ಹೈದರಾಬಾದ್ (ತೆಲಂಗಾಣ): ಜನ ಸಂದಣಿ ಪ್ರದೇಶದಲ್ಲಿ ಪಿಸ್ತೂಲ್ ಹಿಡಿದು ಜನರಲ್ಲಿ ಆತಂಕ ಸೃಷ್ಟಿಸಿದ್ದ ಆರೋಪದ ಮೇಲೆ ಮಾಜಿ ಸೈನಿಕರೊಬ್ಬರನ್ನು ಹೈದರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಿಸ್ತೂಲ್ ತೋರಿಸಿ ರಸ್ತೆಯಲ್ಲಿ ಸಾಗುತ್ತಿದ್ದ ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಬೆದರಿಕೆ ಹಾಕಲಾಗುತ್ತಿತ್ತು ಎಂದು ಹೇಳಲಾಗಿದೆ .
ಇಲ್ಲಿನ ಅಮೀರ್‌ಪೇಟ್‌ನ ಬಿಗ್‌ಬಜಾರ್ ಸಮೀಪ ಮಾಜಿ ಸೈನಿಕ ಸಾಯಿಕುಮಾರ್ ಎಂಬಾತ ಕೈಯಲ್ಲಿ ಪಿಸ್ತೂಲ್ ಹಿಡಿದು ಸುತ್ತಾಡಿದ್ದರಿಂದ ಭಯದ ವಾತಾವರಣ ನಿರ್ಮಾಣವಾಗಿತ್ತು. ಈ ವಿಷಯ ತಿಳಿದ ಪಂಜಗುಟ್ಟ ಪೊಲೀಸರು ಸ್ಥಳಕ್ಕಾಗಮಿಸಿ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.
ಅಲ್ಲದೇ, ಆರೋಪಿ ಸಾಯಿಕುಮಾರ್ ಬಳಿಯಿದ್ದ ಪಿಸ್ತೂಲ್ ಮತ್ತು ಆರು ಜೀವಂತ ಗುಂಡು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಹರಿಶ್ಚಂದ್ರರೆಡ್ಡಿ ತಿಳಿಸಿದ್ದಾರೆ. ಇದೇ ವೇಳೆ, ಮಾದಾಪುರದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕೆಪಿಎಚ್ಬಿ - ಹೈಟೆಕ್ ಸಿಟಿ ರಸ್ತೆಯಲ್ಲಿ 2 ಕಿ.ಮೀ.ವಾಹನಗಳು ನಿಂತಿದ್ದವು. ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ಪರದಾಡಿದರು.
ಇದನ್ನೂ ಓದಿ: ಪ್ರೀತಿಸಿದ್ದ ಯುವತಿಗೆ ಮದುವೆ ನಿಶ್ಚಯ: ಫೇಸ್ಬುಕ್ ಲೈವ್ನಲ್ಲಿ ಕಟ್ಟರ್ ಯಂತ್ರದಿಂದ ಕತ್ತು ಕೊಯ್ದುಕೊಂಡ ಪ್ರಿಯಕರ