ETV Bharat / bharat

ಸಾಧನೆಯ ಶಿಖರ: ಎವರೆಸ್ಟ್​ ಬೇಸ್​ ಕ್ಯಾಂಪ್​ ಹತ್ತಿಳಿದ ಹೃದ್ರೋಗಿ, ಲಿಮ್ಕಾ ದಾಖಲೆ - ಎವರೆಸ್ಟ್​ ಶಿಖರದ ಬೇಸ್​ ಕ್ಯಾಂಪ್

ಹೃದ್ರೋಗಿಯಾದರೂ ಮರಗಟ್ಟುವ ಚಳಿಯಲ್ಲಿ ಎವರೆಸ್ಟ್​ ಶಿಖರದ ಬೇಸ್​ ಕ್ಯಾಂಪ್​ ಅನ್ನು ಹತ್ತಿಳಿದು ಪಂಜಾಬ್​ನ ವ್ಯಕ್ತಿಯೊಬ್ಬ ಅಚ್ಚರಿಯ ಸಾಧನೆ ಮಾಡಿದ್ದಾರೆ. ಇದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ.

ಎವರೆಸ್ಟ್​ ಬೇಸ್​ ಕ್ಯಾಂಪ್​ ಹತ್ತಿಳಿದ ಹೃದ್ರೋಗಿ

author img

By

Published : Jun 1, 2023, 4:05 PM IST

ಲೂಧಿಯಾನ: ಅನಾರೋಗ್ಯದ ಕಾರಣಕ್ಕಾಗಿ ಎಷ್ಟೋ ಜನರು ಹಾಸಿಗೆ ಹಿಡಿದು ಅಲ್ಲಿಯೇ ಜೀವನ ಮುಗಿಸುತ್ತಾರೆ. ಅಂತಹ ಜನರ ಮಧ್ಯೆ ಇವರು ವಿಶೇಷ ಮತ್ತು ಅಪರೂಪ. ಹೃದ್ರೋಗಿಯಾಗಿದ್ದರೂ ಛಲಬಿಡದೇ ಎವರೆಸ್ಟ್​ ಶಿಖರದ ಬೇಸ್​ ಕ್ಯಾಂಪ್​ ಹತ್ತಿಳಿದಿದ್ದಾರೆ. ಇವರ ಈ ಸಾಹಸವೀಗ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ.

ಎವರೆಸ್ಟ್​ ಬೇಸ್​ ಕ್ಯಾಂಪ್​ ಬಳಿ ಹೃದ್ರೋಗಿ ನವೀನ್​

ಬರೀ ಸಾಹಸವಲ್ಲ, ಈ ದುಸ್ಸಾಹದ ಮಾಡಿದವರ ಹೆಸರು ನವೀನ್​ ಮಿತ್ರಾ. ಇವರ ವಯಸ್ಸು 62. ಪಂಜಾಬ್​ನ ಲೂಧಿಯಾನದವರು. ಹೃದ್ರೋಗಿಗಳಿಗೆ ಎವರೆಸ್ಟ್​ ಶಿಖರ ಹತ್ತಲು ನಿಷೇಧವಿದ್ದರೂ ತಮಗಿದ್ದ ಕನಸನ್ನು ಈಡೇರಿಸಿಕೊಳ್ಳಲು ಜೀವವನ್ನೇ ಪಣಕ್ಕಿಟ್ಟು ಹಿಮಶಿಖರದ ಬೇಸ್​ಕ್ಯಾಂಪ್​ವರೆಗೆ ತೆರಳಿ ವಾಪಸ್​ ಬಂದಿದ್ದಾರೆ. ಇವರ ಈ ಸಾಹಸಕ್ಕೆ ಕುಟುಂಬಸ್ಥರು ಮತ್ತು ಊರಿನ ಜನರು ಅಚ್ಚರಿಯ ಜೊತೆಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

ಎವರೆಸ್ಟ್​ ಬೇಸ್​ ಕ್ಯಾಂಪ್​ ಹತ್ತಿಳಿದ ಹೃದ್ರೋಗಿ
ಎವರೆಸ್ಟ್​ ಬೇಸ್​ ಕ್ಯಾಂಪ್​ ಹತ್ತಿಳಿದ ಹೃದ್ರೋಗಿ

2016 ರಲ್ಲಿ ಬೈಪಾಸ್​ ಸರ್ಜರಿ: ನವೀನ್​ ಮಿತ್ರಾರ ಹೃದಯದ ಒಂದು ಭಾಗವು 100 ಪ್ರತಿಶತದಷ್ಟು ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ಹೀಗಾಗಿ ಅವರಿಗೆ 2016 ರಲ್ಲಿ ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ವೈದ್ಯರು ಹತ್ತು ಹಲವು ಆರೋಗ್ಯದ ಎಚ್ಚರಿಕೆಗಳನ್ನು ನೀಡಿದ್ದರು. ಸೂಕ್ಷ್ಮ ಜೀವನ ನಡೆಸಬೇಕು ಎಂಬುದು ಮೊದಲ ಕರಾರಾಗಿತ್ತು. ಆದರೆ, ಇದನ್ನೆಲ್ಲ ಮೆಟ್ಟಿನಿಂತ ನವೀನ್​, ತಮ್ಮಲ್ಲಿರುವ ಆತ್ಮಶಕ್ತಿಯಿಂದ ಸಾಹಸಗಳಿಗೆ ಕೈ ಹಾಕುತ್ತಿದ್ದರು. ಹುಚ್ಚು ಸಾಹಸಿಗ ನವೀನ್​, ಮೇ 22 ರಂದು ಹಿಮಶಿಖರದ ಚಾರಣ ಆರಂಭಿಸಿದರು. ಅನಾರೋಗ್ಯವನ್ನೂ ಲೆಕ್ಕಿಸದೇ ಎವರೆಸ್ಟ್​ನ ಬೇಸ್ ಕ್ಯಾಂಪ್ ಅನ್ನು ಹತ್ತಿ ಮೇ 28 ರಂದು ಮರಳಿದರು. ಇದಾದ ಬಳಿಕ ಲಡಾಖನ್​ನ ಮತ್ತೊಂದು ಬೆಟ್ಟವನ್ನು ಹತ್ತಬೇಕು ಎಂಬುದು ಅವರ ಆಸೆಯಾಗಿತ್ತು. ಆದರೆ, ಭಾರತ ಸರ್ಕಾರ ಅದರ ಚಾರಣವನ್ನು ನಿಷೇಧಿಸಿದೆ. ಹೀಗಾಗಿ ಅವರು ಕನಸು ಈಡೇರಲಿಲ್ಲ.

ಮನಸ್ಸಿದ್ದರೆ ಸಾಧನೆ: ತಮ್ಮ ಸಾಹಸದ ಬಗ್ಗೆ ಮಾತನಾಡಿರುವ ನವೀನ್ ಮಿತ್ರಾ, 62ರ ಹರೆಯದಲ್ಲೂ ಅರ್ಧ ಗಂಟೆಯಲ್ಲಿ 5 ಕಿ.ಮೀ ಓಡುವ ಸಾಮರ್ಥ್ಯ ಹೊಂದಿದ್ದೇನೆ. ಎವರೆಸ್ಟ್​ಗೆ ಶಿಖರ ಹತ್ತಬೇಕು ಎಂದಾಗ ಮನೆಯವರು ಭಯಗೊಂಡಿದ್ದರು. ಆದರೆ, ವೈದ್ಯರ ಸಲಹೆ ಪಡೆದು ದೇಹ ಮನಸ್ಸನ್ನು ಸಿದ್ಧಪಡಿಸಿ ನಂತರ ಎವರೆಸ್ಟ್ ಬೇಸ್ ಕ್ಯಾಂಪ್ ಹತ್ತಿಳಿದೆ. ಇದಕ್ಕೆ ನನ್ನ ಕುಟುಂಬ ಸಂಪೂರ್ಣ ಬೆಂಬಲ ನೀಡಿತು ಎಂದು ಹೇಳಿದರು.

ಅದರಲ್ಲೂ ನನ್ನ ಪತ್ನಿ ನೀಲಂ ಅವರು ತುಂಬಾ ಹೆದರಿದ್ದರು. ಕಾರಣ ಹಿಮಶಿಖರ ಹತ್ತುವಾಗ ಹೃದಯದ ಮೇಲೆ ಪರಿಣಾಮ, ಆಮ್ಲಜನಕದ ಕೊರತೆ ಕಾಡುವ ಭಯವಿತ್ತು. ಶಿಖರ ಚಾರಣ ವೇಳೆ ಪ್ರತಿದಿನ ಕರೆ ಮಾಡುತ್ತಿದ್ದೆ. ನೆಟ್‌ವರ್ಕ್ ಕೊರತೆಯಿಂದ ಫೋನ್ ರೀಚ್​ ಆಗದಿದ್ದಾಗ, ಭಯಗೊಂಡಿದ್ದರು. ಆದರೆ, ಎಲ್ಲ ಸವಾಲುಗಳನ್ನು ಮೀರಿ ಶಿಖರಸಾಧನೆ ಮಾಡಿದ್ದು, ಥ್ರಿಲ್​ ತಂದಿದೆ ಎಂದು ನವೀನ್​ ಹೇಳಿದರು.

ಇದಕ್ಕೂ ಮೊದಲು ಅಂದರೆ, 2003 ರಲ್ಲಿ ನವೀನ್​ ಮೋಟಾರ್​ ಸೈಕಲ್​ ಅನ್ನು ಹಿಮದ ಅತಿ ಎತ್ತರದ ಪ್ರದೇಶಕ್ಕೆ ಓಡಿಸಿ ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​ ಮಾಡಿದ್ದರು. ಇದಾದ ಬಳಿಕ ಅವರು ಕಾಲ್ನಡಿಗೆಯಲ್ಲಿ ಶಿಖರ ಹತ್ತಬೇಕೆಂಬ ಗುರಿ ಹೊಂದಿದ್ದರು. ಇದೀಗ ಹಿಮಶಿಖರ ಹತ್ತಿಳಿದು, ತನ್ನಂಥಹ ಹಲವರಿಗೆ ಮಾದರಿಯಾಗಿದ್ದಾರೆ. ಏನನ್ನಾದರೂ ಸಾಧಿಸಬೇಕೆಂಬ ಮನಸ್ಸಿದ್ದರೆ ಎಂಥದ್ದೇ ಸವಾಲು ಎದುರಿಸಬೇಕು ಎಂಬುದು ನವೀನ್​ರ ಸಲಹೆ.

ಓದಿ: ಮಣಿಪುರ ಹಿಂಸಾಚಾರ: ನಿವೃತ್ತ ನ್ಯಾಯಾಧೀಶರ ಸಮಿತಿಯಿಂದ ತನಿಖೆ, ನಾಳೆಯಿಂದ ಕೂಂಬಿಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.