ETV Bharat / bharat

ವಿಚ್ಛೇದನ ಕೋರಿದ್ದಕ್ಕೆ ಪತ್ನಿ, ಅತ್ತೆಗೆ ಕೋರ್ಟ್​ನಲ್ಲೇ ಗುಂಡಿಟ್ಟು ಕೊಂದ ಪತಿ

author img

By

Published : Jun 7, 2022, 5:32 PM IST

Updated : Jun 7, 2022, 7:28 PM IST

ತನ್ನಿಂದ ವಿಚ್ಛೇದನ ಕೋರಿ ಕೋರ್ಟ್​ ಮೊರೆ ಹೋಗಿದ್ದಕ್ಕೆ ಪತಿಯೊಬ್ಬ ನ್ಯಾಯಾಲಯದ ಆವರಣದಲ್ಲೇ ಪತ್ನಿ, ಅತ್ತೆಯನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ನಡೆದಿದೆ.

ಕೋರ್ಟ್​ನಲ್ಲೇ ಗುಂಡಿಟ್ಟು ಕೊಂದ ಪತಿ
ಕೋರ್ಟ್​ನಲ್ಲೇ ಗುಂಡಿಟ್ಟು ಕೊಂದ ಪತಿ

ಪುಣೆ: ತನ್ನ ಪತ್ನಿ ವಿಚ್ಛೇದನಕ್ಕಾಗಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ನ್ಯಾಯಾಲಯದ ಆವರಣದಲ್ಲೇ ಪತ್ನಿ ಮತ್ತು ಅತ್ತೆಯನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಪುಣೆಯ ಶಿರೂರಿನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಪತ್ನಿ ತನ್ನಿಂದ ವಿಚ್ಛೇದನ ಕೋರಿ ಶಿರೂರಿನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆಗೆಂದು ಬಂದಿದ್ದ ವೇಳೆ, ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ, ಕ್ರುದ್ಧನಾದ ವ್ಯಕ್ತಿ ನ್ಯಾಯಾಲಯದ ಆವರಣದಲ್ಲೇ ಪತ್ನಿ ಮತ್ತು ಜೊತೆಗಿದ್ದ ಅತ್ತೆಯ ಮೇಲೆ ಗುಂಡು ಹಾರಿಸಿದ್ದಾನೆ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿ ಮಾಜಿ ಸೈನಿಕ ಎಂದು ತಿಳಿದು ಬಂದಿದೆ.

ಓದಿ: ಲವ್​ ಮ್ಯಾರೇಜ್​ ಆದ ಮಗಳು.. ವರ್ಷದ ಬಳಿಕ ಅಳಿಯನ ಗುಂಡಿಕ್ಕಿ ಕೊಂದ ಮಾವ!

Last Updated : Jun 7, 2022, 7:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.