ETV Bharat / bharat

ಶ್ರೀನಗರ ಗುಂಡಿನ ಚಕಮಕಿಯಲ್ಲಿ ಉಗ್ರ ಖತಂ.. ಪೂಂಚ್​​ ಸ್ಫೋಟದಲ್ಲಿ ಸೈನಿಕರಿಗೆ ಗಾಯ - ಪೂಂಛ್​ನಲ್ಲಿ ಬೂಬಿ ಟ್ರ್ಯಾಪ್​ ಸ್ಫೋಟ

ಶ್ರೀನಗರದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಉಗ್ರನನ್ನು ಸೇನಾಪಡೆ ಹೊಡೆದುರುಳಿಸಿದ್ದರೆ, ಪೂಂಛ್​ನಲ್ಲಿ ನಡೆದ ಸ್ಪೋಟದಲ್ಲಿ ಇಬ್ಬರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ.

ಪೂಂಛ್​ ಸ್ಫೋಟದಲ್ಲಿ ಸೈನಿಕರಿಗೆ ಗಾಯ
ಪೂಂಛ್​ ಸ್ಫೋಟದಲ್ಲಿ ಸೈನಿಕರಿಗೆ ಗಾಯ
author img

By

Published : Jun 12, 2022, 8:26 PM IST

ಶ್ರೀನಗರ(ಜಮ್ಮು ಕಾಶ್ಮೀರ): ಶ್ರೀನಗರದಲ್ಲಿ ಉಗ್ರರು ಮತ್ತು ಭದ್ರತಾ ಸಿಬ್ಬಂದಿ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಭಯೋತ್ಪಾದಕನನ್ನು ಯೋಧರು ಬೇಟೆಯಾಡಿದ್ದಾರೆ. ಇನ್ನೊಂದೆಡೆ ಪೂಂಚ್​ನ ಎಲ್​ಒಸಿಯಲ್ಲಿ ಅಡಗಿಸಿಟ್ಟಿದ್ದ ಬೂಬಿ ಟ್ರ್ಯಾಪ್​ನಲ್ಲಿ ಇಬ್ಬರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ.

ಶ್ರೀನಗರದ ಕ್ರೀಸ್ಬಲ್ ಪಾಪ್​ಪೋರಾ ಸಂಗಮ್ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಲ್ಇಟಿ ಉಗ್ರಗಾಮಿ ಸಂಘಟನೆಗೆ ಸೇರಿದ್ದ ಆದಿಲ್ ಪರ್ಯೆ ಎಂಬ ಉಗ್ರನನ್ನು ಹೊಡೆದುರುಳಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಎಲ್​ಇಟಿ ಉಗ್ರನನ್ನು ಸದೆಬಡಿದ ಬಗ್ಗೆ ಟ್ವೀಟ್​ ಮಾಡಿರುವ ಪೊಲೀಸರು, ಶ್ರೀನಗರದಲ್ಲಿ ಇತ್ತೀಚೆಗೆ ನಡೆದ ದಾಳಿಯಲ್ಲಿ ಗುಲಾಂ ಹಸನ್ ದಾರ್ ಮತ್ತು ಸೈಫುಲ್ಲಾ ಖಾದ್ರಿ ಎಂಬ ಇಬ್ಬರು ಪೊಲೀಸರ ಹತ್ಯೆಯಲ್ಲಿ ಹತನಾದ ಉಗ್ರಗಾಮಿ ಆದಿಲ್​ ಭಾಗಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಸ್ಫೋಟದಲ್ಲಿ ಇಬ್ಬರು ಸೈನಿಕರಿಗೆ ಗಾಯ: ಪೂಂಚ್‌ನ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ನಡೆದ ಬೂಬಿ ಟ್ರ್ಯಾಪ್​ ಸ್ಫೋಟದಲ್ಲಿ ಇಬ್ಬರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಪೂಂಚ್ ಜಿಲ್ಲೆಯ ಮೆಂಧರ್‌ನ ಬಾಲಾಕೋಟ್ ಸೆಕ್ಟರ್‌ನಲ್ಲಿ ಸೇನಾ ತಂಡ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲ್ಲು ತೆರವುಗೊಳಿಸುತ್ತಿದ್ದಾಗ ಬೂಬಿ ಟ್ರ್ಯಾಪ್​ ಸ್ಫೋಟ ಸಂಭವಿಸಿದೆ.

19ನೇ ಬೆಟಾಲಿಯನ್​ನ ಯೋಧ ಮತ್ತು ಹವಾಲ್ದಾರ್ ಸ್ಫೋಟದಿಂದ ಗಾಯಗೊಂಡಿದ್ದಾರೆ. ತಕ್ಷಣವೇ ಇಬ್ಬರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಓದಿ: ಪಬ್​ಜಿ ಗೇಮ್ ಸೋತಿದ್ದಕ್ಕೆ ಸ್ನೇಹಿತರಿಂದ ಗೇಲಿ: ನೇಣಿಗೆ ಶರಣಾದ ಕಾಂಗ್ರೆಸ್​ ಮುಖಂಡನ ಮಗ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.