ETV Bharat / bharat

ಅಧ್ಯಾಪಕರು ಸೇರಿದಂತೆ 84 IAS ಪ್ರಶಿಕ್ಷಣಾರ್ಥಿಗಳಿಗೆ ಕೋವಿಡ್​ ಪಾಸಿಟಿವ್​ - ಉತ್ತರಾಖಂಡ ಕೋವಿಡ್​ ಕೇಸ್​

ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಅಧ್ಯಾಪಕರು ಸೇರಿದಂತೆ ಒಟ್ಟು 84 ಐಎಎಸ್​ ಪ್ರಶಿಕ್ಷಣಾರ್ಥಿಗಳಿಗೆ ಕೋವಿಡ್​ ಪಾಸಿಟಿವ್​ ದೃಢಪಟ್ಟಿದೆ.

COVID-19
COVID-19
author img

By

Published : Jan 19, 2022, 10:59 AM IST

ಮಸ್ಸೂರಿ (ಉತ್ತರಾಖಂಡ): ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಅಧ್ಯಾಪಕರು ಸೇರಿದಂತೆ ಐಎಎಸ್ ತರಬೇತಿ ಪಡೆಯುತ್ತಿರುವ ಒಟ್ಟು 84 ಅಧಿಕಾರಿಗಳಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿದೆ ಎಂದು ಅಕಾಡೆಮಿಯ ಆಡಳಿತ ಮಂಡಳಿ ತಿಳಿಸಿದೆ.

ಕ್ಯಾಂಪಸ್‌ನಲ್ಲಿ ಹೆಚ್ಚಿನ ಕೋವಿಡ್-19 ಸೋಂಕಿತರು ಕಂಡು ಬಂದ ಹಿನ್ನೆಲೆ ವೈರಸ್ ಹರಡುವುದನ್ನು ತಡೆಯಲು ಆಡಳಿತ ಮಂಡಳಿಯು ಕಂಟೈನ್‌ಮೆಂಟ್ ವಲಯಗಳನ್ನು ಮಾಡಿದೆ. ಕ್ಯಾಂಪಸ್‌ನಲ್ಲಿ ಎಲ್ಲರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದೆ.

ಉತ್ತರಾಖಂಡ್​ನಲ್ಲಿ ಕಳೆದ 24 ಗಂಟೆಗಳಲ್ಲಿ 4,482 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 1,865 ಜನ ಚೇತರಿಸಿಕೊಂಡು ಗುಣಮುಖರಾಗಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 20,620 ಕ್ಕೆ ಏರಿಕೆಯಾಗಿದೆ.

ಓದಿ: ಇಂದು ದೇಶದಲ್ಲಿ ಕೊರೊನಾ ಪಾಸಿಟಿವ್​ ಸಂಖ್ಯೆಯಲ್ಲಿ ಭಾರಿ ಏರಿಕೆ.. ಮಹಾಮಾರಿಗೆ 441 ಬಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.