ಶಿವಗಂಗೈ(ತಮಿಳುನಾಡು): ಪೊಂಗಲ್ ಹಬ್ಬದ ಆಚರಣೆಯ ವೇಳೆ ತಮಿಳುನಾಡಿನ ಶಿವಗಂಗೈ ಜಿಲ್ಲೆಯ ಕಂಡುಪಟ್ಟಿಯಲ್ಲಿ ನಡೆದ ಮಂಜುವಿರಟ್ಟು ಸ್ಪರ್ಧೆಯಲ್ಲಿ ಹೋರಿ ತಿವಿತಕ್ಕೆ ವ್ಯಕ್ತಿಯೊಬ್ಬ ಬಲಿಯಾಗಿರುವ ಘಟನೆ ಮಂಗಳವಾರ ನಡೆದಿದೆ.
ಧಾರ್ಮಿಕ ಸೌಹಾರ್ದತೆ ಬೆಸೆಯಲು ಶಿವಗಂಗೈಯ ಸಂತ ಆ್ಯಂಟೋನಿ ಚರ್ಚ್ನಲ್ಲಿ ಪೊಂಗಲ್ ಆಚರಣೆ ಏರ್ಪಡಿಸಲಾಗಿತ್ತು. ಈ ವೇಳೆ ತಮಿಳುನಾಡಿನ ಸಾಂಸ್ಕೃತಿಕ ಆಟವಾದ ಮಂಜುವಿರಾಟ್ಟು ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು. ಸ್ಪರ್ಧೆ ನೋಡಲು ಸಾವಿರಾರು ಜನರು ಜಮಾಯಿಸಿದ್ದರು.
ಅಲ್ಲದೇ ಸ್ಪರ್ಧೆಯಲ್ಲಿ 200 ಕ್ಕೂ ಹೆಚ್ಚು ಹೋರಿಗಳಿಗೆ ಅವಕಾಶ ನೀಡಲಾಗಿತ್ತು. ಇದರಲ್ಲಿ 145 ಸಮೃದ್ಧವಾಗಿ ಕೊಬ್ಬಿದ ಗೂಳಿಗಳನ್ನು ಅಖಾಡಕ್ಕೆ ಇಳಿಸಲಾಗಿತ್ತು. ಆಟದ ವೇಳೆ ಗೂಳಿಯೊಂದು ವ್ಯಕ್ತಿಯನ್ನು ಗುದ್ದಿ ತೀವ್ರ ಗಾಯಗೊಳಿಸಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಪ್ರಾಣಿಗಳಿಗೂ ಮಾರಕವಾದ ಪ್ಲಾಸ್ಟಿಕ್.. ಹಸುವಿನ ಹೊಟ್ಟೆಯಲ್ಲಿತ್ತು ಬರೋಬ್ಬರಿ 20 ಕೆಜಿ ಪ್ಲಾಸ್ಟಿಕ್!