ETV Bharat / bharat

ದೇಶದಲ್ಲಿ 9.27 ಲಕ್ಷ ಮಕ್ಕಳಿಗೆ ತೀವ್ರ ಅಪೌಷ್ಟಿಕತೆ: ಹೆಚ್ಚಾಗುತ್ತಿದೆ ಹಸಿವಿನ ಹಾಹಾಕಾರ! - ರಾಜ್ಯಗಳಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಕಳೆದ ವರ್ಷ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತೀವ್ರ ಅಪೌಷ್ಟಿಕತೆಯ ಮಕ್ಕಳನ್ನು ಗುರುತಿಸುವಂತೆ ಕೇಳಿಕೊಂಡಿತ್ತು. ಇದರನ್ವಯ ಒಟ್ಟು 9,27,606 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂಬುದು ಗೊತ್ತಾಗಿದೆ.

9.27 lakh severely malnourished children in the country; Rising hunger problem
ದೇಶದಲ್ಲಿ 9.27 ಲಕ್ಷ ತೀವ್ರ ಅಪೌಷ್ಟಿಕ ಮಕ್ಕಳು; ಹೆಚ್ಚಾಗುತ್ತಿದೆ ಹಸಿವಿನ ಹಾಹಾಕಾರ!
author img

By

Published : Jun 6, 2021, 8:38 PM IST

ನವದೆಹಲಿ: ದೇಶಾದ್ಯಂತ 9.27 ಲಕ್ಷಕ್ಕೂ ಹೆಚ್ಚು ಮಕ್ಕಳು ತೀವ್ರವಾದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಸಮೀಕ್ಷೆಯೊಂದರಲ್ಲಿ ತಿಳಿದು ಬಂದಿದೆ. ಉತ್ತರ ಪ್ರದೇಶದಲ್ಲಿ ಈ ಸಂಖ್ಯೆ ಅತಿ ಹೆಚ್ಚಾಗಿದ್ದು, ಬಿಹಾರ ನಂತರದ ಸ್ಥಾನದಲ್ಲಿದೆ ಎಂದು ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ. ಕೋವಿಡ್ ಸಾಂಕ್ರಾಮಿಕ ರೋಗವು ಬಡ ಹಾಗೂ ತೀರಾ ಬಡವರ್ಗದಲ್ಲಿ ಆರೋಗ್ಯ ಮತ್ತು ಪೌಷ್ಟಿಕಾಂಶದ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಬಹುದು ಎಂಬ ವಿಷಯ ಈಗ ಆತಂಕ ಸೃಷ್ಟಿಸಿದೆ.

ಕಳೆದ ವರ್ಷ ನವೆಂಬರವರೆಗೆ ದೇಶಾದ್ಯಂತ ಆರು ತಿಂಗಳಿಂದ ಆರು ವರ್ಷದವರೆಗಿನ 9,27,606 ಮಕ್ಕಳನ್ನು 'ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ' ಮಕ್ಕಳೆಂದು ಗುರುತಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮಾಧ್ಯಮಗಳ ಆರ್‌ಟಿಐ ಪ್ರಶ್ನೆಗೆ ಉತ್ತರಿಸಿದೆ.

ಈ ಪೈಕಿ ಉತ್ತರ ಪ್ರದೇಶದಲ್ಲಿ 3,98,359 ಮತ್ತು ಬಿಹಾರದಲ್ಲಿ 2,79,427 ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿದ್ದಾರೆ ಎಂದು ಸಚಿವಾಲಯ ಹಂಚಿಕೊಂಡ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಲಡಾಖ್, ಲಕ್ಷದ್ವೀಪ, ನಾಗಾಲ್ಯಾಂಡ್, ಮಣಿಪುರ ಮತ್ತು ಮಧ್ಯಪ್ರದೇಶ ಈ ರಾಜ್ಯಗಳಲ್ಲಿ ತೀವ್ರವಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಲ್ಲ ಎಂಬುದು ಸಮಾಧಾನಕರ ಸಂಗತಿ.

ಲಡಾಖ್ ಹೊರತುಪಡಿಸಿ, ಭಾರತದ ಅತಿದೊಡ್ಡ ರಾಜ್ಯಗಳಲ್ಲಿ ಒಂದಾದ ಮಧ್ಯಪ್ರದೇಶ ಸೇರಿದಂತೆ ಇತರ ನಾಲ್ಕು ರಾಜ್ಯಗಳು ಈ ವಿಷಯದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಆರ್‌ಟಿಐ ಉತ್ತರದಲ್ಲಿ ತಿಳಿಸಲಾಗಿದೆ.

ತೀವ್ರ ಅಪೌಷ್ಟಿಕ ಮಕ್ಕಳ ಗುರುತಿಸುವಿಕೆ ಮಾನದಂಡ

ಎತ್ತರಕ್ಕೆ ಹೋಲಿಸಿದರೆ ತೀರಾ ಕಡಿಮೆ ತೂಕ ಅಥವಾ ಮೇಲ್ಭಾಗದ ತೋಳಿನ ಸುತ್ತಳತೆ 115 ಮಿಲಿ ಮೀಟರುಗಳಿಗಿಂತ ಕಡಿಮೆ ಅಥವಾ ಪೌಷ್ಟಿಕಾಂಶ ಕೊರತೆ ಇರುವ ಮಕ್ಕಳ ಸ್ಥಿತಿಯನ್ನು ತೀವ್ರವಾದ ಅಪೌಷ್ಟಿಕತೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುತಿಸುತ್ತದೆ. ಈ ರೀತಿಯ ಮಕ್ಕಳು ತಮ್ಮ ಎತ್ತರಕ್ಕೆ ತೀರಾ ಕಡಿಮೆ ತೂಕ ಹೊಂದಿರುತ್ತಾರೆ ಮತ್ತು ರೋಗನಿರೋಧಕ ಶಕ್ತಿ ದುರ್ಬಲಗೊಂಡ ಕಾರಣ ರೋಗ ರುಜಿನಗಳು ಬಂದಾಗ ಇವರು ಸಾಯುವ ಸಾಧ್ಯತೆ ಒಂಬತ್ತು ಪಟ್ಟು ಹೆಚ್ಚಾಗಿರುತ್ತದೆ.

ನಿರುದ್ಯೋಗ, ಆರ್ಥಿಕ ಬಿಕ್ಕಟ್ಟಿನಿಂದ ಹಸಿವಿನ ಸಮಸ್ಯೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಕಳೆದ ವರ್ಷ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತೀವ್ರ ಅಪೌಷ್ಟಿಕತೆಯ ಮಕ್ಕಳನ್ನು ಗುರುತಿಸುವಂತೆ ಕೇಳಿಕೊಂಡಿತ್ತು. ಇದರನ್ವಯ ಒಟ್ಟು 9,27,606 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂಬುದು ಗೊತ್ತಾಗಿದೆ.

ಈಗ ಸಿಕ್ಕಿರುವ ಅಂಕಿ ಅಂಶಗಳು ವಾಸ್ತವಕ್ಕಿಂತ ಕಡಿಮೆ ಇರಬಹುದು. ಆದರೆ, ಸದ್ಯದ ಕೋವಿಡ್​ ಬಿಕ್ಕಟ್ಟಿನ ಕಾರಣದಿಂದ ಅಪೌಷ್ಟಿಕ ಮಕ್ಕಳ ಸಂಖ್ಯೆ ಎಷ್ಟೋ ಪಟ್ಟು ಹೆಚ್ಚಾಗಬಹುದು ಎಂಬ ಆತಂಕ ಬಾಧಿಸುತ್ತಿದೆ. ನಿರುದ್ಯೋಗ ಹೆಚ್ಚಳ, ಆರ್ಥಿಕ ಬಿಕ್ಕಟ್ಟು ಮುಂತಾದವು ಹಸಿವಿನ ಸಮಸ್ಯೆ ಹೆಚ್ಚಾಗಲು ಕಾರಣವಾಗುತ್ತವೆ. ಹಸಿವಿನಿಂದ ಬಳಲುವುದು ಹೆಚ್ಚಾದಂತೆ ಅಪೌಷ್ಟಿಕತೆಯೂ ಹೆಚ್ಚಾಗತೊಡಗುತ್ತದೆ.

ವಿವಿಧ ರಾಜ್ಯಗಳಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ

ತೀವ್ರ ಅಪೌಷ್ಟಿಕತೆಯ ಮಕ್ಕಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರ ಮೊದಲ ಸ್ಥಾನದಲ್ಲಿವೆ. ಈ ಎರಡು ರಾಜ್ಯಗಳಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಮಕ್ಕಳಿದ್ದಾರೆ. 2011 ರ ಜನಗಣತಿಯ ಅಂಕಿ-ಅಂಶಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ 0-6 ವರ್ಷ ವಯಸ್ಸಿನ 2.97 ಕೋಟಿ ಮಕ್ಕಳಿದ್ದರೆ, ಬಿಹಾರದಲ್ಲಿ 1.85 ಕೋಟಿ ಮಕ್ಕಳಿದ್ದಾರೆ.

ಆರ್‌ಟಿಐಗೆ ಸಿಕ್ಕ ಮಾಹಿತಿಯ ಪ್ರಕಾರ ಮಹಾರಾಷ್ಟ್ರದಲ್ಲಿ 70,665, ಗುಜರಾತಿನಲ್ಲಿ 45,749, ಛತ್ತೀಸಗಢದಲ್ಲಿ 37,249, ಒಡಿಶಾದಲ್ಲಿ 15,595, ತಮಿಳುನಾಡಿನಲ್ಲಿ 12,489, ಜಾರ್ಖಂಡ್​ನಲ್ಲಿ 12,059, ಆಂಧ್ರಪ್ರದೇಶದಲ್ಲಿ 11,201, ತೆಲಂಗಾಣದಲ್ಲಿ 9,452, ಕೇರಳದಲ್ಲಿ 6,188 ಮತ್ತು ರಾಜಸ್ಥಾನದಲ್ಲಿ 5,732 ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.

10 ಲಕ್ಷ ಅಂಗನವಾಡಿಗಳಲ್ಲಿ ನಡೆದ ಸಮೀಕ್ಷೆ

ದೇಶಾದ್ಯಂತ 10 ಲಕ್ಷ ಅಂಗನವಾಡಿಗಳಲ್ಲಿ ಸಮೀಕ್ಷೆ ನಡೆಸಿ ಅಪೌಷ್ಟಿಕ ಮಕ್ಕಳ ಸಂಖ್ಯೆಯನ್ನು ನಿರ್ಣಯಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಈ ಮಾಹಿತಿಯನ್ನು ನವೀಕರಿಸಲಾಗಿಲ್ಲ. ಆದರೂ ಕೊನೆಯದಾಗಿ ಲಭ್ಯವಿರುವ ಅಂಕಿ ಅಂಶವು 2015-16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಿಂದ ಬಂದಿದ್ದಾಗಿವೆ. ಇದರ ಪ್ರಕಾರ ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆಯ ಪ್ರಮಾಣವು ಶೇಕಡಾ 7.4 ರಷ್ಟಿದೆ. 6,01,509 ಮನೆಗಳು, 6,99,686 ಮಹಿಳೆಯರು ಮತ್ತು 1,12,122 ಪುರುಷರಿಂದ ಮಾಹಿತಿಯನ್ನು ಸಂಗ್ರಹಿಸಿ ಈ ಆರೋಗ್ಯ ಸಮೀಕ್ಷೆ ನಡೆಸಲಾಗಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಸಮೀಕ್ಷೆಯಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 2,65,653 ಮಕ್ಕಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಇದರ ಪ್ರಕಾರ 22 ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2015-16 ರಿಂದ 2019-20ರ ಅವಧಿಯಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.