ಕೋಲ್ಕತ್ತಾ( ಪಶ್ಚಿಮ ಬಂಗಾಳ): ಮಲೇರಿಯಾ ರೋಗಕ್ಕೆ ಶೀಘ್ರ ಲಸಿಕೆ ಸಿಗಲಿದೆ ಎಂದು ತಿಳಿದು ಬಂದಿದೆ. ಹೊಸ ಲಸಿಕೆ ಹಿಂದಿನ ಎಲ್ಲ ಹಳೆಯ ಔಷಧಗಳಿಗಿಂತ ಹೆಚ್ಚು ಪರಿಣಾಮಕಾರಿ ಎಂದು ವೈದ್ಯರು ಹೇಳಿದ್ದಾರೆ. ಭಾರತೀಯ ವೈದ್ಯಕೀಯ ಸಮೂಹದ ಸಹಯೋಗದಲ್ಲಿ ಈ ಸಂಶೋಧನೆ ನಡೆಯುತ್ತಿದೆ.
ಮಲೇರಿಯಾವು ಸಾಮಾನ್ಯವಾಗಿ 4 ವಿಧದಲ್ಲಿರುತ್ತದೆ - ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ್ (ಪ್ಲಾಸ್ಮೋಡಿಯಮ್ ಫಾಲ್ಸಿಪ್ಯಾರಮ್), ಪ್ಲಾಸ್ಮೋಡಿಯಮ್ ವೈವಾಕ್ಸ್ (ಪಿ. ವೈವಾಕ್ಸ್), ಪ್ಲಾಸ್ಮೋಡಿಯಮ್ ಓವಲೆ (ಪಿ. ಓವೇಲ್) ಮತ್ತು ಪ್ಲಾಸ್ಮೋಡಿಯಮ್ ಮಲೇರಿಯಾ (ಪಿ. ಮಲೇರಿಯಾ).
ಆದರೆ, ಪೂರ್ವ ಭಾರತದಲ್ಲಿ, ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ್ ಮತ್ತು ಪ್ಲಾಸ್ಮೋಡಿಯಮ್ ವೈವಾಕ್ಸ್ ಹೆಚ್ಚು ಪ್ರಚಲಿತವಾಗಿದೆ. ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ್ ಸೆಪ್ಟೆಂಬರ್‌ನಿಂದ ಫೆಬ್ರುವರಿ ಅವಧಿಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ.
ಈ ಕುರಿತು ಮಾತನಾಡಿದ ಡಾ. ದೇಬಾಶಿಸ್ ಚಟರ್ಜಿ, ಪ್ರಸ್ತುತ ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ್ ಮಲೇರಿಯಾ ಶಮನಕ್ಕೆ ಕ್ಲೋರೊಕ್ವಿನ್ ಅನ್ನು ಬಳಸಲಾಗುತ್ತದೆ. ವೈದ್ಯರು ಆರ್ಟೆಮಿಸಿನಿನ್ ಗುಂಪಿನ ಇಂಜೆಕ್ಷನ್ ಔಷಧಗಳನ್ನು ಬಳಸುತ್ತಾರೆ. ಇವೆಲ್ಲವೂ 1970 ರ ದಶಕದ ಔಷಧಗಳಾಗಿವೆ. ಆದರೆ, ಇವುಗಳು ಈಗ ಮಾನವ ದೇಹದಲ್ಲಿ ಪರಿಣಾಮ ಬೀರುತ್ತಿಲ್ಲ.
ಇದರಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗಿದೆ. ಅಲ್ಲದೆ, ಕ್ವಿನೈನ್ ಹೆಚ್ಚು ಅಡ್ಡ ಪರಿಣಾಮಗಳನ್ನು ಹೊಂದಿದೆ. ಇದು ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೃದಯದ ಮೇಲೆ ಕೂಡ ಪರಿಣಾಮ ಬೀರುತ್ತದೆ ಎಂದರು.
ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಔಷಧಗಳು ಬರುತ್ತಿವೆ. ದೇಶೀಯ ಫಾರ್ಮಾ ಕಂಪನಿಯು ಶೀಘ್ರದಲ್ಲೇ ಎರಡನೇ ಹಂತದ ಪ್ರಯೋಗವನ್ನು ಪ್ರಾರಂಭಿಸಲಿದೆ. ಈ ಮೊದಲು ಆಸ್ಟ್ರೇಲಿಯಾದಲ್ಲಿ ಈ ಔಷಧದ ಪ್ರಯೋಗ ನಡೆದಿತ್ತು.
ಲಸಿಕೆ ಪ್ರಯೋಗದ ಫೆಸಿಲಿಟೇಟರ್ ಸ್ನೇಹಂದು ಕೋನಾರ್, ಈ ಲಸಿಕೆ ಪ್ರಯೋಗವನ್ನು ಈಗಾಗಲೇ ಆಸ್ಟ್ರೇಲಿಯಾದಲ್ಲಿ ಮಾಡಲಾಗಿದೆ. ಭಾರತದಂತೆಯೇ, ಈ ಎರಡು ರೀತಿಯ ಮಲೇರಿಯಾದ ಪರಿಣಾಮಗಳು ಅಲ್ಲಿಯೂ ಒಂದೇ ಆಗಿವೆ. ಉತ್ತಮ ಫಲಿತಾಂಶಗಳು ಬಂದಿವೆ. ಅಲ್ಲಿ ಪತ್ತೆಯಾಗಿದೆ ಎಂದರು.
ಶೀಘ್ರದಲ್ಲೇ ಪಶ್ಚಿಮ ಬಂಗಾಳದಲ್ಲಿ ಪ್ರಯೋಗ ಆರಂಭವಾಗಲಿದೆ. ದೇಶೀಯ ಔಷಧಿಯಾಗಿರುವುದರಿಂದ ಔಷಧದ ಬೆಲೆ ತುಂಬಾ ಕಡಿಮೆ ಇರುತ್ತದೆ. ನೀಲ್ ರತನ್ ಸಿರ್ಕಾರ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸಿನ್ ಆಸ್ಪತ್ರೆಯಲ್ಲಿ ಈ ಪ್ರಯೋಗ ನಡೆಯಲಿದೆ ಎಂದು ತಿಳಿದು ಬಂದಿದೆ. ಈ ಪ್ರಯೋಗವು ಒಟ್ಟು 145 ಜನರ ಮೇಲೆ 43 ದಿನಗಳವರೆಗೆ ನಡೆಯುತ್ತದೆ.
ಇದನ್ನೂ ಒದಿ: 2027ರ ಹೊತ್ತಿಗೆ ಕರ್ನಾಟಕ ಮಲೇರಿಯಾ ಮುಕ್ತ ರಾಜ್ಯ ಗುರಿ: ಸಚಿವ ಸುಧಾಕರ್