ETV Bharat / bharat

World Father's Day: ಬೀದಿ ಬದಿ ಟೀ ಮಾರಿ ಮೂವರು ಹೆಣ್ಣುಮಕ್ಕಳಿಗೆ ಬದುಕಿನ 'ಕುಸ್ತಿ' ಹೇಳಿಕೊಟ್ಟ ಈ ಅಪ್ಪ! - father made daughters national players wrestlers

ಗುಜರಾತ್​ನ ವ್ಯಕ್ತಿಯೊಬ್ಬರು ಬೀದಿ ಬದಿ ಟೀ ಮಾರಿ ತನ್ನ ಮೂವರು ಪುತ್ರಿಯರನ್ನು ಕುಸ್ತಿಪಟುಗಳನ್ನಾಗಿ ರೂಪಿಸಿದ್ದಾರೆ. ಇಂತಹ ವಿಶೇಷ ವ್ಯಕ್ತಿಗೆ ಇಂದಿನ ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು...

ವಿಶ್ವ ಅಪ್ಪಂದಿರ ದಿನ
ವಿಶ್ವ ಅಪ್ಪಂದಿರ ದಿನ
author img

By

Published : Jun 18, 2023, 12:23 PM IST

Updated : Jun 18, 2023, 1:13 PM IST

ಬದುಕಿನ ಕುಸ್ತಿ ಹೇಳಿಕೊಟ್ಟ ಅಪ್ಪ

ಸೂರತ್​(ಗುಜರಾತ್​): 'Mother teaches to love Father teaches to survive' ಎಂಬ ಇಂಗ್ಲಿಷಿನ ಈ ಒಕ್ಕಣೆ ಇಂದಿನ ವಿಶ್ವ ಅಪ್ಪಂದಿರ ದಿನಕ್ಕೆ ನಿಜ ಅರ್ಥ ಕಲ್ಪಿಸುತ್ತದೆ. ಮಕ್ಕಳ ಅಭ್ಯುದಯವನ್ನೇ ಜೀವನದ ಕನಸು ಮಾಡಿಕೊಂಡಿರುವ ಅಪ್ಪ, ಅವರ ಆಶೋತ್ತರಗಳಿಗೆ ಸೂರು ನೀಡುತ್ತಾನೆ. ಗುಜರಾತ್​ನ ಈ ವ್ಯಕ್ತಿ ಕೂಡ ಅದ್ಯಾರಿಗೂ ಕಮ್ಮಿ ಇಲ್ಲ. ತನ್ನ ಮೂವರು ಪುತ್ರಿಯರಿಗೆ ಬದುಕಿನ ಪಾಠ ಕಲಿಸಿದ್ದಾರೆ. ಕುಸ್ತಿಪಟುಗಳಾಗಿರುವ ಇವರಿಗೆ ತಂದೆಯ ಪೂರ್ಣ ಬೆಂಬಲವಿದೆ. ಹೀಗಾಗಿಯೇ ಇವರಿಂದು ರಾಷ್ಟ್ರಮಟ್ಟದಲ್ಲಿ ಜಟ್ಟಿಗಳ ಜೊತೆಗೆ ಅಖಾಡದಲ್ಲಿ ಸೆಣಸುತ್ತಿದ್ದಾರೆ.

ಮೂವರು ಕುಸ್ತಿಪಟು ಹೆಣ್ಣು ಮಕ್ಕಳ ತಂದೆಯ ಹೆಸರು ರಾಮ್​ಲಖನ್​ ರೈಕ್ವಾರ್. ಸೂರತ್‌ನ ದಿಂಡೋಲಿ ನಿವಾಸಿ. ಇಲ್ಲಿನ ಉದ್ದಾನ ಪ್ರದೇಶದ ಫುಟ್‌ಪಾತ್‌ನಲ್ಲಿ ಚಹಾ, ಕುರುಕಲು ತಿಂಡಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ತನ್ನಂತೆ ತನ್ನ ಮಕ್ಕಳೂ ಕೂಡ ಭವಿಷ್ಯದಲ್ಲಿ ಕಷ್ಟಪಡಬಾರದು ಎಂದು ಬೆವರು ಹರಿಸುತ್ತಿದ್ದಾರೆ. ಮಕ್ಕಳು ಕೂಡ ಕುಸ್ತಿ ಅಖಾಡದಲ್ಲಿ ಬೆವರು ಹರಿಸಿ ಹೆಸರುವಾಸಿಯಾಗಿದ್ದಾರೆ.

ಮಕ್ಕಳ ಸಾಧನೆಗೆ ಹೆಗಲಾದ ರಾಮ್​ಲಖನ್​: ಪುತ್ರಿಯರಾದ ನೀಲಂ, ಸೋನೊ ಮತ್ತು ಮೋನು ರಾಷ್ಟ್ರೀಯ ಕುಸ್ತಿಪಟುಗಳು. ರಾಮ್ ಲಖನ್‌ಭಾಯ್ ಅವರು ತಮ್ಮ ಮಕ್ಕಳನ್ನು ಈ ಹಂತಕ್ಕೆ ತರುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ಕಂಡಿದ್ದ ಕನಸನ್ನು ಕಷ್ಟಪಟ್ಟು ನನಸು ಮಾಡಿಕೊಂಡಿದ್ದಾರೆ. ಇವರಿಗೆ ಒಬ್ಬ ಪುತ್ರ ಕೂಡ ಇದ್ದಾನೆ.

ಮೋನು ರೈಕ್ವಾರ್ ರಾಷ್ಟ್ರೀಯ ಕುಸ್ತಿ ಆಟಗಾರ್ತಿ. ಉಳಿದಿಬ್ಬರು ಸಹೋದರಿಯರು ರಾಜ್ಯ ಮಟ್ಟದಲ್ಲಿ ಅನೇಕ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಇವರು ಕುಸ್ತಿಯಲ್ಲದೇ ಶಿಕ್ಷಣದಲ್ಲೂ ಜಟ್ಟಿಗಳೇ. ಪದವಿ ವ್ಯಾಸಂಗ ಮಾಡುತ್ತಿರುವ ಇವರ ಸಾಧನೆಗೆ ತಂದೆಯೇ ಮೂಲಾಧಾರ.

ಕುಸ್ತಿ ಕ್ಷೇತ್ರದಲ್ಲಿ ಹುಡುಗಿಯರು ಮುನ್ನಡೆಯುವುದು ತುಸು ಕಷ್ಟದ ಕೆಲಸ. ಪ್ರಾಯಕ್ಕೆ ಬಂದ ಬಳಿಕ ಮದುವೆ, ಸಂಸಾರದ ಜವಾಬ್ದಾರಿ ಇರುತ್ತದೆ. ಆದರೆ, ಇದ್ಯಾವುದಕ್ಕೂ ಕಿವಿಗೊಡದೆ ನಮ್ಮ ತಂದೆ ಮೂವರಿಗೂ ಪದವಿ ತನಕ ಓದಿಸಿದ್ದಾರೆ. ನಮ್ಮ ಆಸಕ್ತಿ, ಆಯ್ಕೆಯ ಕ್ಷೇತ್ರದಲ್ಲಿ ಸಾಧನೆಗೆ ಅವಕಾಶ ಮಾಡಿಕೊಟ್ಟರು. ಕುಸ್ತಿಯಲ್ಲಿ ಆಸಕ್ತಿ ಇರುವ ಕಾರಣ ಅದಕ್ಕೂ ನಮ್ಮನ್ನು ಬೆಂಬಲಿಸಿದರು ಎಂದು ಹಿರಿಯ ಪುತ್ರ ಮೋನು ರೈಕ್ವಾರ್ ಹೇಳಿದರು.

'ಮಕ್ಕಳ ಬಗ್ಗೆ ಹೆಮ್ಮೆ ಇದೆ': "ಮೂಲತಃ ನಮ್ಮದು ಉತ್ತರಪ್ರದೇಶ. ಇಲ್ಲಿಗೆ ಜೀವನ ಅರಸಿ ವಲಸೆ ಬಂದೆವು. ಮಕ್ಕಳ ಶಿಕ್ಷಣ ಮತ್ತು ಬದುಕಿಗಾಗಿ ಹಗಲು ರಾತ್ರಿಯೆನ್ನದೇ ಫುಟ್‌ಪಾತ್‌ನಲ್ಲಿ ಟೀ ಮತ್ತು ಕುರುಕಲು ತಿಂಡಿ ಮಾರಾಟ ಮಾಡುವ ಕೆಲಸ ಆರಂಭಿಸಿದೆ. ಇಂದು ನನ್ನ ಪುತ್ರಿಯರ ಬಗ್ಗೆ ತುಂಬಾ ಹೆಮ್ಮೆ ಇದೆ. ನನ್ನ ಹೆಸರನ್ನು ಉಳಿಸಿದ್ದಾರೆ. ಶ್ರಮಕ್ಕೆ ತಕ್ಕ ಫಲ ಕೊಟ್ಟಿದ್ದಾರೆ" ಎಂದು ತಂದೆ ರಾಮ್​ಲಖನ್​ ರೈಕ್ವಾರ್ ಹೆಮ್ಮೆಯಿಂದ ಬೀಗಿದರು.

ಕುಸ್ತಿ ತರಬೇತಿ ಆರಂಭಿಸಿದ 3 ಸಹೋದರಿಯರಲ್ಲಿ ಮೊದಲನೇಯವರಾದ ನೀಲಂ ಕಳೆದ ನಾಲ್ಕು ವರ್ಷಗಳಿಂದ ಕುಸ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತರವಿಶ್ವವಿದ್ಯಾನಿಲಯ ಸ್ಪರ್ಧೆಗಳಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಪವರ್ ಲಿಫ್ಟಿಂಗ್​ನಲ್ಲೂ ರಾಜ್ಯಮಟ್ಟದ ಚಾಂಪಿಯನ್ ಆಗಿದ್ದರು.

ಇದಲ್ಲದೇ, ಕುಡೋ, ಫುಟ್‌ಬಾಲ್​ನಲ್ಲೂ ಆಸಕ್ತಿ ಹೊಂದಿದ್ದಾರೆ. ಸೋನು ಮತ್ತು ಮೋನು ಅವಳಿ ಸಹೋದರಿಯರಾಗಿದ್ದು, ಬಿಕಾಂ ಮುಗಿಸಿದ್ದು, ಅವರೂ ಕುಸ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಖೇಲ್ ಮಹಾಕುಂಭದಲ್ಲಿ ಸೋನು ಕಂಚಿನ ಪದಕ, ಸೀನಿಯರ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ, ಅಹಮದಾಬಾದ್​ನಲ್ಲಿ ನಡೆದ ಜೂನಿಯರ್ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಇದನ್ನೂ ಓದಿ: World father's day: 'ನೀನು ಮುಗಿಲೂ, ಹೆಗಲೂ..' ಮಕ್ಕಳನ್ನು ಹೆಗಲ ಮೇಲೆ ಕುಳ್ಳಿರಿಸಿ ಪ್ರಪಂಚ ತೋರಿಸುವ ಅಪ್ಪ!

Last Updated : Jun 18, 2023, 1:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.