ETV Bharat / bharat

ಗಾಯಗೊಂಡ ತಂದೆಯನ್ನು ಸೈಕಲ್​ ಟ್ರಾಲಿಯಲ್ಲಿ ಆಸ್ಪತ್ರೆಗೆ ಸಾಗಿಸಿದ 14ರ ಬಾಲಕಿ

ತಂದೆಯನ್ನು ಟ್ರಾಲಿಯಲ್ಲಿ ಮನೆಗೆ ಕರೆತರುತ್ತಿರುವಾಗ ಮಧ್ಯಪ್ರವೇಶಿಸಿದ ಶಾಸಕರು, ಬಾಲಕಿಯ ತಂದೆಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

author img

By ETV Bharat Karnataka Team

Published : Oct 27, 2023, 11:16 AM IST

14 year old girl carried her injured father to the hospital in trolley
ಗಾಯಗೊಂಡ ತಂದೆಯನ್ನು ಟ್ರಾಲಿಯಲ್ಲಿ ಆಸ್ಪತ್ರೆಗೆ ಸಾಗಿಸಿದ 14ರ ಬಾಲಕಿ

ಭದ್ರಕ್​ (ಒಡಿಶಾ): 14 ವರ್ಷದ ಬಾಲಕಿಯೊಬ್ಬಳು ತನ್ನ ಗಾಯಗೊಂಡ ತಂದೆಯನ್ನು ಸೈಕಲ್​ ಟ್ರಾಲಿಯಲ್ಲಿ ಕೂರಿಸಿ, ನಡಿಗಾಂವ್​ನಿಂದ ಭದ್ರಕ್​ ಜಿಲ್ಲಾ ಕೇಂದ್ರ ಆಸ್ಪತ್ರೆವರೆಗೆ 35 ಕಿಲೋ ಮೀಟರ್​ ತಳ್ಳಿಕೊಂಡು ಹೋಗಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ಅಕ್ಟೋಬರ್​ 22ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ತಂದೆಯನ್ನು ಮಗಳು ಟ್ರಾಲಿಯಲ್ಲಿ ತಳ್ಳಿಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳನ್ನು ವೈರಲ್​ ಆಗಿದೆ. ಈ ದೃಶ್ಯವನ್ನು ಕಂಡ ಕೆಲವು ಪತ್ರಕರ್ತರು ವಿಡಿಯೋ ಮಾಡಿ ಸುದ್ದಿ ಮಾಡಿದ ನಂತರ ವಿಷಯ ಮುನ್ನೆಲೆಗೆ ಬಂದಿದೆ.

ಮೂಲಗಳ ಪ್ರಕಾರ, ಅಕ್ಟೋಬರ್​ 22ರಂದು ನಡೆದ ಗುಂಪು ಘರ್ಷಣೆಯಲ್ಲಿ ದುಸುರಿ ನಾಡಿಗಾಂವ್​ ನಿವಾಸಿ ಸಂಭುನಾಥ ಸೇಠಿ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ವಾಹನಕ್ಕೆ ಬಾಡಿಗೆ ನೀಡಲು ಸಾಧ್ಯವಾಗದೇ ಸಂಭುನಾಥ್​ ಅವರ 14 ವರ್ಷದ ಮಗಳು ಸುಜಾತಾ ತಂದೆಯಲ್ಲಿ ಸೈಕಲ್​ ಟ್ರಾಲಿಯಲ್ಲಿ ಕೂರಿಸಿಕೊಂಡು ಧಮ್​ನಗರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾಳೆ. ನಂತರ ಅಕ್ಟೋಬರ್​ 23 ರಂದು ಅದೇ ಟ್ರಾಲಿಯಲ್ಲಿ ತನ್ನ ತಂದೆಯನ್ನು ಭದ್ರಕ್​ ಡಿಎಚ್​ಎಚ್​ಗೆ ಕರೆದುಕೊಂಡು ಹೋಗಿದ್ದಾಳೆ.

ಭದ್ರಕ್​ ಸರ್ಕಾರಿ ಆಸ್ಪತ್ರೆಯ ವೈದ್ಯರು ಸಂಭುನಾಥ್​ ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಹಾಗಾಗಿ ಬೇರೆ ಆಯ್ಕೆ ಇಲ್ಲದೇ ತಂದೆಯನ್ನು ಮತ್ತೆ ಟ್ರಾಲಿಯಲ್ಲಿಯೇ ಮನೆಗೆ ವಾಪಸ್​ ಕರೆದುಕೊಂಡು ಬಂದಿದ್ದಾಳೆ. ಈ ವೇಳೆ ಪತ್ರಕರ್ತರು ಗಮನಿಸಿದ್ದು, ಆಕೆಯನ್ನು ತಡೆದು ವಿಚಾರಿಸಿದ್ದಾರೆ. ನಂತರ ಭದ್ರಕ್​ ಶಾಸಕ ಹಾಗೂ ಧಮ್​ನಗರದ ಮಾಜಿ ಶಾಸಕ ಸ್ಥಳಕ್ಕೆ ಆಗಮಿಸಿ, ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಮಧ್ಯಪ್ರವೇಶಿಸಿದ ಅವರು ಆಕೆಯ ತಂದೆಯ ಚಿಕಿತ್ಸೆಗೆ ಭದ್ರಕ್​ ಡಿಎಚ್​ಎಚ್​ನಲ್ಲಿಯೇ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ.

ಇದನ್ನೂ ಓದಿ : ಗಂಡನ ಮನೆಯಲ್ಲಿ ಕಿರುಕುಳ.. ಸಂಗೀತ ವಾದ್ಯಮೇಳಗಳೊಂದಿಗೆ ಮೆರವಣಿಗೆಯಲ್ಲಿ ಮಗಳನ್ನು ತವರಿಗೆ ಕರೆತಂದ ತಂದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.