ETV Bharat / bharat

ಬ್ರಿಟಿಷರು ನೆಟ್ಟಿದ್ದ 114 ವರ್ಷ ಹಳೆಯ ಸಾಗುವಾನಿ ಮರ 39 ಲಕ್ಷ ರೂಪಾಯಿಗೆ ಹರಾಜು! - ಸಾಗುವಾನಿ ಮರ ಹರಾಜು

ಕೇರಳದ ಅರಣ್ಯ ಇಲಾಖೆಯು ಇತಿಹಾಸದಲ್ಲೇ ಅತ್ಯಧಿಕ ಬೆಲೆಗೆ ಶತಮಾನದಷ್ಟು ಹಳೆಯ ಸಾಗುವಾನಿ ಮರವನ್ನು ಮಾರಾಟ ಮಾಡಿದೆ.

a-114-year-old-nilambur-teak-tree-actioned-for-39-dot-29-lakhs-in-kerala
114 ವರ್ಷ ಹಳೆಯ ಸಾಗುವಾನಿ ಮರ 39.25 ಲಕ್ಷಕ್ಕೆ ಹರಾಜು
author img

By

Published : Feb 21, 2023, 9:53 PM IST

Updated : Feb 21, 2023, 11:05 PM IST

ಬ್ರಿಟಿಷರು ನೆಟ್ಟಿದ್ದ 114 ವರ್ಷ ಹಳೆಯ ಸಾಗುವಾನಿ ಮರ 39 ಲಕ್ಷ ರೂಪಾಯಿಗೆ ಹರಾಜು!

ಮಲಪ್ಪುರಂ (ಕೇರಳ): ನೆರೆಯ ಕೇರಳದಲ್ಲಿ 114 ವರ್ಷದ ನಿಲಂಬೂರ್ ತೇಗ (ಸಾಗುವಾನಿ ಅಥವಾ ಟೀಕ್​ ವುಡ್) ಮರವೊಂದು 39.29 ಲಕ್ಷ ರೂಪಾಯಿಗೆ ಹರಾಜಿನಲ್ಲಿ ಮಾರಾಟವಾಗಿದೆ. ಇದು ಅರಣ್ಯ ಇಲಾಖೆಯ ಇತಿಹಾಸದಲ್ಲೇ ಅತ್ಯಧಿಕ ಬೆಲೆಗೆ ಮಾರಾಟವಾದ ಸಾರ್ವಕಾಲಿಕ ದಾಖಲೆ ಎಂದು ಪರಿಗಣಿಸಲಾಗಿದೆ. ತಿರುವನಂತಪುರಂ ಮೂಲದ ಅಜೀಶ್ ಎಂಬುವವರು ಇಷ್ಟೊಂದು ಬೆಲೆಗೆ ಮರದ ಮೂರು ತಂಡುಗಳನ್ನು ಖರೀದಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ನಿಲಂಬೂರಿನ ಅರಣ್ಯ ಇಲಾಖೆಯ ಅರುವಕೊಡೆ ನೆಡುಂಕಯಂ ಡಿಪೋಗಳಲ್ಲಿ ನಡೆಯುವ ಇ-ಹರಾಜಿನಲ್ಲಿ ಇವರು ಭಾಗವಹಿಸುತ್ತಿದ್ದಾರೆ.

ಬ್ರಿಟಿಷರು ನೆಟ್ಟಿದ್ದರು: ರಾಜ್ಯದ ಸಂರಕ್ಷಿತ ಪ್ರದೇಶದಲ್ಲಿ 1909ರಲ್ಲಿ ಬ್ರಿಟಿಷ್ ಅಧಿಕಾರಿಗಳು ಈ ಸಾಗುವಾನಿ ಗಿಡ ನೆಟ್ಟಿದ್ದರು. ಹೆಮ್ಮರವಾಗಿ ಬೆಳೆದು ಒಣಗಿ ಬಿದ್ದ ನಂತರ ಫೆಬ್ರವರಿ 10ರಂದು ನೆಡುಂಕಯಂ ಡಿಪೋದಲ್ಲಿ ಇದರ ಮೂರು ತುಂಡುಗಳನ್ನು ಹರಾಜಿಗೆ ಕರೆಯಲಾಗಿತ್ತು. ಈ ತುಂಡುಗಳು ಸುಮಾರು ಎಂಟು ಘನ ಮೀಟರ್​ ಇದ್ದವು.

ಹರಾಜಿನಲ್ಲಿ ಮರದ ತುಂಡುಗಳಿಗೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಒಂದು ತುಂಡು 23 ಲಕ್ಷ ರೂಪಾಯಿಗೆ ಹರಾಜಾದರೆ, ಇತರ ತಂಡುಗಳು ಕ್ರಮವಾಗಿ 11 ಲಕ್ಷ ರೂ. ಮತ್ತು 5.25 ಲಕ್ಷ ರೂಪಾಯಿಗೆ ಮಾರಾಟವಾಗಿವೆ. ಒಣಗಿದ ಮರದಿಂದ ಸರ್ಕಾರದ ಬೊಕ್ಕಸಕ್ಕೆ 39.25 ಲಕ್ಷ ರೂ. ಆದಾಯ ಸಂಗ್ರಹವಾಗಿದೆ.

ನಿಲಂಬೂರ್ ತೇಗದ ಮರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಉತ್ತಮ ಮಾರುಕಟ್ಟೆ ಇದೆ. ಇದು ಸಂರಕ್ಷಿತ ಮರವಾಗಿದ್ದರಿಂದ ಇಲ್ಲಿ ಒಣಗಿದಾಗ ಅಥವಾ ಬಿದ್ದಾಗ ಮಾತ್ರ ಹರಾಜು ಮಾಡಲಾಗುತ್ತದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನೆಡುಂಕಯಂ ಟಿಂಬರ್ ಸೇಲ್ ಡಿಪೋದ ಅಧಿಕಾರಿಗಳು, ಈ ಮರಕ್ಕೆ ಹೆಚ್ಚಿನ ಬೆಲೆ ನಿರೀಕ್ಷಿಸಿದ್ದೆವು. ಆದರೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಾರಾಟವಾಗುತ್ತದೆ ಅಂತಾ ನಿರೀಕ್ಷಿಸಿರಲಿಲ್ಲ ಎಂದು ತಿಳಿಸಿದ್ದಾರೆ.

ನೆಡುಂಕಯಂ ಡಿಪೋದಿಂದ ಮರದ ದಿಮ್ಮಿಗಳನ್ನು ಲಾರಿಗಳಲ್ಲಿ ತಿರುವನಂತಪುರಕ್ಕೆ ಕೊಂಡೊಯ್ಯಲಾಗಿದೆ. ಇದರ ಲೋಡಿಂಗ್ ಶುಲ್ಕವೇ 15 ಸಾವಿರ ರೂ. ಆಗಿದ್ದು, ಲಾರಿ ಬಾಡಿಗೆ ಸೇರಿದಂತೆ ಒಟ್ಟಾರೆ 40 ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಖರೀದಿದಾರ ಅಜೀಶ್ ಮಾಹಿತಿ ನೀಡಿದ್ದಾರೆ. ದಾಖಲೆ ಬೆಲೆಗೆ ಮಾರಾಟವಾದ ಸಾಗುವಾನಿ ತುಂಡುಗಳನ್ನು ಲಾರಿಗೆ ತುಂಬುತ್ತಿದ್ದುದನ್ನು ನೋಡಲು ಸುತ್ತಮುತ್ತಲಿನ ಅನೇಕ ಜನರು ಬಂದಿದ್ದರು.

ಇದನ್ನೂ ಓದಿ: 1.15 ಲಕ್ಷ ಕೊಟ್ಟು ಒಂದು ಕೆಜಿ ಮನೋಹರಿ ಗೋಲ್ಡ್ ಚಹಾ ಪುಡಿ ಖರೀದಿಸಿದ ಹೋಟೆಲ್ ಉದ್ಯಮಿ!

Last Updated : Feb 21, 2023, 11:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.