ETV Bharat / bharat

ಕೇರಳದಲ್ಲಿ ಹದಿಹರೆಯದ ಬಾಲಕಿ ಕತ್ತು ಸೀಳಿ ಕೊಲೆ: ಪ್ರಿಯಕರ ಪೊಲೀಸ್​ ವಶಕ್ಕೆ - ಕೇರಳದಲ್ಲಿ ಕತ್ತು ಸೀಳಿ ಹದಿಹರೆಯದ ಬಾಲಕಿ ಕೊಲೆ

ಕೇರಳದಲ್ಲಿ ಕತ್ತು ಸೀಳಿ ಹದಿಹರೆಯದ ಬಾಲಕಿ ಕೊಲೆ - ಲವ್​ ಬ್ರೇಕ್ ​ಅಪ್​ ವಿಚಾರವಾಗಿ ಜಗಳ - ಬಾಲಕಿ ಪ್ರೀತಿಸುತ್ತಿದ್ದಳು ಎನ್ನಲಾದ ಆಕೆಯ ಸ್ನೇಹಿತ ಪೊಲೀಸ್​ ವಶಕ್ಕೆ

girl murder
ಬಾಲಕಿ ಕೊಲೆ
author img

By

Published : Dec 28, 2022, 1:11 PM IST

ತಿರುವನಂತಪುರಂ: ಮನೆಯ ಹೊರಗಡೆ ಕತ್ತು ಸೀಳಿ ರಕ್ತದ ಮಡುವಿನಲ್ಲಿ 17 ವರ್ಷದ ಬಾಲಕಿಯೊಬ್ಬಳು ಬಿದ್ದ ರೀತಿ ಶವ ಪತ್ತೆಯಾಗಿರುವ ಘಟನೆ ವರ್ಕಳ ಸಮೀಪದ ವಡಸ್ಸೆರಿಕೋಣಂನಲ್ಲಿ ಇಂದು ಮುಂಜಾನೆ ನಡೆದಿದೆ.

ಸಂಗೀತಾ ಮೃತ ಬಾಲಕಿ. ಘಟನೆ ನಡೆದ ಕೆಲವೇ ಗಂಟೆಗಳ ಬಳಿಕ ಮೃತ ಬಾಲಕಿ ಕೆಲ ದಿನಗಳಿಂದ ಪ್ರೀತಿಸುತ್ತಿದ್ದರು ಎನ್ನಲಾದ ಆಕೆಯ ಸ್ನೇಹಿತ ಗೋಪು (20) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಕಾಲೇಜು ವಿದ್ಯಾರ್ಥಿನಿ ಸಂಗೀತಾಳನ್ನು ಆರೋಪಿಗಳು ಮನೆಯಿಂದ ಹೊರಗೆ ಕರೆದೊಯ್ದಿದ್ದಾರೆ. ಬಳಿಕ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಬಾಲಕಿಯ ಕಿರುಚಾಟವನ್ನು ಕೇಳಿ ಕೂಡಲೇ ಸ್ಥಳಕ್ಕೆ ಧಾವಿಸಿದ ಆಕೆಯ ಕುಟುಂಬಸ್ಥರು ಮತ್ತು ನೆರೆಹೊರೆಯವರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಪ್ರೇಯಸಿಯ ಕೊಲೆ ಮಾಡಿ ತಾನೂ ವಿಷ ಸೇವಿಸಿ ಪ್ರಾಣಬಿಟ್ಟ!

ಇನ್ನು ಬಾಲಕಿಯ ಮೊಬೈಲ್ ಫೋನ್ ವಿವರಗಳು ಮತ್ತು ಇತರ ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಪಳ್ಳಿಕ್ಕಲ್ ಮೂಲದ ಗೋಪು ಎಂಬಾತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಲವ್​ ಬ್ರೇಕ್​ ಅಪ್​ ವಿಚಾರವಾಗಿ ಕೃತ್ಯ ಎಸಗಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ವಿಚಾರಣೆಯ ನಂತರವೇ ನಿಖರವಾದ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಕಿಡ್ನಾಪ್​​, ಚಿಕ್ಕಬಳ್ಳಾಪುರದಲ್ಲಿ ಕೊಲೆ, ಚಾರ್ಮಾಡಿಯಲ್ಲಿ ಶವ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.