ಸತ್ನಾ(ಮಧ್ಯಪ್ರದೇಶ): ಮದುವೆ ಮಾಡಿಕೊಂಡಿದ್ದ ವಿವಾಹಿತೆಯೋರ್ವಳು ಫೇಸ್ಬುಕ್ ಫ್ರೆಂಡ್ನೊಂದಿಗೆ ಲವ್ನಲ್ಲಿ ಬಿದ್ದು, ಆತನ ಭೇಟಿ ಹಾಗೂ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಮಧ್ಯಪ್ರದೇಶದಿಂದ ಉತ್ತರಾಖಂಡದ ಹರಿದ್ವಾರಕ್ಕೆ ಹೋಗಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿರುವ ಘಟನೆ ಇದಾಗಿದ್ದು, ವೈವಾಹಿಕ ಜೀವನಕ್ಕೆ ಕಾಲಿಟ್ಟು, ಎರಡು ಮಕ್ಕಳಾಗಿರುವ ಮಹಿಳೆ ಈ ರೀತಿಯಾಗಿ ನಡೆದುಕೊಂಡಿದ್ದಾಳೆ. ಫೇಸ್ಬುಕ್ ಫ್ರೆಂಡ್ನೊಂದಿಗೆ ಲವ್ನಲ್ಲಿ ಬಿದ್ದು, ಆತನೊಂದಿಗೆ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಕಳೆದ ಜೂನ್ 28ರಂದು ಮನೆಬಿಟ್ಟು ಪರಾರಿಯಾಗಿದ್ದಳು. ಇದಕ್ಕೆ ಸಂಬಂಧಿಸಿದಂತೆ ಗಂಡನ ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಸೈಬರ್ ಕ್ರೈಂ ಮೂಲಕ ಆಕೆಯನ್ನ ಉತ್ತರಾಖಂಡದ ಹರಿದ್ವಾರದಿಂದ ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿರಿ: ದೇಶೀಯ ಕ್ರಿಕೆಟ್ ದೈತ್ಯನಿಗೆ ಮಣೆ... ಒಡಿಶಾ ಕ್ರಿಕೆಟ್ ತಂಡದ ಕೋಚ್ ಆಗಿ ವಾಸೀಂ ಜಾಫರ್
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ವಿವಾಹಿತೆ ಫೇಸ್ಬುಕ್ ಮೂಲಕ ಯುವಕನೋರ್ವನನ್ನ ಪ್ರೀತಿಸಿದ್ದಾಳೆ. ಆತನೊಂದಿಗೆ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಮನೆಬಿಟ್ಟು ತೆರಳಿದ್ದಳು ಎಂದಿದ್ದಾರೆ. ಆದರೆ ಆಕೆಯನ್ನ ರಕ್ಷಣೆ ಮಾಡಿ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ ಎಂದಿದ್ದಾರೆ. ಮಗಳು ಕಾಣೆಯಾಗುತ್ತಿದ್ದಂತೆ ಆಕೆಯ ತಂದೆ ಹುಡುಕಿಕೊಟ್ಟವರಿಗೆ 50 ಸಾವಿರ ರೂ. ನಗದು ಹಣ ಘೋಷಣೆ ಮಾಡಿದ್ದರು.