ETV Bharat / bharat

9 ವರ್ಷದ ಬಾಲಕಿ ಮೇಲೆ ವೃದ್ಧರಿಂದ ಅತ್ಯಾಚಾರ.. ಇಬ್ಬರ ಬಂಧನ, ಇನ್ನೊಬ್ಬನಿಗಾಗಿ ಹುಡುಕಾಟ - ಪೋಕ್ಸೋ ಕಾಯ್ದೆಯಡಿ ಮೂವರ ವಿರುದ್ಧ ಪ್ರಕರಣ

9 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ: ಸಂತ್ರಸ್ತ ಬಾಲಕಿಯನ್ನು ಸಾಮಾಜಿಕ ಸಂಘಟನೆಯ ಮಹಿಳಾ ಅಧಿಕಾರಿಯೊಬ್ಬರು ಅನಾಥಾಶ್ರಮಕ್ಕೆ ಸೇರಿಸಿದ್ದರು. ಈ ವೇಳೆ 62 ಮತ್ತು 65 ವರ್ಷ ವಯಸ್ಸಿನ ಆರೋಪಿಗಳು ಅಲ್ಲಿಗೆ ಆಗಮಿಸಿ ಬಾಲಕಿಯನ್ನು ನೋಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಈ ಇಬ್ಬರು ಆರೋಪಿಗಳ ವರ್ತನೆ ಅನುಮಾನಾಸ್ಪದವಾಗಿದ್ದರಿಂದ ಅನಾಥಾಶ್ರಮದ ಅಧಿಕಾರಿಗಳು ಬಾಲಕಿ ಬಳಿ ಈ ಇಬ್ಬರ ಬಗ್ಗೆ ವಿಚಾರಿಸಿದ್ದಾರೆ.

A 9 year old minor girl was sexually assaulted in Bhandup

author img

By

Published : Sep 2, 2022, 7:09 PM IST

ಮುಂಬೈ: ಮಹಾರಾಷ್ಟ್ರದ ಭಾಂಡೂಪ್ ಉಪನಗರದಲ್ಲಿ ರೇಪ್​ ಆಗಿರುವ ಘಟನೆ ನಡೆದಿದೆ. 9 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ. ಆರೋಪಿಗಳು ಕಳೆದ ಎರಡು ವರ್ಷಗಳಿಂದ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದರು ಎನ್ನಲಾಗಿದೆ.

ಪೋಕ್ಸೋ ಕಾಯ್ದೆಯಡಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು 62 ಮತ್ತು 65 ವರ್ಷದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ವೃದ್ಧರು ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದ್ದು, ಈ ಪ್ರಕರಣದಲ್ಲಿ ಭಾಗಿ ಆಗಿರುವ ಇತರ ಆರೋಪಿಗಳನ್ನು ಬಂಧಿಸಲು ಪೊಲೀಸರು ಜಾಲ ಬೀಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮೂರನೇ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ಘಟನೆ ಬಯಲಿಗೆ ಬಂದಿದ್ದು ಹೇಗೆ?: ಸಂತ್ರಸ್ತ ಬಾಲಕಿಯನ್ನು ಸಾಮಾಜಿಕ ಸಂಘಟನೆಯ ಮಹಿಳಾ ಅಧಿಕಾರಿಯೊಬ್ಬರು ಅನಾಥಾಶ್ರಮಕ್ಕೆ ಸೇರಿಸಿದ್ದರು. ಈ ವೇಳೆ 62 ಮತ್ತು 65 ವರ್ಷ ವಯಸ್ಸಿನ ಆರೋಪಿಗಳು ಅಲ್ಲಿಗೆ ಆಗಮಿಸಿ ಬಾಲಕಿಯನ್ನು ನೋಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಈ ಇಬ್ಬರು ಆರೋಪಿಗಳ ವರ್ತನೆ ಅನುಮಾನಾಸ್ಪದವಾಗಿದ್ದರಿಂದ ಅನಾಥಾಶ್ರಮದ ಅಧಿಕಾರಿಗಳು ಬಾಲಕಿ ಬಳಿ ಈ ಇಬ್ಬರ ಬಗ್ಗೆ ವಿಚಾರಿಸಿದ್ದಾರೆ.

ಈ ಸಂದರ್ಭದಲ್ಲಿ ಬಾಲಕಿ ತನ್ನೊಂದಿಗೆ ನಡೆದಿದ್ದನ್ನೆಲ್ಲಾ ಹೇಳಿಕೊಂಡಿದ್ದಾಳೆ. 9 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಅಧಿಕಾರಿಗಳಿಗೆ ಖಚಿತವಾಗಿದೆ. ಅಷ್ಟೇ ಅಲ್ಲ ತನ್ನ ತಂದೆ ತಾಯಿಗಳು ಪರಸ್ಪರ ದೂರವಾಗಿದ್ದರ ಬಗ್ಗೆಯೂ ಬಾಲಕಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ. ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಬಾಲಕಿಯ ತಂದೆ ಮರು ಮದುವೆಯಾಗಿದ್ದಾರೆ.

ಹೀಗಾಗಿ ಅಪ್ರಾಪ್ತೆ ತನ್ನ ತಾಯಿಯ ಸಂಬಂಧಿ ಮಹಿಳೆಯೊಂದಿಗೆ ವಾಸವಾಗಿದ್ದಳು. ಬಾಲಕಿಯ ಅಜ್ಜಿ ಮನೆಯಲ್ಲಿ ಇಲ್ಲದಿರುವಾಗ ಆರೋಪಿಯೊಬ್ಬ ಬಾಲಕಿಗೆ ಸಹಾಯ ಮಾಡುವ ನೆಪದಲ್ಲಿ ದೌರ್ಜನ್ಯ ಎಸಗಿದ್ದಾನೆ. ಈ ಆರೋಪಿಗಳು ಅವರಿಗೆ ತಂಗಲು ಸ್ಥಳ ಕೂಡಾ ನೀಡಿದ್ದರು. ಆರೋಪಿಗಳು ಯಾವಾಗಲೂ ಅಲ್ಲಿಗೆ ಬರುತ್ತಿದ್ದರು. ಅಜ್ಜಿ ಹೊರಗೆ ಹೋದಾಗ ಬಾಲಕಿಯನ್ನು ಶೋಷಣೆ ಮಾಡುತ್ತಿದ್ದರು ಎಂಬುದು ವಿಚಾರಣೆ ವೇಳೆ ಬಹಿರಂಗವಾಗಿದೆ.

ಇದನ್ನು ಓದಿ:ಭೋಪಾಲ್‌ನಲ್ಲಿ ಸಾಗರ್ ಸರಣಿ ಕಿಲ್ಲರ್ ಬಂಧನ.. ಪೊಲೀಸರನ್ನು ಅಭಿನಂದಿಸಿದ ನರೋತ್ತಮ್ ಮಿಶ್ರಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.