ETV Bharat / bharat

ರೈಲ್ವೆ ಪ್ಲಾಟ್ ಫಾರ್ಮ್​ನಲ್ಲೇ ಮಗು ಕೊಲೆಗೈದ ಪಾಪಿ ತಂದೆ.. CCTVಯಲ್ಲಿ ಕೃತ್ಯ ಸೆರೆ - ತಂದೆಯಿಂದ ಮಗುವಿನ ಕೊಲೆ

ಪಾಪಿ ತಂದೆಯೋರ್ವ ಹೆತ್ತ ಮಗುವನ್ನ ರೈಲ್ವೆ ಪ್ಲಾಟ್​ಫಾರ್ಮ್​ನಲ್ಲಿ ಎತ್ತಿ ಒಗೆದು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

platform
platform
author img

By

Published : Sep 21, 2021, 4:13 PM IST

Updated : Sep 21, 2021, 4:28 PM IST

ನವೀ ಮುಂಬೈ(ಮಹಾರಾಷ್ಟ್ರ): ರೈಲ್ವೆ ಪ್ಲಾಟ್​​ ಫಾರ್ಮ್​ನಲ್ಲೇ ನಾಲ್ಕು ವರ್ಷದ ಬಾಲಕನನ್ನು ಕೊಲೆ ಮಾಡಿದ್ದ ಪಾಪಿ ತಂದೆಯ ದುಷ್ಕೃತ್ಯ ಬಯಲಾಗಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿ ರೈಲ್ವೆ ನಿಲ್ದಾಣದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನವೀ ಮುಂಬೈನ ಸಂಪದ ರೈಲು ನಿಲ್ದಾಣದಲ್ಲಿ ಈ ಘಟನೆ​ ನಡೆದಿದ್ದು, ಕಟ್ಟಿಕೊಂಡ ಪತ್ನಿಯೊಂದಿಗೆ ನಡೆದ ಜಗಳದಲ್ಲಿ ತಂದೆಯೇ ನಾಲ್ಕು ವರ್ಷದ ಮಗುವನ್ನು ಕೊಲೆ ಮಾಡಿದ್ದಾನೆ. ಮಗುವನ್ನ ರೈಲ್ವೆ ಪ್ಲಾಟ್​ ಫಾರ್ಮ್​​ನಲ್ಲಿ ಎರಡ್ಮೂರು ಸಲ ಎತ್ತಿ ಒಗೆದಿರುವ ಪರಿಣಾಮ ಅದು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರೋಪಿಯನ್ನ ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.

ರೈಲ್ವೆ ಪ್ಲಾಟ್ ಫಾರ್ಮ್​ನಲ್ಲೇ ಮಗುವಿನ ಕೊಲೆಗೈದ ಪಾಪಿ ತಂದೆ

ಬಂಧಿತ ಆರೋಪಿಯನ್ನ ಸಖಲಸಿಂಗ್​​ ಪವಾರ್​ ಎಂದು ಗುರುತಿಸಲಾಗಿದ್ದು, ಆತ ಮೂಲತಃ ಯಾವತ್ಮಲ್​ನವನು ಎನ್ನಲಾಗ್ತಿದೆ. ಕುಟುಂಬದೊಂದಿಗೆ ನವೀ ಮುಂಬೈನ ಸಂಪದ ರೈಲ್ವೆ ನಿಲ್ದಾಣದ ಸೇತುವೆ ಕೆಳಗೆ ವಾಸಿಸುತ್ತಿದ್ದ ಈತ, ಜೀವನಕ್ಕಾಗಿ ಕುಟುಂಬದೊಂದಿಗೆ ಭಿಕ್ಷೆ ಬೇಡುತ್ತಿದ್ದ.

ಇದನ್ನೂ ಓದಿರಿ: 'ನನ್ನ ತಾಯಿಯನ್ನೂ ಮತಾಂತರ ಮಾಡಿದ್ದಾರೆ..': ಅಧಿವೇಶನದಲ್ಲಿ ನೋವು ತೋಡಿಕೊಂಡ ಗೂಳಿಹಟ್ಟಿ ಶೇಖರ್

ಸಖಲಸಿಂಗ್​ ಹಾಗೂ ಆತನ ಪತ್ನಿ ಮೇಲಿಂದ ಮೇಲೆ ಜಗಳವಾಡುತ್ತಿದ್ದರು. ಘಟನೆಯ ಹಿಂದಿನ ದಿನ ಕೂಡ ಹೆಂಡತಿ ಜೊತೆ ಜಗಳವಾಡಿದ್ದ. ಇದಾದ ಮರುದಿನ ಮಗುವನ್ನ ತೆಗೆದುಕೊಂಡು ರೈಲ್ವೆ ನಿಲ್ದಾಣಕ್ಕೆ ಬಂದಿದ್ದನು. ಈ ವೇಳೆ ಪ್ಲಾಟ್​ಫಾರ್ಮ್​ನಲ್ಲಿ ಮಗುವನ್ನು ಎತ್ತಿ ಒಗೆದಿದ್ದಾನೆ. ಪರಿಣಾಮ ಸ್ಥಳದಲ್ಲೇ ಬಾಲಕ ಸಾವನ್ನಪ್ಪಿದ್ದಾನೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಸಖಲಸಿಂಗ್​ಗೆ ಇಬ್ಬರು ಪತ್ನಿಯರಂತೆ. ಮೃತ ಬಾಲಕ ಪ್ರಶಾಂತ್​​ ಮೊದಲ ಪತ್ನಿಯ ಮಗನೆಂದು ತಿಳಿದು ಬಂದಿದೆ.

Last Updated : Sep 21, 2021, 4:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.