ETV Bharat / bharat

ಪತಿ ಥಳಿಸಿದ ಪತ್ನಿ; ಕೊನೆಗೆ 7ನೇ ಮಹಡಿಯಿಂದ ತಂದೆಯನ್ನೇ ಕೆಳಕ್ಕೆ ಎಸೆದ ಪುತ್ರ!

ವ್ಯಕ್ತಿಯೊಬ್ಬನನ್ನು ಆತನ ಪತ್ನಿ ಮತ್ತು ಮಗ ಥಳಿಸಿ, ನಂತರ ಕಟ್ಟಡದ 7ನೇ ಮಹಡಿಯಿಂದ ಎಸೆದ ಘಟನೆ ಮುಂಬೈನ ಅಂಬೋಲಿ ಪ್ರದೇಶದಲ್ಲಿ ನಡೆದಿದೆ.

ವ್ಯಕ್ತಿಯನ್ನು ಕೊಂದ ಪತ್ನಿ, ಪುತ್ರ
man murdered by his wife and son in Maharashtra
author img

By

Published : Feb 12, 2022, 1:12 PM IST

ಮುಂಬೈ(ಮಹಾರಾಷ್ಟ್ರ): ಮುಂಬೈನ ಅಂಬೋಲಿ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಆತನ ಪತ್ನಿ ಮತ್ತು ಮಗ ಥಳಿಸಿ, ನಂತರ ಕಟ್ಟಡದ 7ನೇ ಮಹಡಿಯಿಂದ ಕೆಳಕ್ಕೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ. ಪತ್ನಿ ಮತ್ತು ಮಗನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ ಎಂದು ಅಂಬೋಲಿ ಪೊಲೀಸರು ತಿಳಿಸಿದ್ದಾರೆ.

53 ವರ್ಷದ ಕೇಂದ್ರ ಸರ್ಕಾರಿ ನೌಕರನನ್ನು ಅವರ ಪತ್ನಿ ಮತ್ತು ಮಗ ತಮ್ಮ ಕಟ್ಟಡದ ಏಳನೇ ಮಹಡಿಯ ಫ್ಲಾಟ್‌ನಿಂದ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್‌ಐಡಿಬಿಐ) ಅಸಿಸ್ಟೆನ್ಸ್ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಸಂತಾನ ಕೃಷ್ಣನ್ ಶೇಷಾದ್ರಿ ಅವರು ತಮ್ಮ ಮಗನ ಉನ್ನತ ವ್ಯಾಸಂಗಕ್ಕೆ ಹಣ ನೀಡಲು ನಿರಾಕರಿಸಿದ ಹಿನ್ನೆಲೆ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಮಗ ಕೆನಡಾದಲ್ಲಿ ಉನ್ನತ ವ್ಯಾಸಂಗ ಮಾಡಲು ಇಚ್ಛಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಸಂತಾನ ಕೃಷ್ಣನ್ ಶೇಷಾದ್ರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಾಯಿ-ಮಗ ಇಬ್ಬರೂ ಪೊಲೀಸರಿಗೆ ಹೇಳಿದ್ದರು. ಈ ಕುಟುಂಬವು ಅಂಧೇರಿ ಪಶ್ಚಿಮ ವಲಯದ ವೀರ ದೇಸಾಯಿ ರಸ್ತೆಯಲ್ಲಿರುವ ಎಸ್‌ಐಡಿಬಿಐ ಅಧಿಕಾರಿಗಳ ಕ್ವಾರ್ಟರ್ಸ್ ಒಂದರಲ್ಲಿ ವಾಸಿಸುತ್ತಿದೆ. ಶೇಷಾದ್ರಿ ಅವರ ಪುತ್ರ ಅರವಿಂದ್ (26) ಎರಡು ವರ್ಷಗಳ ಹಿಂದೆ ಇಂಜಿನಿಯರಿಂಗ್ ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಲು ಬಯಸಿದ್ದರು.

ಹಣದ ವಿಚಾರವಾಗಿ ನಡೆದಿತ್ತು ಜಗಳ: ಅರವಿಂದ್ ಮತ್ತು ತಾಯಿ ಜೈಶೀಲಾ, ಕೆನಡಾದಲ್ಲಿ ಉನ್ನತ ವ್ಯಾಸಂಗದ ಬಗ್ಗೆ ಶೇಷಾದ್ರಿ ಜೊತೆ ಆಗಾಗ ಹೇಳುತ್ತಿದ್ದರು. ಗುರುವಾರ ರಾತ್ರಿ ಹಣದ ವಿಚಾರವಾಗಿ ಜಗಳವಾಡಿ, ಅವರನ್ನು ಕೊಲ್ಲಲು ನಿರ್ಧರಿಸಿದ್ದಾರೆ ಎಂದು ಅಂಬೋಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನಿಖಾಧಿಕಾರಿ ಅಬ್ದುಲ್ ರೌಫ್ ಶೇಖ್ ಮಾಹಿತಿ ನೀಡಿದ್ದು, ಮುಂಜಾನೆ 4 ಗಂಟೆಯ ಸುಮಾರಿಗೆ ತಾಯಿ ಮತ್ತು ಮಗ ನಿದ್ದೆಯಲ್ಲಿದ್ದ ಶೇಷಾದ್ರಿಯನ್ನು ಥಳಿಸಲು ಪ್ರಾರಂಭಿಸಿದ್ದಾರೆ. ಅವರು ಮಲಗಿದ್ದ ಮಂಚದ ಮರದ ಅಂಚಿಗೆ ಐದರಿಂದ ಆರು ಬಾರಿ ಅವರ ತಲೆ ಜೆಜ್ಜಿದ್ದಾರೆ. ಅವರ ಕೈಯ ರಕ್ತನಾಳವನ್ನು ಕತ್ತರಿಸಿ, ಸ್ವತಃ ಶೇಷಾದ್ರಿ ಅವರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಲು ಮುಂದಾಗಿದ್ದರು.

ಆದರೆ, ಅವರನ್ನು ಅಮಾನುಷವಾಗಿ ಥಳಿಸಿದ್ದರಿಂದ ಅವರ ಮೈಮೇಲೆಲ್ಲ ರಕ್ತಗಾಯಗಳಾಗಿರುವುದನ್ನು ಮನಗಂಡ ಇಬ್ಬರು ತಮ್ಮ ಪ್ಲಾನ್ ಬದಲಿಸಿದ್ದಾರೆ. ತಾಯಿ ಮತ್ತು ಮಗ ತಮ್ಮ 7ನೇ ಮಹಡಿಯ ಬಾಲ್ಕನಿಯಿಂದ ಶೇಷಾದ್ರಿ ಅವರನ್ನು ಎಸೆದಿದ್ದಾರೆ. ಅವರ ರಕ್ತವು ಕೊಠಡಿಯಲ್ಲಿ ಚಿಮ್ಮಿತ್ತು. ನಂತರ ತಾಯಿ ಮಗ ಮನೆಯ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದ್ದಾರೆ. ನಂತರ ಕಟ್ಟಡದ ಸಿಬ್ಬಂದಿ ಶೇಷಾದ್ರಿ ಅವರು ಕಟ್ಟಡದ ಕೆಳಗೆ ಬಿದ್ದಿರುವ ವಿಚಾರವನ್ನು ಕುಟುಂಬಸ್ಥರಿಗೆ ಮುಟ್ಟಿಸಿದ್ದಾರೆ.

ಪೊಲೀಸರು ಆಗಮಿಸಿ ಪರಿಶೀಲನೆ ಕೈಗೊಂಡಿದ್ದು, ತಾಯಿ - ಮಗ ಇಬ್ಬರೂ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಶೇಷಾದ್ರಿ ಅವರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ ಎಂದು ಅಬ್ದುಲ್ ರೌಫ್ ಶೇಖ್ ತಿಳಿಸಿದರು. ವಿಭಿನ್ನ ಆಯಾಮಗಳಲ್ಲಿ ತನಿಖೆ ಮುಂದುವರಿದಿದ್ದು, ಸದ್ಯ ತಾಯಿ ಮಗನನ್ನು ಬಂಧಿಸಲಾಗಿದೆ.

ಇದನ್ನು ಓದಿ:ಸೌರವ್ ಗಂಗೂಲಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ 'ಸುಳ್ಳು'... ನಾರಾಯಣ ಹೆಲ್ತ್​ ಸಿಟಿ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.