ಜೈಪುರ(ರಾಜಸ್ಥಾನ): ಕೋಟಾದ ಜೆ ಕೆ ಲಾನ್ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ 9 ನವಜಾತ ಶಿಶುಗಳು ಸಾವನ್ನಪ್ಪಿದ್ದು, ತನಿಖೆ ನಡೆಸಲು ಜಿಲ್ಲಾ ಆಡಳಿತ ಸಮಿತಿಯೊಂದನ್ನು ರಚನೆ ಮಾಡಿದೆ.
ಒಂದೆಡೆ ಆಡಳಿತವು ಕೊರೊನಾ ಸಾಂಕ್ರಾಮಿಕ ರೋಗ ಎದುರಿಸುತ್ತಿದೆ. ಮತ್ತೊಂದೆಡೆ ಕೇವಲ 24 ಗಂಟೆಗಳಲ್ಲಿ 9 ನವಜಾತ ಶಿಶುಗಳ ಸಾವು ಆತಂಕಕ್ಕೆ ಕಾರಣವಾಗಿದೆ. ಮೃತರ ಸಂಬಂಧಿಕರು ಆಸ್ಪತ್ರೆಯ ವಿರುದ್ಧ ನಿರ್ಲಕ್ಷ್ಯದ ಆರೋಪ ಹೊರಿಸಿದ್ದಾರೆ.
ಜೆ ಕೆ ಲಾನ್ ಆಸ್ಪತ್ರೆಯಲ್ಲಿ 60 ವಾರ್ಮರ್ಗಳಿದ್ದು, ಒಂದರಲ್ಲಿ ಎರಡು ಶಿಶುಗನ್ನು ಮಲಗಿಸಲಾಗುತ್ತಿತ್ತು. ಒಂದರಿಂದ ಮತ್ತೊಂದಕ್ಕೆ ಸೋಂಕು ಹರಡಿ ಶಿಶುಗಳು ಸಾವಿಗೀಡಾಗಿರಬಹುದು ಎನ್ನಲಾಗಿದೆ.
ಓದಿ ಆಸ್ಪತ್ರೆಯಲ್ಲಿ ಸೂಕ್ತ ಸೌಲಭ್ಯದ ಕೊರತೆ: ಒಂದು ತಿಂಗಳಲ್ಲಿ 100 ನವಜಾತ ಶಿಶುಗಳ ಮರಣ!
2019ರ ಅಂತ್ಯ ಮತ್ತು 2020ರ ಆರಂಭದಲ್ಲಿ ಇದೇ ಆಸ್ಪತ್ರೆಯಲ್ಲಿ ನೂರಕ್ಕೂ ಹೆಚ್ಚು ನವಜಾತ ಶಿಶುಗಳು ಸಾವನ್ನಪ್ಪಿದ್ದು, ದೇಶದಾದ್ಯಂತ ಭಾರೀ ಸದ್ದು ಮಾಡಿತ್ತು.