ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶವನ್ನು ಇತ್ತೀಚೆಗೆ ಪ್ರಕಟಿಸಲಾಗಿದೆ. ಫಲಿತಾಂಶ ಪ್ರಕಟವಾದ ಬಳಿಕ ಅನೇಕ ಭಾಗಗಳಲ್ಲಿ ವಿಭಿನ್ನವಾಗಿ ಸಂಭ್ರಮಾಚರಣೆ ನಡೆಯಿತು.
ಚುನಾವಣೆಯಲ್ಲಿ ಗೆದ್ದ ಪತಿಯನ್ನ ಹೆಗಲ ಮೇಲೆ ಹೊತ್ತುಕೊಂಡ ಮಹಿಳೆ: ಸಾಮಾನ್ಯವಾಗಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಯನ್ನು ಅಭಿಮಾನಿಗಳು ಮತ್ತು ಕಾರ್ಯಕರ್ತರು ಭುಜದ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡುತ್ತಾರೆ. ಆದರೆ ಒಬ್ಬ ಮಹಿಳೆ ತನ್ನ ಗಂಡನನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ನಡೆಸುವ ಮೂಲಕ ಸಂಭ್ರಮಪಟ್ಟಿದ್ದಾಳೆ. ಈ ಘಟನೆ ನಡೆದಿರುವುದು ಪುಣೆಯ ಪಲು ಗ್ರಾಮದಲ್ಲಿ. ಖೇಡ್ ತಾಲೂಕಿನ ಗುಡ್ಡಗಾಡು ಪ್ರದೇಶದ ಪಾಲು ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸಂತೋಷ್ ಶಂಕರ್ ಗುರವ್ ಅವರು ಜಯಭೇರಿ ಬಾರಿಸಿದ್ದಾರೆ. ಈ ವೇಳೆ ಪತ್ನಿ ರೇಣುಕಾ ಗುರವ್ ತನ್ನ ಪತಿಯನ್ನು ಹೆಗಲ ಮೇಲೆ ಹೊತ್ತು ಸಂಭ್ರಮಪಟ್ಟಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡು ಈಕೆಯ ಜೊತೆಗೆ ಕಾರ್ಯಕರ್ತರೂ ಆಗಮಿಸಿ, ಜಯಘೋಷ ಕೂಗಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಕ್ರಿಕೆಟ್ ಮೈದಾನದಲ್ಲಿ ಅಂತ್ಯ ಕಂಡ ಅಭ್ಯರ್ಥಿ, ಚುನಾವಣೆಯಲ್ಲಿ ಗೆಲುವು: ತಸ್ಗಾಂವ್ ತಾಲೂಕಿನ ಧವಲಿಯ ಯುವಕ ಅತುಲ್ ಪಾಟೀಲ್ ಎಂಬವರು ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಕೆಲವು ದಿನಗಳ ಹಿಂದೆ, ಕ್ರಿಕೆಟ್ ಮೈದಾನದಲ್ಲಿ ಆಡುವಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದ ಅತುಲ್ ಗೆದ್ದಿದ್ದಾರೆ. ಇನ್ನು ಅತುಲ್ ಧವಳಿ ಗ್ರಾಮದ ಮಾಜಿ ಉಪ ಸರ್ಪಂಚ್ ಆಗಿದ್ದರು. ಅಷ್ಟೇ ಅಲ್ಲದೆ, ಔಷಧ ವ್ಯಾಪಾರಿಯಾಗಿದ್ದ ಅತುಲ್, ರಸಾಯನಶಾಸ್ತ್ರಜ್ಞರ ಸಂಘದ ಸದಸ್ಯರೂ ಆಗಿದ್ದರು. ಇನ್ನು ರಸಾಯನಶಾಸ್ತ್ರಜ್ಞರ ಸಂಘವು ಅಟ್ಪಾಡಿಯಲ್ಲಿ ಪ್ರತಿವರ್ಷವೂ ಕ್ರಿಕೆಟ್ ಸ್ಪರ್ಧೆಗಳನ್ನು ಆಯೋಜಿಸುತ್ತಿತ್ತು. ಈ ಪಂದ್ಯಾವಳಿಯಲ್ಲಿ ತಸ್ಗಾಂವ್ ತಾಲೂಕು ತಂಡದ ಪರ ಅತುಲ್ ಆಡುತ್ತಿದ್ದರು. ಆಟದ ಸಮಯದಲ್ಲಿ ವಿಕೆಟ್ ತೆಗೆದುಕೊಳ್ಳುವಾಗ ಅತುಲ್ ಹೃದಯಾಘಾತದಿಂದ ನಿಧನರಾದರು. ಘಟನೆಯ ವಿಡಿಯೋ ಸಹ ವೈರಲ್ ಆಗಿದೆ. ಇನ್ನು ಧವಳಿ ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ಸೋಮವಾರ ಹೊರಬಿದ್ದಿದೆ. ಈ ವೇಳೆ ಅತುಲ್ ಪಾಟೀಲ್ 333 ಮತಗಳಿಂದ ಜಯಗಳಿಸಿದ್ದಾರೆ. ಅತುಲ್ ಪಾಟೀಲ್ ಅವರ ಮರಣದ ನಂತರ ಚುನಾವಣೆಯ ಫಲಿತಾಂಶವನ್ನು ಘೋಷಿಸಲಾಗಿದೆ. ಆದರೆ ಸಂಭ್ರಮ ಪಡಲು ಅತುಲ್ ಪಾಟೀಲ್ ಜೀವಂತವಾಗಿಲ್ಲ.
ವಿದೇಶದಲ್ಲಿದ್ದರೂ ಚುನಾವಣೆ ಗೆದ್ದ ದಂಪತಿ: ಕಳೆದ ಎಂಟು ವರ್ಷಗಳಿಂದ ವಿದೇಶದಲ್ಲಿ ನೆಲೆಸಿರುವ ಹಿಂಗೋಲಿ-ಡಿಗ್ರಾಸ್ ವಾನಿಯ ಬುಡಕಟ್ಟು ದಂಪತಿ ಡಾ.ಅನಿಲ್ ಕುರ್ಹೆ ಮತ್ತು ಡಾ. ಚಿತ್ರ ಕುರ್ಹೆ, ಚುನಾವಣೆಯಲ್ಲಿ ಗೆದ್ದಿದ್ದಾರೆ. ಡಾ.ಚಿತ್ರಾ ಐದು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು. ಇವರ ಕುಟುಂಬವು ಜಪಾನ್ ಮತ್ತು ಸ್ವೀಡನ್‌ನಲ್ಲಿ ವಾಸಿಸುತ್ತಿದೆ. ಈ ಅವಧಿಯಲ್ಲಿ ಅವರು ನಿರಂತರವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದರು. ಈ ಸಾಮಾಜಿಕ ಸೇವೆಯೇ ಈ ಚುನಾವಣೆಯಲ್ಲಿ ಗೆಲುವು ಸಾಧಿಸಲು ಅನುಕೂಲವಾಗಿದೆ. ಡಾ. ಕುರ್ಹೆಯ ಬಹುಜನ ಅಘಾದಿ ಪ್ರಾಯೋಜಿತ ಗ್ರಾಮ ಅಭಿವೃದ್ಧಿ ಸಮಿತಿಯ ಅಭ್ಯರ್ಥಿಗಳನ್ನು ಭಾರಿ ಅಂತರದಿಂದ ಆಯ್ಕೆ ಮಾಡಿದ್ದಾರೆ. ಬಹುಜನ ಅಘಾದಿ ಬೆಂಬಲಿಗ ಗ್ರಾಮ ವಿಕಾಸ್ ಅಘಾದಿ ಪರವಾಗಿ ಕುರ್ಹೆ ಕುಟುಂಬ ರಾಜಕೀಯ ಪ್ರವೇಶಿಸಿತು. ಸರ್ಪಂಚ್ ಹುದ್ದೆಗೆ ಚುನಾವಣೆ ನೇರವಾಗಿ ನಡೆಯದಿದ್ದರೂ, ಡಾ.ಚಿತ್ರಾ ಅವರನ್ನು ಸರ್ಪಂಚ್ ಹುದ್ದೆಗೆ ಅಭ್ಯರ್ಥಿಯಾಗಿ ಘೋಷಿಸಲಾಯಿತು. ಅವರ ಸಮಿತಿಯಲ್ಲಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಅತಿ ಹೆಚ್ಚು. ಯಾವಾಗಲೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಈ ಕುಟುಂಬಕ್ಕೆ ಉತ್ತಮ ಅವಕಾಶವನ್ನು ನೀಡಿ, 9 ಸ್ಥಾನಗಳಲ್ಲಿ 8 ಸ್ಥಾನಗಳಿಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ.
ಸ್ವಚ್ಛತೆಯೊಂದಿಗೆ ವಿಜಯದ ಸಂಭ್ರಮ ನಡೆಸಿದ ಬೀಡ್ ಜನರು: ಚುನಾಯಿತರಾದ ಸದಸ್ಯರು ಸ್ವಚ್ಛತೆಗೆ ಚಾಲನೆ ನೀಡುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ. ಬೀಡ್ನ ಗ್ರಾಮ ಪಂಚಾಯತ್ ಸದಸ್ಯರು ಪೊರಕೆ ಹಿಡಿದು ಇಡೀ ಗ್ರಾಮವನ್ನು ಸ್ವಚ್ಛತೆ ಮಾಡಿದ್ದಾರೆ. ಬೀಡ್ ಜಿಲ್ಲೆಯ 111 ಗ್ರಾಮ ಪಂಚಾಯಿತಿಗಳ ಫಲಿತಾಂಶಗಳು ಸೋಮವಾರ ಹೊರಬಿದ್ದಿದೆ. ಬೀಡ್ ಜಿಲ್ಲೆಯ ಕೈಜ್ ತಾಲೂಕಿನಲ ಪೈಥಾನ್‌ನಲ್ಲಿ ಚುನಾಯಿತರಾದ ಗ್ರಾಮ ಪಂಚಾಯತ್ ಸದಸ್ಯರು ಇತರರಿಗಿಂತ ಭಿನ್ನವಾದದ್ದನ್ನು ಮಾಡಲು ಪ್ರಯತ್ನಿಸಿದರು. ಹೀಗಾಗಿ ಮೆರವಣಿಗೆಯನ್ನು ಮಾಡುವ ಬದಲು ನಿಜವಾದ ಕೆಲಸವನ್ನು ಪ್ರಾರಂಭಿಸಲು ಪ್ರಯತ್ನಿಸಿದ್ದೇವೆ ಎಂದು ಹೇಳಿದರು.