ETV Bharat / bharat

ಇಸ್ರೇಲ್‌ ಮೇಲೆ ಹಮಾಸ್‌ನ ಕ್ಷಿಪಣಿ ದಾಳಿಯಲ್ಲಿ ಕೇರಳದ ಮಹಿಳಾ ನರ್ಸ್​ಗೆ ಗಾಯ...

author img

By ETV Bharat Karnataka Team

Published : Oct 10, 2023, 9:58 AM IST

ಇಸ್ರೇಲ್‌ ಮೇಲೆ ಹಮಾಸ್‌ನ ಕ್ಷಿಪಣಿ ದಾಳಿ ಮಾಡಿದ್ದು, ಈ ವೇಳೆ ಕೇರಳದ ಮಹಿಳಾ ನರ್ಸ್​ ಗಾಯಗೊಂಡಿದ್ದಾರೆ.

Malayali woman nurse
ಇಸ್ರೇಲ್‌ ಮೇಲೆ ಹಮಾಸ್‌ನ ಕ್ಷಿಪಣಿ ದಾಳಿಯಲ್ಲಿ ಕೇರಳದ ಮಹಿಳಾ ನರ್ಸ್​ಗೆ ಗಾಯ...

ಶ್ರೀಕಂದಪುರಂ (ಕೇರಳ): ಇಸ್ರೇಲ್‌ನಲ್ಲಿ ಹಮಾಸ್ ಕ್ಷಿಪಣಿ ದಾಳಿಗೆ ಕೇರಳ ಮಹಿಳಾ ನರ್ಸ್ ಗಾಯಗೊಂಡಿದ್ದಾರೆ. ಕಣ್ಣೂರು ಜಿಲ್ಲೆಯ ಶ್ರೀಕಂದಪುರಂ ಮೂಲದ ಶೀಜಾ ಆನಂದ್ (41) ಪತಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದ ವೇಳೆಯಲ್ಲಿ ಗಾಯಗೊಂಡಿದ್ದಾರೆ.

ಶನಿವಾರ (ಅಕ್ಟೋಬರ್​ 7ರಂದು) ಮಧ್ಯಾಹ್ನ 12 ಗಂಟೆಗೆ ಅಪಘಾತ ಸಂಭವಿಸಿದೆ. ಈ ವೇಳೆ ಶೀಜಾ ತನ್ನ ಪತಿ ಆನಂದ್ ಜೊತೆ ವಿಡಿಯೋ ಕಾಲ್ ಮಾಡುತ್ತಿದ್ದಳು. ಹೊರಗೆ ಜೋರಾದ ಶಬ್ದ ಕೇಳಿಸಿತು ಎಂದು ಹೇಳಿದ ಕೂಡಲೇ ಫೋನ್ ಸಂಭಾಷಣೆ ಕಟ್​ ಆಗಿದೆ.

ನಂತರ ಕುಟುಂಬದವರು ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಆಕೆ ಕೆಲಸ ಮಾಡುವ ಮನೆಯವರೂ ಗಾಯಗೊಂಡಿದ್ದಾರೆ. ಶೀಜಾ ಅವರ ಕಾಲು ಮತ್ತು ಕೈಗೆ ಗಾಯವಾಗಿದೆ. ಸದ್ಯ ಶೀಜಾ ಆನಂದ್ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಶೀಜಾ ಅವರ ಎಡ ಎದೆ, ಬಲ ಭುಜ, ಬಲಗಾಲು ಮತ್ತು ಹೊಟ್ಟೆಯ ಮೇಲೆ ಗಾಯಗಳಾಗಿವೆ. ನೇರ ಕ್ಷಿಪಣಿ ದಾಳಿಯಲ್ಲಿ ಶೀಜಾ ಗಾಯಗೊಂಡಿರುವ ಮಾಹಿತಿ ಸಂಬಂಧಿಕರಿಗೆ ಸಿಕ್ಕಿದೆ. ಶೀಜಾ ಇಸ್ರೇಲ್​ನಲ್ಲಿ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದರು.

ಸಂಬಂಧಿರಾದ ದೇವನ್ ಮಾತನಾಡಿ, ಶನಿವಾರ ಮಧ್ಯಾಹ್ನ ಶೀಜಾ ಮತ್ತು ಆಕೆಯ ಪತಿ ಆನಂದ್ ವಿಡಿಯೋ ಕಾಲ್ ಮಾಡಿದ್ದರು. ಇದ್ದಕ್ಕಿದ್ದಂತೆ ವಿಡಿಯೋ ಕಾಲ್ ಕಟ್ ಆಗಿದೆ. ಇಸ್ರೇಲ್‌ನಲ್ಲಿರುವ ಶೀಜಾ ಸ್ನೇಹಿತೆ ಸಂಜೆ 6 ಗಂಟೆ ಸುಮಾರಿಗೆ ದಾಳಿಯಲ್ಲಿ ಗಾಯಗೊಂಡಿರುವ ಬಗ್ಗೆ ಮಾಹಿತಿ ನೀಡಿದರು. ಶೀಜಾ ಆಸ್ಪತ್ರೆಯಲ್ಲಿದ್ದಾರೆ, ಶಸ್ತ್ರಚಿಕಿತ್ಸೆ ಮುಗಿದಿದೆ, ಯಾವುದೇ ತೊಂದರೆ ಇಲ್ಲ ಎಂದು ಆಕೆಯ ಸ್ನೇಹಿತೆ ತಿಳಿಸಿದ್ದಾರೆ. ಅವರು ನಿನ್ನೆ ಕರೆ ಮಾಡಿ ಅವರು ಚೆನ್ನಾಗಿದ್ದಾರೆ ಎಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇಸ್ರೇಲ್-ಹಮಾಸ್ ಯುದ್ಧದಲ್ಲಿ ಸತ್ತವರ ಸಂಖ್ಯೆ ಈಗಾಗಲೇ ಸಾವಿರ ದಾಟಿದೆ. ದಾಳಿಯಲ್ಲಿ 413 ಪ್ಯಾಲೆಸ್ಟೀನಿಯರು ಮತ್ತು 700 ಇಸ್ರೇಲಿಗಳು ಮೃತಪಟ್ಟಿದ್ದಾರೆ. ಹಮಾಸ್ ವಿರುದ್ಧ ಇಸ್ರೇಲ್ ಕೂಡ ತನ್ನ ಆಕ್ರಮಣವನ್ನು ಮುಂದುವರಿಸಿದೆ.

ಹಮಾಸ್ ಹಣಿಯಲು ಮುಂದಾದ ಇಸ್ರೇಲ್, 3 ಲಕ್ಷ ಸೈನಿಕರು ಸಿದ್ಧ: ಇಸ್ರೇಲ್​ ಮೇಲೆ ದಾಳಿ ನಡೆಸಿ ನೂರಾರು ಜನರ ಸಾವಿಗೆ ಕಾರಣವಾದ ಹಮಾಸ್​ಗೆ ಇಸ್ರೇಲ್ ಖಡಕ್​ ಎಚ್ಚರಿಕೆ ಕೊಟ್ಟಿದೆ. ಹಮಾಸ್​ನ ಏಟಿಗೆ ಎದಿರೇಟು ನೀಡಲು ಇಸ್ರೇಲ್​ ಬರೋಬ್ಬರಿ 3 ಲಕ್ಷ ಯೋಧರನ್ನು ಒಳಗೊಂಡ ತುಕಡಿ ಸಿದ್ದಗೊಳಿಸಿದೆ. ಇಸ್ರೇಲ್​ನ ಈ ಸಿದ್ಧತೆಯು 1973ರ ಯೋಮ್ ಕಿಪ್ಪೂರ್ ಯುದ್ಧದ ಬಳಿಕ ಅತಿ ದೊಡ್ಡ ಸಜ್ಜುಗೊಳಿಸುವಿಕೆ ಇದಾಗಿದೆ. "ಇಸ್ರೇಲ್ ಪ್ರಸ್ತುತ ಯುದ್ಧದಲ್ಲಿದೆ. ಆದರೆ, ನಾವಾಗಿಯೇ ಈ ಯುದ್ಧವನ್ನು ಬಯಸಿರಲಿಲ್ಲ. ಇದು ಅತ್ಯಂತ ಕ್ರೂರ ಹಾಗೂ ಘೋರ ರೀತಿಯಲ್ಲಿ ನಮ್ಮ ಮೇಲೆ ದಾಳಿ ನಡೆಸಲಾಗಿದೆ. ಆದರೆ, ಈ ಯುದ್ಧವನ್ನು ಇಸ್ರೇಲ್ ಆರಂಭಿಸದಿದ್ದರೂ ಕೂಡ ಘೋರ ಅಂತ್ಯ ಮಾಡುತ್ತದೆ" ಎಂದು ಇಸ್ರೇಲ್​ ಪ್ರಧಾನಿ ನೆತನ್ಯಾಹು ಹಮಾಸ್​ಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: "ಯುದ್ದಕ್ಕೆ ಮುನ್ನುಡಿ ಹಾಡದಿದ್ದರೂ, ಅಂತ್ಯ ನಮ್ಮಿಂದಲೇ": ಹಮಾಸ್ ಮಟ್ಟಹಾಕಲು​ ಸಿಡಿದೆದ್ದ ಇಸ್ರೇಲ್​ನ 3 ಲಕ್ಷ ಸೈನಿಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.