ಪರಮಕುಡಿ(ತಮಿಳುನಾಡು): ತಮಿಳುನಾಡು ವಿಧಾನಸಭೆಯಲ್ಲಿ ಡಿಎಂಕೆ ನೇತೃತ್ವದ ಸ್ಟಾಲಿನ್ ಪಕ್ಷ 150ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿದೆ. ಇದರ ಮಧ್ಯೆ ಮಹಿಳೆಯೊಬ್ಬರು ನಾಲಿಗೆ ಕತ್ತರಿಸಿಕೊಂಡು ಹರಿಕೆ ತೀರಿಸಿದ್ದಾರೆ.
ತಮಿಳುನಾಡಿನ ಪರಮಕುಡಿಯಲ್ಲಿರುವ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಮಹಿಳೆ ಪತ್ತೆಯಾಗಿದ್ದಾಳೆ. ಚುನಾವಣೆಯಲ್ಲಿ ಡಿಎಂಕೆ ಸ್ಟಾಲಿನ್ ಗೆಲುವು ಸಾಧಿಸಿದ ನಂತರ ಹರಿಕೆ ಈಡೇರಿಸಲು ಅವರು ನಾಲಿಗೆ ಕತ್ತರಿಸಿಕೊಂಡಿದ್ದಾಳೆ. 2021ರ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಗೆಲುವು ಸಾಧಿಸಿದರೆ ತಮ್ಮ ನಾಲಿಗೆ ದೇವರಿಗೆ ಹರಿಕೆ ರೂಪದಲ್ಲಿ ನೀಡುವುದಾಗಿ 32 ವರ್ಷದ ವನಿತಾ ಪ್ರತಿಜ್ಞೆ ಸ್ವೀಕರಿಸಿದ್ದರು.
ಇದನ್ನೂ ಓದಿ: ತಮಿಳುನಾಡು ಚುನಾವಣೆಯಲ್ಲಿ ಸೋತ 'ಬಂಗಾರದ ಮನುಷ್ಯ'... ಬಿದ್ದ ಮತಗಳೆಷ್ಟು?
ಇದೀಗ ಡಿಎಂಕೆ ಗೆಲುವು ಸಾಧಿಸುತ್ತಿದ್ದಂತೆ ವನಿತಾ ಇಲ್ಲಿನ ಮುತಾಲಮ್ಮನ ದೇವಸ್ಥಾನ್ಕಕೆ ಬಂದು ನಾಲಿಗೆ ಕತ್ತರಿಸಿಕೊಂಡು ದೇವರಿಗೆ ಅರ್ಪಿಸಿದ್ದಾಳೆ. ಕೋವಿಡ್ ಸಂಬಂಧಿತ ನಿರ್ಬಂಧಗಳಿಂದಾಗಿ ವನಿತಾ ದೇವಾಲಯದ ಬಾಗಿಲ ಹೊರಗೆ ತಮ್ಮ ನಾಲಿಗೆ ಇಟ್ಟಿದ್ದು, ಅಲ್ಲೇ ಕುಸಿದು ಬಿದ್ದಿದ್ದಾರೆ. ಇದೀಗ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.