ETV Bharat / bharat

₹71 ಸಾವಿರದ ಸ್ಕೂಟಿಗೆ ₹15 ಲಕ್ಷದ ಫ್ಯಾನ್ಸಿ ನಂಬರ್ ಖರೀದಿಸಿದ ವ್ಯಕ್ತಿ!

ಮನುಷ್ಯನಿಗೆ ಉತ್ತಮ ಹವ್ಯಾಸಗಳು ಬೇಕು ಅಂತಾರೆ. ಕೆಲವರು ತಮ್ಮ ಹವ್ಯಾಸಕ್ಕಾಗಿ ವಿಶೇಷ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇಲ್ಲೊಬ್ಬರು ಇಂಥ ಸಂಗತಿಗಳಿಗೆ ಹೊಸ ಸೇರ್ಪಡೆ.

Honda Activa Scooty Vip number In chandigarh
ಚಂಡೀಗಢ: 71 ಸಾವಿರದ ಸ್ಕೂಟಗೆ 15ಲಕ್ಷದ ನಂಬರ್​ ಪ್ಲೇಟ್​
author img

By

Published : Apr 20, 2022, 4:38 PM IST

ಚಂಡೀಗಢ(ಪಂಜಾಬ್​): ವಾಹನಗಳಿಗೆ ವಿಐಪಿ ನಂಬರ್‌ಪ್ಲೇಟ್ ಅಥವಾ ಫ್ಯಾನ್ಸಿ ನಂಬರ್‌ಗಾಗಿ ಕೆಲವು ಜನರು ಎಷ್ಟು ಬೇಕಾದರೂ ಖರ್ಚು ಮಾಡಲು ಸಿದ್ಧರಿರುತ್ತಾರೆ. ಚಂಡೀಗಢದಲ್ಲೋರ್ವ ವ್ಯಕ್ತಿ 15 ಲಕ್ಷ ರೂ ಕೊಟ್ಟು ಫ್ಯಾನ್ಸಿ ನಂಬರ್​ ಪಡೆದಿದ್ದಾರೆ. 42 ವರ್ಷದ ಬ್ರಿಜ್ ಮೋಹನ್ ತಮ್ಮ 71 ಸಾವಿರ ರೂಪಾಯಿಯ ಸ್ಕೂಟಿಗೆ ಇಷ್ಟೊಂದು ಹಣ ಕೊಟ್ಟು ಫ್ಯಾನ್ಸಿ ನಂಬರ್‌ ಪಡೆದು ಎಲ್ಲರ ಹುಬ್ಬೇರಿಸಿದ್ದಾರೆ.

ಬ್ರಿಜ್ ಮೋಹನ್ ಜಾಹೀರಾತು ವ್ಯವಹಾರ ಹೊಂದಿದ್ದು ಚಂಡೀಗಢದ ಸೆಕ್ಟರ್-23ರಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಚಂಡೀಗಢ ನೋಂದಣಿ ಮತ್ತು ಪರವಾನಗಿ ಪ್ರಾಧಿಕಾರ ಆಯೋಜಿಸಿದ್ದ ಹರಾಜಿನಲ್ಲಿ ಇವರು ಫ್ಯಾನ್ಸಿ ನಂಬರ್​ ಖರೀದಿಸಿದ್ದಾರೆ. ಅಂದಹಾಗೆ, CH01-CJ-0001 ಸಂಖ್ಯೆ​ ಪಡೆಯಲು ಇವರು ಇಷ್ಟೊಂದು ಹಣ ವ್ಯಯಿಸಿದ್ದಾರೆ.

1.5 ಕೋಟಿ ಗಳಿಕೆ!: ಚಂಡೀಗಢ ನೋಂದಣಿ ಮತ್ತು ಪರವಾನಗಿ ಪ್ರಾಧಿಕಾರ ಏಪ್ರಿಲ್ 14 ರಿಂದ 16 ರವರೆಗೆ ಫ್ಯಾನ್ಸಿ ನಂಬರ್‌ಗಳ ಹರಾಜು ಪ್ರಕ್ರಿಯೆ ಹಮ್ಮಿಕೊಂಡಿತ್ತು. ಮೋಹನ್ CH01-CJ ಸರಣಿಯ ನಂಬರ್‌ಪ್ಲೇಟ್​ ಖರೀದಿಸಿದ್ದಾರೆ. ಪ್ರಾಧಿಕಾರದ ಅಧಿಕಾರಿಯೊಬ್ಬರ ಪ್ರಕಾರ, 378 ನಂಬರ್ ಪ್ಲೇಟ್‌ಗಳನ್ನು ಹರಾಜು ಮಾಡಲಾಗಿದ್ದು, ಒಟ್ಟು 1.5 ಕೋಟಿ ರೂ ಗಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ದಿಢೀರ್​ ಹೆಚ್ಚಾಯ್ತು ಕೋವಿಡ್, ಮಾಸ್ಕ್ ಕಡ್ಡಾಯ; ತಪ್ಪಿದರೆ ₹500 ದಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.