ETV Bharat / bharat

ಹೆಣ್ಣು ಮಗು ಜನಿಸಿತೆಂದು ಹೀಗೆ ಮಾಡೋದಾ.. ಛೇ.. ಇವಳೆಂಥ ಅಮ್ಮ? - ಹೆಣ್ಣುಮಗು ಹುಟ್ಟಿತೆಂದು ಕೊಲ್ಲಲು ಮುಂದಾದ ತಾಯಿ

ನಾರಾಯಣಖೇಡ ಹೊರವಲಯದ ರಾಯಲಮಡುಗಿನ ನಾಗೇಶ್ ಮತ್ತು ಮೆಗವತ್ತಬುಲಿ ದಿನಗೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ದಂಪತಿ ಒಂದು ವರ್ಷದ ಹಿಂದೆ ಅಶೋಕ್ ನಗರಕ್ಕೆ ಬಂದು, ಇಂದಿರಾನಗರದಲ್ಲಿ ದಿನಗೂಲಿ ಮಾಡುತ್ತಿದ್ದರು..

ಹೆಣ್ಣು ಮಗು
ಹೆಣ್ಣು ಮಗು
author img

By

Published : Aug 22, 2021, 5:49 PM IST

ಸಂಗಾರೆಡ್ಡಿ(ತೆಲಂಗಾಣ): ಟಾಯ್ಲೆಟ್​ನಲ್ಲಿ ಮಹಿಳೆಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಶಿಶುವನ್ನು ಕಿಟಕಿಯಿಂದ ಹೊರಗೆಸೆಯಲು ಯತ್ನಿಸಿರುವ ಅಮಾನವೀಯ ಘಟನೆ
ಜಿಲ್ಲೆಯ ಜಹೀರಾಬಾದ್​​ನ ಬಸ್​ ನಿಲ್ದಾಣದಲ್ಲಿರುವ ಸುಲಭ್ ಕಾಂಪ್ಲೆಕ್ಸ್​ನಲ್ಲಿ ನಡೆದಿದೆ.

ಹೆಣ್ಣು ಮಗು ಜನಿಸಿತೆಂದು ಹತ್ಯೆಗೆ ಯತ್ನ?

ಶನಿವಾರ ಮಧ್ಯಾಹ್ನ ಮೆಗವಟ್ಟುಬುಲಿ ಜಹೀರಾಬಾದ್​​ ಬಸ್​ ನಿಲ್ದಾಣದಲ್ಲಿರುವ ಸುಲಭ್ ಕಾಂಪ್ಲೆಕ್ಸ್​ನ ಟಾಯ್ಲೆಟ್​ಗೆ ತೆರಳಿದ್ದರು. ಎರಡು ಗಂಟೆಗಳಾದರೂ ಮಹಿಳೆ ಹೊರಬರದ ಕಾರಣ, ಅಲ್ಲಿನ ಸಿಬ್ಬಂದಿ ಬಾಗಿಲನ್ನು ಮುರಿದಿದ್ದಾರೆ. ಈ ಸಮಯದಲ್ಲಿ ಆಗ ತಾನೆ ಹೆರಿಗೆಯಾಗಿದ್ದ ಹೆಣ್ಣು ಶಿಶುವನ್ನು ಮಹಿಳೆ ಕಿಟಕಿಯಿಂದ ಹೊರ ಎಸೆಯಲು ಪ್ರಯತ್ನಿಸಿದ್ದಳು ಎನ್ನಲಾಗಿದೆ.

ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು

ಇದನ್ನು ಗಮನಿಸಿದ ಸ್ಥಳೀಯರು ರಾಮಚಂದ್ರಪುರಂ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮಗು-ತಾಯಿಯನ್ನು ಆಸ್ಪತ್ರೆಗೆ ಸೇರಿಸಿದ್ದು, ಈ ಸಮಯದಲ್ಲಿ ತಾಯಿ ಮಗುವನ್ನು ಮುಟ್ಟಲು ಒಪ್ಪಲಿಲ್ಲ. ಹಾಗಾಗಿ, ಪೊಲೀಸರು ಮಗುವನ್ನು ಸಂಗಾರೆಡ್ಡಿ ಐಸಿಡಿಎಸ್ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ಇದನ್ನೂ ಓದಿ: 10 ಕೋಟಿ ರೂ. ಅವ್ಯವಹಾರ ಆರೋಪ : TMC ಬಿಟ್ಟು BJP ಸೇರಿದ್ದ ಮಾಜಿ ಸಚಿವನ ಬಂಧನ

ನಾರಾಯಣಖೇಡ ಹೊರವಲಯದ ರಾಯಲಮಡುಗಿನ ನಾಗೇಶ್ ಮತ್ತು ಮೆಗವತ್ತಬುಲಿ ದಿನಗೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ದಂಪತಿ ಒಂದು ವರ್ಷದ ಹಿಂದೆ ಅಶೋಕ್ ನಗರಕ್ಕೆ ಬಂದು, ಇಂದಿರಾನಗರದಲ್ಲಿ ದಿನಗೂಲಿ ಮಾಡುತ್ತಿದ್ದರು. ಆದರೆ, ಕಳೆದ ಎರಡು ತಿಂಗಳ ಹಿಂದೆ ಆಕೆಯ ಪತಿ ನಾಗೇಶ್​ ಊರಿಗೆ ಹೋಗಿದ್ದಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟನು. ಗರ್ಭಿಣಿಯಾಗಿದ್ದ ಈಕೆ ಕೂಲಿ ಕೆಲಸ ಮಾಡಿ ಬದುಕಿನ ಬಂಡಿ ಸಾಗಿಸುತ್ತಿದ್ದಳು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.