ಭದ್ರಾಚಲಂ: ಭದ್ರಾಚಲಂ ಸರ್ಕಾರಿ ಆಸ್ಪತ್ರೆಯಲ್ಲಿ ಐದು ಕೆ.ಜಿ ತೂಕದ ಸುಂದರ ಹೆಣ್ಣು ಮಗು ಜನಿಸಿದೆ. ಸಾಮಾನ್ಯವಾಗಿ ಮೂರರಿಂದ ಮೂರೂವರೆ ಕಿಲೋಗ್ರಾಂಗಳಷ್ಟು ತೂಕವಿರುವ ಹೆಣ್ಣು ಮತ್ತು ಗಂಡು ಶಿಶುಗಳು ಮಾತ್ರ ಜನಿಸುತ್ತವೆ. ಐದು ಕೆಜಿ ತೂಕದ ಹೆಣ್ಣು ಮಗು ಜನಿಸುವುದೇ ಅಪರೂಪ ಎಂದು ವೈದ್ಯರು ಹೇಳಿದ್ದಾರೆ.
ಎರಡನೇ ಹೆರಿಗೆಗಾಗಿ ಭದ್ರಾಚಲಂ ಸರ್ಕಾರಿ ಪ್ರಾದೇಶಿಕ ಆಸ್ಪತ್ರೆಗೆ ದಾಖಲಾಗಿದ್ದ ಶೀಲಂ ಗಂಗಾ ಭವಾನಿ ಅವರು ಐದು ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ್ದಾರೆ. ದುಮ್ಮುಗುಡೆಂ ವಲಯದ ದಬ್ಬನೂತಾಳ ಗ್ರಾಮದವರಾದ ಇವರು ಆ.2ರಂದು ಹೆರಿಗೆ ನೋವಿನಿಂದ ಇಲ್ಲಿಗೆ ಬಂದಿದ್ದರು. ಎಲ್ಲ ಪರೀಕ್ಷೆ ನಡೆಸಿದ ವೈದ್ಯರು ನ.3ರಂದು ಶಸ್ತ್ರ ಚಿಕಿತ್ಸೆ ನಡೆಸಿದ್ದು, ಭವಾನಿ 5 ಕೆ.ಜಿ ತೂಕದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆಶಾ ಕಾರ್ಯಕರ್ತೆಯರ ಸಲಹೆ ಮೇರೆಗೆ ಗಂಗಾಭವಾನಿ ಅಂಗನವಾಡಿ ಕೇಂದ್ರದಿಂದ ಪೌಷ್ಠಿಕಾಂಶ ಹಾಗೂ ಸರ್ಕಾರಿ ಆಸ್ಪತ್ರೆ ಔಷಧಗಳನ್ನು ಸೇವಿಸಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಅಮಾನವೀಯ.. 108 ಆ್ಯಂಬುಲೆನ್ಸ್ ನಿರಾಕರಣೆ, ಬೈಕ್ನಲ್ಲಿ ಮಗನ ಶವ ಹೊತ್ತು ತಂದ ತಂದೆ!