ಡುಂಗರ್‌ಪುರ(ರಾಜಸ್ಥಾನ): ರಾಜಸ್ಥಾನದ ಆಸ್ಪುರ್ ಪೊಲೀಸರು ಭಾರಿ ಸ್ಫೋಟಕಗಳನ್ನು ಪತ್ತೆ ಹಚ್ಚಿದ್ದಾರೆ. 186 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದು, ಭಾರಿ ಪ್ರಮಾಣದ ಅನಾಹುತವಾಗುವ ಪತ್ತೆ ಹಚ್ಚಿ ಉತ್ತಮ ಕೆಲಸ ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಫೋಟಕಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ಸಂಜೆ ಗಡ ನಾಥಾಜಿ ಗ್ರಾಮದ ಕೆಲವರು ಭಬರಾನ ಸೇತುವೆಯ ಮೂಲಕ ಹಾದು ಹೋಗುತ್ತಿದ್ದರು. ಆ ಸಮಯದಲ್ಲಿ ಸೇತುವೆಯ ಕೆಳಗಿರುವ ಸೋಮ್ ನದಿಯಲ್ಲಿ ಕೆಲವು ರಟ್ಟಿನ ಪೆಟ್ಟಿಗೆಗಳು ಕಂಡು ಬಂದಿದ್ದವು. ತಕ್ಷಣ ಕೆಲವರು ಆಸ್ಪುರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಈ ಮಾಹಿತಿ ಆಧರಿಸಿ ಆಸ್ಪುರ್ ಪೊಲೀಸ್ ಅಧಿಕಾರಿ ಸವಾಯಿ ಸಿಂಗ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದೆವು ಎಂದು ಆಸ್ಪುರ್ ಎಸ್‌ಎಚ್‌ಒ ಸವಾಯಿ ಸಿಂಗ್ ಮಾಹಿತಿ ನೀಡಿದ್ದಾರೆ.
ಪೆಟ್ಟಿಗೆಯಲ್ಲಿ ಸ್ಫೋಟಕ ಸಾಮಗ್ರಿಗಳನ್ನು ತುಂಬಿಸಲಾಗಿದ್ದು, ನೀರಿನಿಂದಾಗಿ ಸ್ಫೋಟಕಗಳು ಹಾಳಾಗಿವೆ. ಸ್ಫೋಟಕಗಳನ್ನು ನೀರಿನಿಂದ ಹೊರತೆಗೆಯಲಾಗಿದ್ದು, ಅದರಲ್ಲಿ 186 ಕೆಜಿ ತೂಕದ ಜಿಲಾಟಿನ್‌ನ ಸಣ್ಣ ಚೆಂಡುಗಳು ಪತ್ತೆಯಾಗಿವೆ ಎಂದು ಹೇಳಿರುವ ಎಚ್ಎಚ್ಒ, ಏಳು ಚೀಲಗಳಲ್ಲಿ ಈ ಸ್ಫೋಟಕಗಳನ್ನು ಠಾಣೆಗೆ ತೆಗೆದುಕೊಂಡು ಹೋಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ಮಾಡಲಾಗುವುದು ಎಂದಿದ್ದಾರೆ.
ಇದನ್ನು ಓದಿ: ಶೇಂಗಾದಿಂದ ಪಿಸ್ತಾ ಮಾಡಿ ಮಾರಾಟ.. ಕಾರ್ಖಾನೆ ಮೇಲೆ ದಾಳಿ, ₹12 ಲಕ್ಷ ಮೌಲ್ಯದ ಸರಕು ವಶ