ಸೂರ್ಯಪೇಟ್(ತೆಲಂಗಾಣ): ಕಾಗೆ ಕೂರುವುದಕ್ಕೂ ಟೊಂಗೆ ಮುರಿಯುವುದಕ್ಕೂ ಸರಿಯಾಯ್ತು ಅಂತ ಇದಕ್ಕೇ ಹೇಳಿರಬೇಕು. ಕೆಲವೊಮ್ಮೆ ಅದೃಷ್ಟ ಕೈಕೊಟ್ಟರೆ ಕುದಾ ಕ್ಯಾ ಕರೇಗಾ? ಎಂಬ ಮಾತಿನಂತೆ ಮಟನ್ ತಿನ್ನುತ್ತಿದ್ದಾಗ ಮೂಳೆ ಗಂಟಲಲ್ಲಿ ಸಿಲುಕಿಕೊಂಡು ಇಲ್ಲೊಬ್ಬ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ. ಈ ಘಟನೆ ತೆಲಂಗಾಣದ ಸೂರ್ಯಪೇಟ್ನಲ್ಲಿ ನಡೆದಿದೆ.
ಸೂರ್ಯಪೇಟ್ ಜಿಲ್ಲೆಯ ರಾಜನಾಯಕ್ ತಾಂಡಾದಲ್ಲಿ ಕಳೆದ ಎರಡು ದಿನಗಳ ಹಿಂದೆ ಘಟನೆ ನಡೆದಿದೆ. ಭೂಕ್ಯ ಗೋಪಿ ಎಂಬಾತನ ನಿವಾಸದಲ್ಲಿ ಮುತ್ಯಾಲಮ್ಮನ ಹಬ್ಬ ಮಾಡ್ತಿದ್ರು. ಈ ವೇಳೆ ಕುರಿ ಮಾಂಸ ಬೇಯಿಸಿ ದೇವಿಗೆ ನೈವೇದ್ಯ ಮಾಡಿ, ತದನಂತರ ಕುಟುಂಬ ಸದಸ್ಯರು ಒಟ್ಟಿಗೆ ಕುಳಿತು ಊಟ ಮಾಡ್ತಿದ್ದರು. ಗೋಪಿ ಗಂಟಲಲ್ಲಿ ಮಟನ್ ಪೀಸ್ನ ಮೂಳೆ ಸಿಕ್ಕಿಕೊಂಡಿದೆ.
ಇದನ್ನೂ ಓದಿ: ಮಧ್ಯಪ್ರದೇಶದ ಕಾಲೇಜುಗಳಲ್ಲಿ 'ಭಗವದ್ಗೀತೆ' ಪಾಠ ಅಳವಡಿಸಲು ಚಿಂತನೆ
ಕುಟುಂಬಸ್ಥರು ಆತನನ್ನು ತಕ್ಷಣವೇ ಅಸ್ಪತ್ರೆಗೆ ದಾಖಲು ಮಾಡಿದ್ದಾರೆ. ದುರಾದೃಷ್ಟವಶಾತ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವೇಳೆಯೇ ಆತ ಸಾವಿಗೀಡಾಗಿದ್ದಾನೆ. ಹಬ್ಬದ ಸಂಭ್ರಮದಲ್ಲಿದ್ದ ಮನೆಯಲ್ಲಿ ಶೋಕ ಮಡುಗಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಗೋಪಿ ಪುತ್ರ ಸುರೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.