ನವದೆಹಲಿ: ಬ್ರಿಟನ್ನಲ್ಲಿ ಹೊಸ ರೂಪು ಪಡೆದ ಕೊರೊನಾ ವೈರಸ್ ಭಾರತದಲ್ಲಿ ಮತ್ತೆ 9 ಮಂದಿಗೆ ತಗುಲಿರುವುದು ದೃಢವಾಗಿದೆ. ಇದೀಗ ದೇಶದಲ್ಲಿನ ರೂಪಾಂತರಿ ಕೋವಿಡ್ ಪ್ರಕರಣಗಳ ಸಂಖ್ಯೆ 82ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
-
A total of 82 persons found with new mutant variant of SARS- CoV-2 virus so far: Ministry of Health and Family Welfare pic.twitter.com/MZsMS5TaVy
— ANI (@ANI) January 8, 2021 " class="align-text-top noRightClick twitterSection" data="
">A total of 82 persons found with new mutant variant of SARS- CoV-2 virus so far: Ministry of Health and Family Welfare pic.twitter.com/MZsMS5TaVy
— ANI (@ANI) January 8, 2021A total of 82 persons found with new mutant variant of SARS- CoV-2 virus so far: Ministry of Health and Family Welfare pic.twitter.com/MZsMS5TaVy
— ANI (@ANI) January 8, 2021
ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (NIV), ಬೆಂಗಳೂರಿನ ನಿಮ್ಹಾನ್ಸ್, ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ (IGIB) ಹಾಗೂ ಹೈದರಾಬಾದ್ನ ಪ್ರಯೋಗಾಲಯ ಸೇರಿದಂತೆ ದೇಶದಾದ್ಯಂತ ಒಟ್ಟು 10 ಲ್ಯಾಬ್ಗಳಲ್ಲಿ ಬ್ರಿಟನ್ ಸೋಂಕು ಪತ್ತೆ ಹಚ್ಚಲು ಪರೀಕ್ಷೆ ನಡೆಸಲಾಗುತ್ತಿದೆ. ಎಲ್ಲ 82 ಸೋಂಕಿತರನ್ನು ಆರೋಗ್ಯ ಕೇಂದ್ರದಲ್ಲಿ ಒಂದೇ ಕೋಣೆಯಲ್ಲಿ ಐಸೋಲೇಷನ್ನಲ್ಲಿರಿಸಲಾಗಿದೆ
ಇದನ್ನೂ ಓದಿ: ವಿಶ್ವದಲ್ಲಿ ಕೊರೊನಾದಿಂದ ಹೆಚ್ಚು ಗುಣಮುಖರಾಗಿದ್ದು ಭಾರತದಲ್ಲಿ.. ಚೇತರಿಕೆ ಪ್ರಮಾಣ ಶೇ 96.36ಕ್ಕೆ ಏರಿಕೆ
ಇಂಗ್ಲೆಂಡ್ನಲ್ಲಿ ಹೊಸ ಪ್ರಭೇದದ ಕೋವಿಡ್ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆ ನಿಯಂತ್ರಿಸುವ ಸಲುವಾಗಿ ಡಿಸೆಂಬರ್ 23 ರಿಂದ ಜನವರಿ 7ರ ವರೆಗೆ ತಾತ್ಕಾಲಿಕವಾಗಿ ಭಾರತ ಹಾಗೂ ಯುಕೆ ನಡುವೆ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿತ್ತು. ಇಂದಿನಿಂದ ಮತ್ತೆ ಉಭಯ ರಾಷ್ಟ್ರಗಳ ನಡುವೆ ವಿಮಾನ ಸೇವೆ ಪುನಾರಂಭಗೊಂಡಿದೆ. ಆದರೆ ಬ್ರಿಟನ್ನಿಂದ ಬರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲೇ ಆರ್ಟಿ - ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.