ETV Bharat / bharat

ರಾಜಸ್ಥಾನದ ಕಳ್ಳರಿಂದ ತಮಿಳುನಾಡಲ್ಲಿ ದರೋಡೆ.. ಮಹಾರಾಷ್ಟ್ರದಲ್ಲಿ ಬಂಧನ - Selam police station

50 ಲಕ್ಷ ರೂಪಾಯಿಗಳ ದರೋಡೆ ಮಾಡಿದ ಇಬ್ಬರು ಕಳ್ಳರು ತಮ್ಮ ಸ್ವಂತ ರಾಜ್ಯಕ್ಕೆ ಪರಾರಿಯಾಗುತ್ತಾರೆ ಎಂದು ಪೊಲೀಸರ ಊಹೆ ನಿಜವಾಗಿತ್ತು.

a-50-lakh-rupees-heist-occurred-in-tamil-nadu-thieves-tried-to-escape-to-rajasthan-via-railway-but-got-caught-by-police-in-the-midway
ರಾಜಸ್ಥಾನದ ಕಳ್ಳರು.. ತಮಿಳುನಾಡಲ್ಲಿ ಕಳ್ಳತನ.. ಮಹಾರಾಷ್ಟ್ರದಲ್ಲಿ ಬಂಧನ
author img

By

Published : May 22, 2021, 2:55 AM IST

Updated : May 22, 2021, 4:25 AM IST

ಜಲಗಾಂವ್, ಮಹಾರಾಷ್ಟ್ರ: ಮನೆಗೆಲಸ ಮಾಡುತ್ತಲೇ ತಮಿಳುನಾಡಿನಲ್ಲಿ 50 ಲಕ್ಷ ರೂಪಾಯಿಗಳ ದರೋಡೆ ಮಾಡಿದ ಇಬ್ಬರು ಕಳ್ಳರು ರಾಜಸ್ಥಾನಕ್ಕೆ ಪರಾರಿಯಾಗಲು ಯತ್ನಿಸಿ, ಮಹಾರಾಷ್ಟ್ರದಲ್ಲಿ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.

a-50-lakh-rupees-heist-occurred-in-tamil-nadu-thieves-tried-to-escape-to-rajasthan-via-railway-but-got-caught-by-police-in-the-midway
ಆರೋಪಿಗಳಿಂದ ಜಪ್ತಿ ಮಾಡಿದ ಹಣ , ಮೊಬೈಲ್​ಗಳು

19 ವರ್ಷದ ಮಂಗಲ್​ ಅಸುರಾಮ್​​​ ಬಿಷ್ಣೋಯ್ ಬಂಧಿತನಾಗಿದ್ದು, ಆತನ ಜೊತೆಯಲ್ಲಿ ಮತ್ತೋರ್ವ ಬಾಲಾಪರಾಧಿಯೂ ಕೃತ್ಯದಲ್ಲಿ ಭಾಗಿಯಾಗಿದ್ದು, ಆತನನ್ನೂ ವಶಕ್ಕೆ ಪಡೆಯಲಾಗಿದೆ. ಮಂಗಲ್​ರಾಮ್ ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಗುಡ್ಮಲಾನಿ ನಿವಾಸಿಯಾಗಿದ್ದನು ಎಂದು ತಿಳಿದುಬಂದಿದೆ.

ನಡೆದಿದ್ದೇನು..?

ಮಂಗಲ್​ ಅಸುರಾಮ್ ತಮಿಳುನಾಡಿನ ಸೇಲಂ ಬಳಿಯಿರುವ ದೇವನ್​ಯಾಗಂನಲ್ಲಿರುವ ಮೋಹನ್​​ಕುಮಾರ್ ಜಗಥತಿ ಎಂಬುವವರ ಮನೆಯಲ್ಲಿ ಕೆಲಸಕ್ಕಿದ್ದು, ಆತ ಇನ್ನೊಬ್ಬನ (ಬಾಲಾಪರಾಧಿ) ಜೊತೆಗೂಡಿ ಮೋಹನ್ ಕುಮಾರ್ ಮನೆಯಲ್ಲಿ 50 ಲಕ್ಷ ರೂಪಾಯಿ ದೋಚಿದ್ದಾನೆ.

ಕಳ್ಳತನ ಮಾಡಿದ ನಂತರ ರಾಜಸ್ಥಾನಕ್ಕೆ ಪರಾರಿಯಾಗಲು ಪ್ರಯತ್ನ ನಡೆಸಿದ್ದಾರೆ. ಈ ವೇಳೆ ಮೋಹನ್ ಕುಮಾರ್ ದರೋಡೆ ಕುರಿತಂತೆ ಸೇಲಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ತನಿಖೆ ನಡೆಸಿದ ಪೊಲೀಸರು, ಆರೋಪಿಗಳು ರಾಜಸ್ಥಾನ ಮೂಲದವರಾಗಿದ್ದು, ತಮ್ಮ ಸ್ವಂತ ರಾಜ್ಯಕ್ಕೆ ಪರಾರಿಯಾಗುತ್ತಾರೆ ಎಂದು ಊಹಿಸಿದ್ದಾರೆ.

ಇದನ್ನೂ ಓದಿ: 2011ರಿಂದ ನೀವು ಒಮ್ಮೆಯಾದ್ರೂ ಏರ್​ ಇಂಡಿಯಾದಲ್ಲಿ ಓಡಾಡಿದ್ರೆ ಎಚ್ಚೆತ್ತುಕೊಳ್ಳಿ..

ರೈಲಿನಲ್ಲಿ ಸಂಚಾರ ಮಾಡಬಹುದಾದ ಸಾಧ್ಯತೆ ಇರುವುದರಿಂದ ಚೆನ್ನೈ ಮತ್ತು ಅಹಮದಾಬಾದ್ ನಡುವಿನ ನವಜೀವನ್ ಎಕ್ಸ್​ಪ್ರೆಸ್​ನಲ್ಲಿ ತೆರಳಬಹುದೆಂದು ಅಂದಾಜಿಸಿ ಖಚಿತಪಡಿಸಿಕೊಂಡಿದ್ದಾರೆ. ಇದಾದ ನಂತರ ಸೇಲಂ ಪೊಲೀಸ್ ವರಿಷ್ಠಾಧಿಕಾರಿ ಜಲಗಾಂವ್ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ನೀಡಿದ್ದಾರೆ.

ಆರೋಪಿಗಳನ್ನು ಬಂಧಿಸಿದ ಪೊಲೀಸರ ತಂಡ

ಈ ವೇಳೆ ಕಾರ್ಯೋನ್ಮುಖರಾದ ಜಲಗಾಂವ್ ಪೊಲೀಸರು ನವಜೀವನ್ ಎಕ್ಸ್​ಪ್ರೆಸ್​ನಲ್ಲಿ ಪರಿಶೀಲನೆ ನಡೆಸಿ, ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ 37 ಲಕ್ಷ ರೂಪಾಯಿಯನ್ನು ಜಪ್ತಿ ಮಾಡಲಾಗಿದ್ದು, ತಮಿಳುನಾಡು ಪೊಲೀಸರಿಗೆ ಆರೋಪಿಗಳನ್ನು ಹಸ್ತಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ.

Last Updated : May 22, 2021, 4:25 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.