ETV Bharat / bharat

ಭಿವಂಡಿಯಲ್ಲಿ ಅಗ್ನಿ ಅವಘಡ: ಲಕ್ಷಾಂತರ ರೂಪಾಯಿಯ ಪೀಠೋಪಕರಣ ಸುಟ್ಟು ಭಸ್ಮ - ಮಹಾಲಕ್ಷ್ಮೀ ಫರ್ನಿಚರ್ ಶೋರೂಂ

ಮಹಾರಾಷ್ಟ್ರದ ಭಿವಂಡಿಯಲ್ಲಿ ಪೀಠೋಪಕರಣ ಗೋದಾಮಿನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ, ಲಕ್ಷಾಂತರ ರೂಪಾಯಿಯ ಪೀಠೋಪರಣ ಸುಟ್ಟು ಭಸ್ಮವಾಗಿವೆ.

A huge fire broke out at a Mahalakshmi furniture warehouse in Bhiwandi
ಭಿವಂಡಿಯಲ್ಲಿ ಅಗ್ನಿ ಅವಘಡ: ಲಕ್ಷಾಂತರ ರೂಪಾಯಿಯ ಪೀಠೋಪಕರಣ ಭಸ್ಮ
author img

By

Published : Oct 16, 2021, 9:09 AM IST

ಭಿವಂಡಿ(ಮಹಾರಾಷ್ಟ್ರ): ಪೀಠೋಪಕರಣ ಗೋದಾಮಿನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ, ಲಕ್ಷಾಂತರ ರೂಪಾಯಿಯ ಪೀಠೋಪಕರಣ ಸುಟ್ಟು ಬೂದಿಯಾಗಿರುವ ಘಟನೆ ಮಹಾರಾಷ್ಟ್ರದ ಭಿವಂಡಿಯಲ್ಲಿ ನಡೆದಿದೆ.

ಥಾಣೆ ರಸ್ತೆಯಲ್ಲಿರುವ ಭಿವಂಡಿಯ ಕಶೆಲಿ ಟೋಲ್ ನಾಕಾ ಬಳಿಯಿರುವ ಮಹಾಲಕ್ಷ್ಮಿ ಫರ್ನಿಚರ್ ಎಂಬ ಬೃಹತ್​ ಶೋರೂಂ ಇದ್ದು, ಮಧ್ಯರಾತ್ರಿ ಸುಮಾರಿಗೆ ಇಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲವು ಸಮಯದ ನಂತರ ಅಕ್ಕಪಕ್ಕದ ಗೋದಾಮುಗಳಿಗೂ ಕೂಡಾ ಬೆಂಕಿ ಹರಡಿದೆ ಎಂದು ಹೇಳಲಾಗುತ್ತಿದೆ.

ಅಗ್ನಿ ಅವಘಡ

ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ನಾಲ್ಕೈದು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿವೆ. ಅಗ್ನಿ ಅವಘಡ ಉಂಟಾಗಲು ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಆ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: ಪಾಕ್ ಗುಪ್ತಚರ ಇಲಾಖೆಗೆ ಸೇನಾ ಮಾಹಿತಿ ರವಾನಿಸಿದ್ದ ಆರೋಪಿಗೆ ಪೊಲೀಸ್ ಕಸ್ಟಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.