ETV Bharat / bharat

ಪುಷ್ಕರದಲ್ಲಿ ಭಲೇ ಭೀಮನ ಪುಷ್ಕಳ ಭೋಜನ...ಇವನ ಮೌಲ್ಯ ಬರೋಬ್ಬರಿ 24ಕೋಟಿ.. ಈತನ ವೀರ್ಯಕ್ಕೂ ಇದೆ ಭಾರಿ ಬೆಲೆ! - ಮುರ್ರಾ ತಳಿಯ ಕೋಣದ ಪ್ರಚಾರ

ಪುಷ್ಕರ್‌ನಲ್ಲಿ (Pushkar) ನಡೆಯುತ್ತಿರುವ ದನಗಳ ಜಾತ್ರೆ ರಾಜ್ಯದಲ್ಲೇ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. 6 ಅಡಿ ಮೈಕಟ್ಟು, 1500 ಕೆಜಿ ತೂಗುವ ಕೋಣದ ಬೆಲೆ 24 ಕೋಟಿ ರೂ. ಅಂತೆ (buffalo worth 24 crore). ಇಷ್ಟು ಬೆಲೆಗೆ ಈ ಕೋಣವನ್ನು ಕೇಳಿದ್ರೂ ಸಹ ಅದನ್ನು ಮಾರಾಟ ಮಾಡುವುದಿಲ್ಲ ಎಂದು ಅದರ ಮಾಲೀಕ ಹೇಳಿದ್ದಾರೆ.

cattle fair in Pushkar, buffalo worth 24 crore, Bhim is 24 crores,  Jawahar Lal Jangid, promotion of Murrah breed, ಪುಷ್ಕರ್​ದಲ್ಲಿ ಜಾನುವಾರು ಜಾತ್ರೆ, ಕೋಣದ ಬೆಲೆ 24 ಕೋಟಿ, ಭೀಮ್​ನ ಬೆಲೆ 24 ಕೋಟಿ, ಜವಾಹರ್ ಲಾಲ್ ಜಂಗಿದ್, ಮುರ್ರಾ ತಳಿಯ ಕೋಣದ ಪ್ರಚಾರ,
ಪುಷ್ಕರದಲ್ಲಿ ಭಲೇ ಭೀಮನ ಪುಸ್ಕಳ ಭೋಜನ
author img

By

Published : Nov 19, 2021, 8:10 AM IST

Updated : Nov 19, 2021, 8:41 AM IST

ಪುಷ್ಕರ್( ರಾಜಸ್ಥಾನ): ಇಲ್ಲಿ ನಡೆಯುತ್ತಿರುವ ಜಾನುವಾರು ಜಾತ್ರೆಗೆ (cattle fair in Pushkar) ಹೆಚ್ಚು ಬೆಲೆಬಾಳುವ ಮತ್ತು ಆಕರ್ಷಕ ಒಂಟೆ ಮತ್ತು ಕುದುರೆಗಳು ಬಂದಿವೆ. ಒಂಟೆ - ಕುದುರೆ ಅಷ್ಟೇ ಅಲ್ಲ ಈ ಜಾತ್ರೆಯಲ್ಲಿ ಈ ಬಾರಿ ಎಲ್ಲರ ಕಣ್ಮಣಿ ಆಗಿರುವುದು ಮಾತ್ರ ಈ ಭಲೇ ಭೀಮ..

ಪುಷ್ಕರದಲ್ಲಿ ಭಲೇ ಭೀಮನ ಪುಷ್ಕಳ ಭೋಜನ

ಈತನ ಬೆಲೆ ಕೇಳಿದರೆ ಹೌಹಾರೋದು ಗ್ಯಾರಂಟಿ: ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಭೀಮ ಯಾರು ಎಂದರೆ, ಅದುವೇ ಈ ಹೆಮ್ಮೆಯ ಕೋಣ.. ಹೌದು, ಭೀಮ್ ಹೆಸರಿನ ಈ ಜಾನುವಾರಿನ ಬೆಲೆ ಬರೋಬ್ಬರಿ 24 ಕೋಟಿ. ಈ ಜಾತ್ರೆಗೆ ಭೀಮ ಮೂರನೇ ಬಾರಿ ಬಂದಿದ್ದಾನೆ. ಈ ಪ್ರಸಿದ್ಧ ಜಾನುವಾರು ಜಾತ್ರೆಯಲ್ಲಿ ಭೀಮ 24 ಕೋಟಿ (Bhim is 24 crores) ಬಿಡ್ ಪಡೆದಿದ್ದು, ಅದರ ಮಾಲೀಕರು ಇದಕ್ಕೆ ಬೆಲೆ ಕಟ್ಟಲು ಆಗಲ್ಲ.. ಜಾತ್ರೆಯಲ್ಲಿ ಮಾರಾಟ ಮಾಡಲು ನಾವು ಭೀಮನನ್ನು ಕರೆ ತಂದಿಲ್ಲ, ಕೇವಲ ಪ್ರದರ್ಶನಕ್ಕೆ ಮಾತ್ರ ತಂದಿದ್ದೇವೆ ಎಂದು ಸಮಜಾಯಿಷಿ ಕೊಟ್ಟಿದ್ದಾರೆ.

ಓದಿ: ಭಾರಿ ಮಳೆ ಮುನ್ಸೂಚನೆ; ರಾಜ್ಯದ 7 ಜಿಲ್ಲೆಗಳಲ್ಲಿ ಇಂದು, ನಾಳೆ ಶಾಲಾ-ಕಾಲೇಜುಗಳಿಗೆ ರಜೆ

ಮಾಲೀಕನ ಮಾತು: ಜೋಧಪುರದ ನಿವಾಸಿಯೂ ಆಗಿರುವ ಜವಾಹರ್ ಲಾಲ್ ಜಂಗಿದ್ (Jawahar Lal Jangid) ಈ ಕೋಣದ ಮಾಲೀಕರಾಗಿದ್ದು, ಇದರ ಬೆಲೆ ಅಂದಾಜು 24 ಕೋಟಿ ರೂ ಎಂದು ಹೇಳಿದ್ದಾರೆ. ಆದರೆ ಭೀಮನನ್ನು ಮಾರಾಟ ಮಾಡುವುದಿಲ್ಲ ಎಂದು ಅದೇ ಗಳಿಗೆಯಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ. ಮುರ್ರಾ ತಳಿಯ ಕೋಣವನ್ನು ಪ್ರಚಾರದ ಉದ್ದೇಶದಿಂದ (promotion of Murrah breed) ಮಾತ್ರವೇ ಈ ಜಾತ್ರೆಗೆ ತೆಗೆದುಕೊಂಡು ಬರಲಾಗಿದೆಯಂತೆ.

ಇನ್ನು ಈ ಭಲೇ ಭೀಮನ ಸಂತತಿಯನ್ನು ವಿಸ್ತರಣೆ ಉದ್ದೇಶ ಹೊಂದಿರುವ ಮಾಲೀಕರು, ಅದರ ವೀರ್ಯವನ್ನು ಬೇರೆಯವರಿಗೆ ನೀಡಿ ಅದರ ಈ ತಳಿಯನ್ನು ಅಭಿವೃದ್ಧಿ ಪಡಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಹಲವು ಸ್ಪರ್ಧೆಗಳಲ್ಲಿ ಭೀಮನ ಝಲಕ್​: 2018 ಮತ್ತು 2019ರಲ್ಲಿ ಭೀಮನ ಜೊತೆ ಪುಷ್ಕರ ಜಾತ್ರೆಗೆ (cattle fair in Pushkar) ಬಂದಿದ್ದೆ ಎಂದು ಅದರ ಮಾಲೀಕ ಜಂಗಿದ್ ಹೇಳಿದ್ದಾರೆ. ಇದಲ್ಲದೇ ನಾಗೌರ್, ಬಲೋತ್ರಾ, ಡೆಹ್ರಾಡೂನ್ ಸೇರಿದಂತೆ ಹಲವೆಡೆ ಜಾನುವಾರುಗಳ ಜಾತ್ರೆಗಳಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇವೆ ಎಂದು ಜಂಗೀದ ವಿವರಣೆ ನೀಡಿದ್ದಾರೆ. ಭೀಮ 14 ಅಡಿ ಉದ್ದವಿದ್ದು, ಆರು ಅಡಿಗಳ ಮೈಕಟ್ಟು ಹೊಂದಿದ್ದಾನೆ. ಭೀಮನಿಗೆ ಅದರ ಮಾಲೀಕ ತಿಂಗಳಿಗೆ ಒಂದೂವರೆಯಿಂದ 2 ಲಕ್ಷ ರೂ. ಖರ್ಚು ಮಾಡ್ತಿದ್ದಾರೆ.

ಓದಿ: IND vs NZ 2nd T20 : ರಾಂಚಿಯಲ್ಲಿ ಇಂದು ಭಾರತ-ಕಿವೀಸ್‌ 2ನೇ ಟಿ-20 ಫೈಟ್‌

ಅಷ್ಟಕ್ಕೂ ಭೀಮ ಏನೇನು ತಿಂತಾನೆ ಗೊತ್ತಾ? : ಭೀಮನ ಆಹಾರ ಕ್ರಮ ನಿಮಗೆ ಅಚ್ಚರಿಯನ್ನು ಉಂಟು ಮಾಡದೇ ಇರದು, ಏಕೆಂದರೆ ಸಾಮಾನ್ಯ ಕೋಣದಂತೆ ಈ ಭೀಮ ಹುಲ್ಲು ತಿನ್ನುವುದಿಲ್ಲ. ಬದಲಾಗಿ ದಿನಕ್ಕೆ 1 ಕೆಜಿ ತುಪ್ಪ, ಅರ್ಧ ಕೆಜಿ ಬೆಣ್ಣೆ, 200 ಗ್ರಾಂ ಜೇನುತುಪ್ಪ, 25 ಲೀಟರ್ ಹಾಲು, 1 ಕೆಜಿ ಗೋಡಂಬಿ - ಬಾದಾಮಿ ತಿಂತಾನೆ. ಈ ಮೂಲಕ ಮನುಷ್ಯರಂತೆ ಈತನೂ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡ್ತಾನೆ.

2 ವರ್ಷಗಳ ಹಿಂದೆ ಭೀಮನ ತೂಕ 13 ಕೆಜಿ ಇತ್ತು, ಅದು ಈಗ 1500 ಕೆಜಿಗೆ ತನ್ನ ತೂಕವನ್ನು ಹೆಚ್ಚಿಸಿಕೊಂಡಿದ್ದಾನೆ. 2018ರಲ್ಲಿ ಮುರ್ರಾ ತಳಿಯ ಈ ಭೀಮನ ಬೆಲೆ 21 ಕೋಟಿ ಇದ್ದರೆ, ಈಗ ಆತನ ಒಟ್ಟಾರೆ ಮೌಲ್ಯ 24 ಕೋಟಿಗೆ ಏರಿಕೆಯಾಗಿದೆ.

ಭೀಮನ ವೀರ್ಯಕ್ಕಿದೆ ಅಪಾರ ಬೆಲೆ: ಮುರ್ರಾ ತಳಿಗೆ ಪ್ರಪಂಚದಾದ್ಯಂತ ಬಹಳ ಬೇಡಿಕೆಯಿದೆ. ಅದರ ವೀರ್ಯದಿಂದ ಹುಟ್ಟುವ ಈ ತಳಿಯ ಎಮ್ಮೆ ಹಾಗೂ ಕೋಣ ತಕ್ಷಣಕ್ಕೆ 40 ರಿಂದ 50 ಕೆಜಿ ತೂಗುತ್ತವೆ. ಮುರ್ರಾ ತಳಿಯ ಎಮ್ಮೆ ಒಂದು ಬಾರಿಗೆ 20 ರಿಂದ 30 ಲೀಟರ್ ಹಾಲು ಕರೆಯುತ್ತವೆ. ಇದರ 0.25 ಮಿಲಿ ವೀರ್ಯದ ಬೆಲೆ ಸುಮಾರು 500 ರೂ. ಆಗಿದೆ. 0.25 ಮಿಲಿ ವೀರ್ಯವನ್ನು ಪೆನ್ನ ರೀಫಿಲ್‌ನಂತೆ ಒಣಹುಲ್ಲಿನಲ್ಲಿ ತುಂಬಿಸಲಾಗುತ್ತದೆ. ಒಂದು ವರ್ಷದಲ್ಲಿ 10,000 ಸ್ಟ್ರಾಗಳನ್ನು ಮಾರುತ್ತೇನೆ ಎಂದು ಭೀಮನ ಮಾಲೀಕರು ಹೇಳುತ್ತಾರೆ.

Last Updated : Nov 19, 2021, 8:41 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.