ETV Bharat / bharat

Amit Shah: ರಾಜಕೀಯವಾಗಿ 13 ಬಾರಿ ಮೇಲೆತ್ತುವ ಪ್ರಯತ್ನ ಮಾಡಿದರೂ ವಿಫಲ: ರಾಹುಲ್​ಗೆ ಕುಟುಕಿದ ಅಮಿತ್ ಶಾ - ರಾಜಕೀಯವಾಗಿ 13 ಬಾರಿ ಮೇಲೆತ್ತುವ ಪ್ರಯತ್ನ

Amit Shah criticizes Rahul Gandhi: ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿಲುವಳಿಗೆ ಗೃಹ ಸಚಿವ ಅಮಿತ್ ಶಾ ಉತ್ತರಿಸಿ, ಕಾಂಗ್ರೆಸ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

A leader launched 13 times in politics, but failed... : Amit Shah takes  dig at Rahul Gandhi
ರಾಜಕೀಯವಾಗಿ 13 ಬಾರಿ ಮೇಲೆತ್ತುವ ಪ್ರಯತ್ನ ಮಾಡಿದರೂ ವಿಫಲ.. ರಾಹುಲ್​ಗೆ ಶಾ ಕುಟುಕು
author img

By

Published : Aug 9, 2023, 9:32 PM IST

ನವದೆಹಲಿ: ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಅವರನ್ನು ರಾಜಕೀಯವಾಗಿ 13 ಬಾರಿ ಮೇಲೆತ್ತುವ ಪ್ರಯತ್ನ ಮಾಡಲಾಗಿದೆ. ಆದರೆ, ಪ್ರತಿ ಬಾರಿಯೂ ಅವರು ವಿಫಲರಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕಿಸಿದರು. ಲೋಕಸಭೆಯಲ್ಲಿಂದು ಪ್ರತಿಪಕ್ಷಗಳ ಅವಿಶ್ವಾಸ ನಿಲುವಳಿಗೆ ಉತ್ತರಿಸಿ ಮಾತನಾಡಿದ ಅಮಿತ್​ ಶಾ, "ಈಗಾಗಲೇ ಹೊತ್ತಿ ಉರಿಯುತ್ತಿರುವ ಬೆಂಕಿಗೆ ಮತ್ತೆ ಬೆಂಕಿ ಹಚ್ಚುವಲ್ಲಿ ರಾಹುಲ್ ಗಾಂಧಿ ಹೇಗೆ ಮುಂದಾಳತ್ವ ವಹಿಸಿದ್ದರು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ'' ಎಂದು ವಾಗ್ದಾಳಿ ನಡೆಸಿದರು.

''ಮಣಿಪುರವು ಜನಾಂಗೀಯ ಹಿಂಸಾಚಾರ ಇತಿಹಾಸ ಹೊಂದಿದೆ. ಇದು ಸಾಂಪ್ರದಾಯಿಕವಾಗಿ ಸೂಕ್ಷ್ಮ ರಾಜ್ಯ. ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಖಂಡನೀಯ. ಆದರೆ, ವಿಡಿಯೋ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಮೇ 4ರಂದು ಈ ವಿಡಿಯೋ ಚಿತ್ರೀಕರಿಸಲಾಗಿದೆ. ರಾಜಕೀಯ ಮಾಡಲು ಮುಂಗಾರು ಅಧಿವೇಶನಕ್ಕೆ ಮುನ್ನ ಇದನ್ನು ಬಿಡುಗಡೆ ಮಾಡಲು ಸಂರಕ್ಷಿಸಲಾಗಿತ್ತೇ'' ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Amit Shah: 'ಭ್ರಮೆ'! ಪ್ರತಿಪಕ್ಷಗಳ ಅವಿಶ್ವಾಸ ನಿಲುವಳಿಗೆ ಲೋಕಸಭೆಯಲ್ಲಿ ಅಮಿತ್​ ಶಾ ತಿರುಗೇಟು

ಮುಂದುವರೆದು, ''ಒಕ್ರಾಮ್ ಇಬೋಬಿ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಣಿಪುರದಲ್ಲಿ ಸುಮಾರು 2,000 ಜನರ ಕೊಲೆಯಾಗಿತ್ತು. ಅಲ್ಲದೇ, ಕಾಂಗ್ರೆಸ್ ಆಡಳಿತದಲ್ಲಿ ಒಂದೂವರೆ ವರ್ಷ ಕಾಲ ನಾಗಾ-ಕುಕಿ ಘರ್ಷಣೆಯನ್ನು ಮಣಿಪುರ ಕಂಡಿತ್ತು. ಆಗ 700ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. 45,000 ಜನರು ಸ್ಥಳಾಂತರಗೊಂಡಿದ್ದರು. ಆಗ ಯಾರಾದರೂ ಪ್ರಧಾನಿಯವರ ಹೇಳಿಕೆಗೆ ಬೇಡಿಕೆ ಇಟ್ಟಿದ್ದಾರಾ?. ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದು ಗೃಹ ಖಾತೆಯ ರಾಜ್ಯ ಸಚಿವರೇ ಹೊರತು ಪ್ರಧಾನಿ ಅಥವಾ ಗೃಹ ಸಚಿವರಲ್ಲ'' ಎಂದರು.

''ಜವಾಹರಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ ಸರ್ಕಾರಗಳ ಅವಧಿಯಲ್ಲಿ ಅತಿ ಹೆಚ್ಚು ಕೋಮುಗಲಭೆಗಳು ನಡೆದಿವೆ'' ಎಂದು ಹೇಳಿದ ಅಮಿತ್​ ಶಾ, ''ಈಗಿನ ಕಾಂಗ್ರೆಸ್​ ಮೈತ್ರಿಕೂಟದ ವಿರುದ್ಧವೂ ವಾಗ್ದಾಳಿ ನಡೆಸಿದರು. ''ಯುಪಿಎ ಹೆಸರು ಚೆನ್ನಾಗಿತ್ತು. ಮೈತ್ರಿಯ ಹೆಸರು ಬದಲಾಯಿಸುವ ಅಗತ್ಯವೇನಿತ್ತು?, ಯುಪಿಎ 12 ಲಕ್ಷ ಕೋಟಿ ರೂಪಾಯಿ ಹಗರಣಗಳಲ್ಲಿ ಭಾಗಿಯಾಗಿದೆ. ಬೋಫೋರ್ಸ್ ಹಗರಣ, 2ಜಿ ಸ್ಪೆಕ್ಟ್ರಂ ಹಗರಣ, ಸಿಡಬ್ಲ್ಯೂಜಿ ಹಗರಣ, ಕಲ್ಲಿದ್ದಲು ಹಗರಣ, ಆದರ್ಶ ಹಗರಣ, ನ್ಯಾಷನಲ್ ಹೆರಾಲ್ಡ್ ಹಗರಣ, ವಾದ್ರಾ ಅವರ ಡಿಎಲ್‌ಎಫ್ ಹಗರಣ, ಮೇವು ಹಗರಣಗಳಲ್ಲಿ ಭಾಗಿಯಾದವರಿಗೆ ಮೈತ್ರಿಯ ಹೆಸರು ಬದಲಾಯಿಸದೇ ಬೇರೆ ದಾರಿ ಇಲ್ಲ'' ಎಂದು ಕುಟುಕಿದರು.

''ನಾವು ಯಾವುದೇ ಹಗರಣಗಳಲ್ಲಿ ಭಾಗಿಯಾಗಿಲ್ಲ. ಆದ್ದರಿಂದ ನಮ್ಮ ಹೆಸರನ್ನು ಬದಲಾಯಿಸಬೇಕಾಗಿಲ್ಲ. ಎನ್‌ಡಿಎ ಸರ್ಕಾರ ದೇಶಕ್ಕೆ ಸ್ಥಿರ ಸರ್ಕಾರ ನೀಡುತ್ತಿದೆ'' ಎಂದರು.

ಸಿಎಂ ಬದಲಾವಣೆ ಅಗತ್ಯವಿಲ್ಲ: ''ಮಣಿಪುರ ಹಿಂಸಾಚಾರದಲ್ಲಿ ಮೇ 3ರಿಂದ ಇದುವರೆಗೆ 152 ಜನರು ಮೃತಪಟ್ಟಿದ್ದಾರೆ. ಒಬ್ಬ ರಾಜ್ಯದ ಮುಖ್ಯಮಂತ್ರಿ ಸಹಕಾರ ನೀಡದಿದ್ದಾಗ ಅವರನ್ನು ಬದಲಾಯಿಸಬೇಕಾಗುತ್ತದೆ. ಮಣಿಪುರ ಮುಖ್ಯಮಂತ್ರಿ ಕೇಂದ್ರದೊಂದಿಗೆ ಸಹಕರಿಸುತ್ತಿದ್ದಾರೆ'' ಎಂದು ಅಮಿತ್​ ಶಾ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆಯಾಗಿದೆ, ಮೋದಿ ಅಮಿತ್ ಶಾ, ಅದಾನಿ ಮಾತು ಮಾತ್ರ ಕೇಳ್ತಿದ್ದಾರೆ: ರಾಹುಲ್​ ವಾಗ್ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.