ETV Bharat / bharat

ಬಡ ರಾಷ್ಟ್ರಗಳ 99% ಕ್ಕಿಂತಲೂ ಹೆಚ್ಚು ಜನಸಂಖ್ಯೆಗೆ ಇನ್ನೂ ವ್ಯಾಕ್ಸಿನೇಷನ್​ ಸಾಧ್ಯವಾಗಿಲ್ಲ! - ಸಾರ್ವಜನಿಕ ಆರೋಗ್ಯ ತಜ್ಞರು

ಕೆಲವು ದೇಶಗಳು ತನ್ನ ನಾಗರಿಕರಿಗೆ ಇನ್ನೂ ಕೊರೊನಾ ಲಸಿಕೆ ಮೊದಲ ಡೋಸ್​​ ನೀಡಲೂ ಹೆಣಗಾಡುತ್ತಿವೆ. ಆದರೆ, ಇತ್ತ ಶ್ರೀಮಂತ ರಾಷ್ಟ್ರಗಳು ಒಂದು ಹೆಜ್ಜೆ ಮುಂದೆ ಹೋಗಿವೆ. ಅಮೆರಿಕ 1.2 ಬಿಲಿಯನ್ ಕೋವಿಡ್-19 ಲಸಿಕೆಗಳನ್ನು ಖರೀದಿಸಿದೆ.(ಒಬ್ಬ ವ್ಯಕ್ತಿಗೆ ಸುಮಾರು 3.7 ಡೋಸ್) ಆದರೆ, ಕೆನಡಾ 381 ಮಿಲಿಯನ್ ಡೋಸ್​ಗಳನ್ನು ಸಂಗ್ರಹಿಸಿದೆ, ಇದು ಅಗತ್ಯಕ್ಕಿಂತ ಐದು ಪಟ್ಟು ಹೆಚ್ಚಾಗಿದೆ..

vaccinated
ಲಸಿಕೆ
author img

By

Published : Jun 28, 2021, 8:57 PM IST

ಹೈದರಾಬಾದ್ ​​(ತೆಲಂಗಾಣ) : ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಗ್ರಹಿಸಬೇಕಾದರೆ ವಿಶ್ವದಲ್ಲಿರುವ 7.9 ಶತಕೋಟಿ ಜನರಲ್ಲಿ ಶೇ. 70 ಜನರಿಗೆ ಲಸಿಕೆ ಹಾಕುವ ಅವಶ್ಯಕತೆಯಿದೆ. 2021ರ ಜೂನ್ 21ರ ವೇಳೆಗೆ ಶ್ರೀಮಂತ ರಾಷ್ಟ್ರಗಳ ಕೇವಲ 10.04% ರಷ್ಟು ಜನರು ಮಾತ್ರ ಸಂಪೂರ್ಣ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗಿದೆ. ಆದರೆ, ಬಡ ರಾಷ್ಟ್ರಗಳಲ್ಲಿ ಕೇವಲ 0.9% ಜನರು ಮಾತ್ರ ಕೊರೊನಾ ಲಸಿಕೆಯ ಮೊದಲ ಡೋಸ್​ ಹಾಕಿಸಿಕೊಳ್ಳಲು ಶಕ್ತವಾಗಿವೆ. ಏಕೆಂದರೆ, ಶ್ರೀಮಂತ ರಾಷ್ಟ್ರಗಳು ಜೂನ್ 2021ರ ವೇಳೆಗೆ ಲಭ್ಯವಿರುವ ಎಲ್ಲಾ ಲಸಿಕೆಗಳಲ್ಲಿ ಅರ್ಧವನ್ನು ತಾವೇ ಖರೀದಿಸಿವೆ ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಹೇಳುತ್ತಾರೆ.

ಈಗಾಗಲೇ ಯುಎಸ್​​, ಕೆನಡಾ, ಯುನೈಟೆಡ್ ಕಿಂಗ್‌ಡಮ್, ಯುರೋಪಿಯನ್ ಯೂನಿಯನ್ ಮತ್ತು ಜಪಾನ್, ಬಡ ರಾಷ್ಟ್ರಗಳಿಗೆ 1 ಬಿಲಿಯನ್ ಡೋಸ್​ಗಳನ್ನು ನೀಡುವುದಾಗಿ ಘೋಷಿಸಿವೆ. ಆದಾಗ್ಯೂ, ನ್ಯಾಯಯುತ ವ್ಯಾಕ್ಸಿನೇಷನ್ ನೀತಿಯನ್ನು ಜಾರಿಗೊಳಿಸಲಾಗಿದೆಯೇ ಇಲ್ಲವೇ ಎಂಬುದರ ಮೇಲೆ ಬೆಳಕು ಚೆಲ್ಲಲು ಇನ್ನೂ ಪ್ರಯತ್ನಗಳು ನಡೆಯುತ್ತಿವೆ. ಕೊರೊನಾ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಲು ಜಗತ್ತಿನ 70% ಜನರಿಗೆ ಲಸಿಕೆ ನೀಡುವ ಅವಶ್ಯಕತೆಯಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೆಲವು ದೇಶಗಳು ತನ್ನ ನಾಗರಿಕರಿಗೆ ಇನ್ನೂ ಕೊರೊನಾ ಲಸಿಕೆ ಮೊದಲ ಡೋಸ್ ನೀಡಲೂ ಹೆಣಗಾಡುತ್ತಿವೆ. ಆದರೆ, ಇತ್ತ ಶ್ರೀಮಂತ ರಾಷ್ಟ್ರಗಳು ಒಂದು ಹೆಜ್ಜೆ ಮುಂದೆ ಹೋಗಿವೆ. ಅಮೆರಿಕ 1.2 ಬಿಲಿಯನ್ ಕೋವಿಡ್-19 ಲಸಿಕೆಗಳನ್ನು ಖರೀದಿಸಿದೆ. (ಒಬ್ಬ ವ್ಯಕ್ತಿಗೆ ಸುಮಾರು 3.7 ಡೋಸ್) ಆದರೆ, ಕೆನಡಾ 381 ಮಿಲಿಯನ್ ಡೋಸ್​ಗಳನ್ನು ಸಂಗ್ರಹಿಸಿದೆ. ಇದು ಅಗತ್ಯಕ್ಕಿಂತ ಐದು ಪಟ್ಟು ಹೆಚ್ಚಾಗಿದೆ.

ಶ್ರೀಮಂತ ರಾಷ್ಟ್ರಗಳ ಈ ಅತಿಯಾದ ಲಸಿಕೆ ಖರೀದಿಯಿಂದಾಗಿ ಕಡಿಮೆ ಮತ್ತು ಮಧ್ಯಮ-ಆದಾಯದ ರಾಷ್ಟ್ರಗಳಿಗೆ ಕೋವಿಡ್ ಲಸಿಕೆಗಳನ್ನು ಖರೀದಿಸಲು ಕಷ್ಟವಾಗುತ್ತಿದೆ. ಬೆನಿನ್ ಮತ್ತು ಹೊಂಡುರಾಸ್‌ನಂತಹ ದೇಶಗಳು ಸಹ ಕ್ರಮವಾಗಿ ಎರಡು ಲಕ್ಷ ಡೋಸ್ ಸಿನೋವಾಕ್ (ಚೀನಾದ ಕೋವಿಡ್​ ಲಸಿಕೆ) ಮತ್ತು 1.4 ಮಿಲಿಯನ್ ಡೋಸ್ ಕೋವಿಶೀಲ್ಡ್ (ಅಸ್ಟ್ರಾಜೆನೆಕಾ)ಗಳನ್ನು ಖರೀದಿಸಿವೆ. ವಿಪರ್ಯಾಸವೆಂದರೆ 4,61,500 ಡೋಸ್ ಕೋವಿಡ್ ಲಸಿಕೆಗಳನ್ನು ನೀಡಿದ್ದ ಹೈಟಿಯು ತೀವ್ರ ಕೊರೊನಾವೈರಸ್ ಬಿಕ್ಕಟ್ಟಿಗೆ ತುತ್ತಾಗಿದೆ.

ಒಂದು ವೇಳೆ ದೇಶಗಳು ಮುಂದೆ ಬಂದು ಸಮನಾದ ಲಸಿಕೆ ವಿತರಣಾ ಕಾರ್ಯತಂತ್ರವನ್ನು ಜಾರಿಗೆ ತಂದಿದ್ದರೆ, ಜಾಗತಿಕವಾಗಿ 61% ಸಾವುಗಳನ್ನು ತಡೆಯಬಹುದಿತ್ತು ಎಂದು ಕೆಲವು ಅಂಕಿ-ಅಂಶಗಳು ಬಹಿರಂಗಪಡಿಸಿವೆ. ಈ ಮೊದಲು ಜಾಗತಿಕವಾಗಿ ಕೊರೊನಾ ವಿರುದ್ಧ ಹೋರಾಡಲು ಎಲ್ಲಾ ರಾಷ್ಟ್ರಗಳು ಒಂದಾಗಿದ್ದರೆ ಕೋವಿಡ್- 19 ಸಾವಿನ ಸಂಖ್ಯೆಯನ್ನು ಅರ್ಧದಷ್ಟು ಕಡಿಮೆಗೊಳಿಸಬಹುದಿತ್ತು. ಆದರೆ, ತೀವ್ರವಾದ ಅಸಮಾನತೆ ಇರುವ ದೇಶಗಳಲ್ಲಿ ಲಸಿಕೆ ಅಸಮಾನತೆಯ ಪರಿಸ್ಥಿತಿ ಕೂಡ ಕೆಟ್ಟದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.