ವಿದಿಶಾ (ಮಧ್ಯಪ್ರದೇಶ): ಕೋವಿಡ್ ಸಾಂಕ್ರಾಮಿಕ ಸುಳಿಯಲ್ಲಿ ಸಿಲುಕಿ ದೇಶ ಒದ್ದಾಡುತ್ತಿದ್ದ ವೇಳೆ ನಡೆದ ಹರಿದ್ವಾರದ ಮಹಾ ಕುಂಭಮೇಳವು ಸೋಂಕು ಹರಡುವಿಕೆಗೆ ಹೆಚ್ಚಿನ ದಾರಿ ಮಾಡಿಕೊಟ್ಟಿದೆ. ಕುಂಭಮೇಳದಲ್ಲಿ ಪಾಲ್ಗೊಂಡು ಮಧ್ಯಪ್ರದೇಶಕ್ಕೆ ಹಿಂದಿರುಗಿದ ಶೇ.99 ರಷ್ಟು ಜನರ ವರದಿ ಪಾಸಿಟಿವ್ ಬಂದಿದೆ.
ಇಲ್ಲಿನ ವಿದಿಶಾ ಜಿಲ್ಲೆಯ ಗಯಾರಸ್ಪುರ ಪಟ್ಟಣದ ಕುಂಭಮೇಳಕ್ಕೆ ತೆರಳಿದ್ದ 83 ಯಾತ್ರಾರ್ಥಿಗಳ ಪೈಕಿ 60 ಮಂದಿಗೆ ಸೋಂಕು ತಗುಲಿರುವುದು ಗೊತ್ತಾಗಿದೆ. ಇನ್ನೂ 22 ಜನರನ್ನು ಪತ್ತೆಹಚ್ಚಿ, ಅವರನ್ನು ಪರೀಕ್ಷೆಗೆ ಒಳಪಡಿಸಲು ವಿದಿಶಾ ಆಡಳಿತ ಆದೇಶಿಸಿದೆ.
ಇದನ್ನೂ ಓದಿ: ಕೊರೊನಾ ಮರೆತ ಭಕ್ತರು: ಗಂಗೆಯಲ್ಲಿ 'ಶಾಹಿ ಸ್ನಾನ' ಮಾಡಿದ್ದು ಬರೋಬ್ಬರಿ 35 ಲಕ್ಷ ಮಂದಿ!
ಉತ್ತರಾಖಂಡದ ಹರಿದ್ವಾರದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ನಡೆದ ಶಾಹಿ ಸ್ನಾನದಲ್ಲಿ ಲಕ್ಷಾಂತರ ಭಕ್ತರು, ಸಾಧು-ಸಂತರು ಪಾಲ್ಗೊಂಡಿದ್ದರು. ಈ ವೇಳೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಕುಂಭಮೇಳ ಆಚರಿಸಿದ್ದರು. ದೇಶಾದ್ಯಂತ ಇದರ ವಿರುದ್ಧ ವ್ಯಾಪಕ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹಿಂದೂ ಆಚಾರ್ಯ ಸಭಾದ ಅಧ್ಯಕ್ಷರಾದ ಸ್ವಾಮಿ ಅವಧೇಶಾನಂದ ಗಿರಿ ಅವರಲ್ಲಿ ಕುಂಭಮೇಳವನ್ನು ಸಾಂಕೇತಿಕವಾಗಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದರು. ಆ ಬಳಿಕ ಅವಧೇಶಾನಂದ ಸ್ವಾಮೀಜಿ ಕುಂಭಮೇಳ ಮೊಟಕುಗೊಳಿಸಿದ್ದರು.
ಇದನ್ನೂ ಓದಿ: ಹರಿದ್ವಾರ ಕುಂಭಮೇಳ ಮೊಟಕು: ನಮೋ ಕರೆಗೆ ಸ್ಪಂದಿಸಿದ ಅವಧೇಶಾನಂದ ಸ್ವಾಮೀಜಿ!
ಮಧ್ಯಪ್ರದೇಶದ ಕೋವಿಡ್ ವಿವರ
ಮಧ್ಯಪ್ರದೇಶದಲ್ಲಿ ಈವರೆಗೆ 6,00,430 ಕೋವಿಡ್ ಕೇಸ್ಗಳು ಪತ್ತೆಯಾಗಿದ್ದು, 5,905 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.