವೊಂದು ಬೈಕ್​ ಹತ್ತಿರ ಬರುತ್ತಿದ್ದಂತೆ ಭಯಗೊಂಡ ಸವಾರರು ಕೆಳಗೆ ಬಿದ್ದಿದ್ದಾರೆ.

snake on the road
snake on the road
author img

By

Published : Jun 28, 2021, 8:06 PM IST

ಜಲ್ಗಾಂವ್​​​(ಮಹಾರಾಷ್ಟ್ರ): ಜಲ್ಗಾಂವ್​​ನ ಹಳ್ಳಿಯೊಂದರಲ್ಲಿ ದ್ವಿಚಕ್ರ ವಾಹನದ ಮೇಲೆ ತೆರಳುತ್ತಿದ್ದಾಗ ಸಡನ್​ ಆಗಿ ಹಾವುವೊಂದು ಅವರ ಬೈಕ್​ ಹತ್ತಿರ ಬಂದಿದೆ. ಇದರಿಂದ ಹೆದರಿಂದ ನಾಲ್ವರು ರಸ್ತೆ ಮೇಲೆ ಬಿದ್ದಿದ್ದಾರೆ. ಇದೇ ವೇಳೆ ಅದರಲ್ಲಿದ್ದ ಯುವಕನೊಬ್ಬ ಹಾವನ್ನ ಕೈಯಲ್ಲಿ ಹಿಡಿದುಕೊಂಡು ರಸ್ತೆ ಮೇಲೆ ಎತ್ತಿ ಹೊಡೆದಿದ್ದಾನೆ.

ಆಕ್ರೋಶದಲ್ಲೇ ಕೃತ್ಯವೆಸಗಿದ ವ್ಯಕ್ತಿ

ದ್ವಿಚಕ್ರ ವಾಹನದ ಮೇಲೆ ಕುಳಿತುಕೊಂಡು ನಾಲ್ವರು ಪ್ರಯಾಣ ಬೆಳೆಸಿದ್ದರು. ಈ ವೇಳೆ, ರಸ್ತೆ ಪಕ್ಕದಿಂದ ದಿಢೀರ್​ ಆಗಿ ಹಾವೊಂದು ಅವರ ಬೈಕ್​ ಹತ್ತಿರ ಬಂದಿದೆ. ಕ್ಷಣಾರ್ಧದಲ್ಲೇ ಹೆದರಿ ಅವರು ಬೈಕ್​ ಸಮೇತ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಹಾವಿನ ಬಾಲ ಕೈಯಲ್ಲಿ ಹಿಡಿದು ಕೊಂಡು ಎತ್ತಿ ರಸ್ತೆ ಮೇಲೆ ಹೊಡೆದಿದ್ದಾನೆ. ಪರಿಣಾಮ ಅದು ಸತ್ತು ಹೋಗಿದೆ.

ಇದನ್ನೂ ಓದಿರಿ: ರಸ್ತೆ ಬದಿ ನಿಂಬೆ ಪಾನಕ ಮಾರುತ್ತಿದ್ದ ಯುವತಿ ಈಗ ಸಬ್​​ ಇನ್ಸ್​​ಪೆಕ್ಟರ್​.. ಆ್ಯನಿ ಶಿವ ರೋಚಕ ಕಹಾನಿ!

ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದ್ದು, ಅನೇಕರು ವಿರೋಧ ಸಹ ವ್ಯಕ್ತಪಡಿಸಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಅದು ವಿಷ ಇಲ್ಲದ ಹಾವು ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.