ETV Bharat / bharat

ಯೂಟ್ಯೂಬ್​ ನೋಡಿ ಹೆರಿಗೆ ಮಾಡಿಕೊಂಡ 9ನೇ ತರಗತಿ ವಿದ್ಯಾರ್ಥಿನಿ: ಮಗು ಸಾವು, ತಾಯಿ ಪ್ರಾಣಕ್ಕೂ ಕುತ್ತು! - ಇನ್​ಸ್ಟಾಗ್ರಾಂನಲ್ಲಿ ಅರಳಿದ ಪ್ರೇಮ

9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಭಳು ಯೂಟ್ಯೂಬ್ ವಿಡಿಯೋ​ ನೋಡಿ ಹೆರಿಗೆ ಮಾಡಿಕೊಂಡಿದ್ದು, ಈ ವೇಳೆ ಮಗು ಸಾವಿಗೀಡಾದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಬೆಳಕಿಗೆ ಬಂದಿದೆ.

a-15-year-old-girl-gave-birth-to-herself-by-watching-youtube-video-in-nagpur
ಯೂಟ್ಯೂಬ್​ ನೋಡಿ ಹೆರಿಗೆ ಮಾಡಿಕೊಂಡ 9ನೇ ತರಗತಿ ವಿದ್ಯಾರ್ಥಿನಿ
author img

By

Published : Mar 5, 2023, 8:26 PM IST

ನಾಗ್ಪುರ (ಮಹಾರಾಷ್ಟ್ರ): ನೆರೆಯ ಮಹಾರಾಷ್ಟ್ರದಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಯೂಟ್ಯೂಬ್​ ವಿಡಿಯೋ ನೋಡಿ ಹೆರಿಗೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಈ ವೇಳೆ ಮಗು ಸಾವನ್ನಪ್ಪಿದ್ದು, ಹೆರಿಗೆಯ ನಂತರ ಭಾರಿ ರಕ್ತಸ್ರಾವ ಉಂಟಾಗಿ ಬಾಲಕಿಯ ಪ್ರಾಣ ಕೂಡ ಅಪಾಯದಲ್ಲಿದೆ ಎಂದು ವರದಿಯಾಗಿದೆ.

ನಾಗ್ಪುರ ನಗರದ ಅಂಬಾಝರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾರ್ಚ್​ 3ರಂದು ಈ ಘಟನೆ ನಡೆದಿದೆ. ಅಪ್ರಾಪ್ತ ವಯಸ್ಸಿನ ಬಾಲಕಿ ಹೆರಿಗೆ ಮಾಡಿಕೊಂಡ ಬಳಿಕ ಮಗು ಮೃತಪಟ್ಟಿದೆ. ಸದ್ಯ ಗಂಭೀರ ಸ್ಥಿತಿಯಲ್ಲಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿ: ಸಂತ್ರಸ್ತ ಬಾಲಕಿ ಕೆಲ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಈ ನೋವು ಹೆಚ್ಚಾಗ ಯೂಟ್ಯೂಬ್​ನಲ್ಲಿ ವಿಡಿಯೋಗಳನ್ನು ವೀಕ್ಷಿಸಿ ತನ್ನ ಮನೆಯಲ್ಲೇ ಪ್ರಸವಕ್ಕೆ ಬೇಕಾದ ಸಾಮಾಗ್ರಿಗಳನ್ನೆಲ್ಲಾ ತಾನೇ ಜೋಡಿಸಿಕೊಂಡಿದ್ದಾಳೆ. ಇದರ ನಡುವೆ ತಾಯಿ ಕೆಲಸಕ್ಕೆ ಹೋದಾಗ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗ ಯೂಟ್ಯೂಬ್ ವಿಡಿಯೋಗಳನ್ನು ನೋಡುತ್ತ ಮಗುವಿಗೆ ಜನ್ಮ ನೀಡಲು ಮುಂದಾಗಿದ್ದಾಳೆ. ಆದರೆ, ಈ ಘಟನೆಯಲ್ಲಿ ಮಗು ಸಾವನ್ನಪ್ಪಿದ್ದರಿಂದ ಆ ಶವವನ್ನು ಬಚ್ಚಿಟ್ಟಿದ್ದಾರೆ. ಮತ್ತೊಂದೆಡೆ, ತಾಯಿ ಮನೆಗೆ ಹಿಂದಿರುಗಿದಾಗ ಕೊಠಡಿಯ ಎಲ್ಲೆಡೆ ರಕ್ತದ ಕಲೆಗಳು ಪತ್ತೆಯಾಗಿವೆ. ಜೊತೆಗೆ ಬಾಲಕಿಯ ಆರೋಗ್ಯವೂ ಹದಗೆಟ್ಟಿರುವುದು ಬೆಳಕಿಗೆ ಬಂದಿದೆ. ಆಗ ಬಾಲಕಿಯನ್ನು ತಾಯಿ ವಿಚಾರಿಸಿದಾಗ ಇಡೀ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸ್​ ಅಧಿಕಾರಿ ಸಂತೋಷ್​ ಭೋಯಾನೆ ತಿಳಿಸಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಅರಳಿದ ಪ್ರೇಮ, ಅತ್ಯಾಚಾರ?: ಈ ಸಂತ್ರಸ್ತ ಬಾಲಕಿ ಸದ್ಯ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಒಂದು ವರ್ಷದ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಚಾಟ್ ಮಾಡುವಾಗ ಬಾಲಕಿಗೆ ಏಕ್ ಠಾಕೂರ್ ಎಂಬ ಯುವಕ ಪರಿಚಯವಾಗಿತ್ತು. ನಂತರ ಆರೋಪಿ ಆಕೆಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಸಂಪೂರ್ಣ ತನಿಖೆ ಸಂತ್ರಸ್ತ ಬಾಲಕಿ ಮತ್ತು ಆಕೆ ತಾಯಿಯಿಂದ ದೂರು ಪಡೆಯಲಾಗಿದೆ. ಈ ದೂರಿನ ಪ್ರಕಾರ, ಆರೋಪಿ ಏಕ್ ಠಾಕೂರ್ ಮತ್ತು ಬಾಲಕಿ ಇಬ್ಬರ ನಡುವೆ ಪ್ರೇಮ ಅರಳಿದ ಬಳಿಕ ಪರಸ್ಪರ ಭೇಟಿ ಮಾಡುತ್ತಿದ್ದರು. ಇದರ ನಡುವೆ ಆರೋಪಿಯು ಬಾಲಕಿಗೆ ಸ್ಥಳವೊಂದಕ್ಕೆ ಭೇಟಿಯಾಗಲು ಆಹ್ವಾನಿಸಿದಾಗ ಆಕೆ ಅಲ್ಲಿಗೆ ಹೋಗಿದ್ದಳು. ನಂತರ ಆರೋಪಿ ಠಾಕೂರ್ ಆಕೆಯನ್ನು ಸ್ನೇಹಿತರ ಕೊಠಡಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಬಲವಂತವಾಗಿ ಮದ್ಯ ಕುಡಿಸಿದ್ದ. ಜೊತೆಗೆ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಬಾಲಕಿ ಗರ್ಭವತಿಯಾಗಿದ್ದಳು ಎಂದು ಸಂತೋಷ್​ ಭೋಯಾನೆ ವಿವರಿಸಿದ್ದಾರೆ.

ಆರೋಪಿ ಪತ್ತೆಗೆ ಕ್ರಮ: ಸಂತ್ರಸ್ತ ಬಾಲಕಿ ಪೊಲೀಸರಿಗೆ ನೀಡಿರುವ ಹೇಳಿಕೆ ಪ್ರಕಾರ, ಆರೋಪಿಯ ಸಂಪೂರ್ಣ ಹೆಸರು ಕೂಡ ಆಕೆ ಗೊತ್ತಿಲ್ಲ. ಹೀಗಾಗಿ ಸದ್ಯ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಆರೋಪಿ ಪತ್ತೆಗೆ ಸೈಬರ್ ಸೆಲ್​ ನೆರವು ಪಡೆದು ಪತ್ತೆಗೆ ಕ್ರಮ ವಹಿಸಲಾಗಿದೆ. ಸಂತ್ರಸ್ತೆಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ತಮಗಿಂತ ಮೊದಲು ಮಗಳ ಮದುವೆ ಮಾಡಲು ಮುಂದಾಗಿದ್ದ ಅತ್ತಿಗೆಯನ್ನು ಕೊಂದ ಸಹೋದರರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.