ETV Bharat / bharat

ತಾಜ್ ಹೋಟೆಲ್​ನ 82 ಸಿಬ್ಬಂದಿಗೆ ಕೊರೊನಾ ಸೋಂಕು - ಉತ್ತರಾಖಂಡ್​ನಲ್ಲಿ ಕೊರೊನಾ ಪ್ರಕರಣ

ಕೆಲವು ದಿನಗಳ ಹಿಂದೆ ಋಷಿಕೇಶ-ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ತಾಜ್ ಹೋಟೆಲ್‌ನಲ್ಲಿ ಕೆಲವು ಜನರ ಮಾದರಿಗಳನ್ನು ತೆಗೆದುಕೊಳ್ಳಲಾಗಿತ್ತು. ಇದರಲ್ಲಿ 25 ಜನರಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ. ಆ ನಂತರ, ಆರೋಗ್ಯ ಇಲಾಖೆ ತಂಡವು ಇತರ ಸಿಬ್ಬಂದಿಯ ಮಾದರಿಯನ್ನು ಸಹ ತೆಗೆದುಕೊಂಡಿತು. ಎರಡನೇ ಬಾರಿಗೆ 27 ಜನರಿಗೆ ಪಾಸಿಟಿವ್ ಇರುವುದು ತಿಳಿದುಬಂದಿದೆ. ಸೋಮವಾರ ಮತ್ತೆ 32 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.

corona
corona
author img

By

Published : Mar 29, 2021, 2:42 PM IST

ತೆಹ್ರಿ: ದೇವಪ್ರಯಾಗ್ ಮತ್ತು ರಿಷಿಕೇಶ ನಡುವಿನ ಬಯಾಸಿಯ ತಾಜ್ ಹೋಟೆಲ್‌ನಲ್ಲಿ ಈವರೆಗೂ 82 ಕೊರೊನಾ ವೈರಸ್​ ಸೋಂಕು ಪ್ರಕರಣಗಳು ವರದಿಯಾಗಿದೆ. ಪರಿಣಾಮ, ಎರಡು ದಿನಗಳ ತನಕ ಹೋಟೆಲ್​ ಮುಚ್ಚಲಾಗಿದೆ.

ಹೋಟೆಲ್​ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಕಾರ್ಮಿಕರಿಗೆ ಸೋಂಕು ತಗುಲಿರುವುದು ಕೋವಿಡ್ 19 ಪರೀಕ್ಷೆಯಿಂದ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ ಉತ್ತರಾಖಂಡ್‌ದಲ್ಲಿ 366ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿದೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಮತ್ತೆ ಹಕ್ಕಿ ಜ್ವರ ಭೀತಿ.. ಎಲ್ಲೆಂದರಲ್ಲಿ ಸತ್ತು ಬಿದ್ದ 300ಕ್ಕೂ ಹೆಚ್ಚು ಪಾರಿವಾಳಗಳು!

ಕೆಲವು ದಿನಗಳ ಹಿಂದೆ ಋಷಿಕೇಶ-ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ತಾಜ್ ಹೋಟೆಲ್‌ನಲ್ಲಿ ಕೆಲವು ಜನರ ಮಾದರಿಗಳನ್ನು ತೆಗೆದುಕೊಳ್ಳಲಾಗಿತ್ತು. ಇದರಲ್ಲಿ 25 ಜನರಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿತ್ತು. ಆ ನಂತರ, ಆರೋಗ್ಯ ಇಲಾಖೆ ತಂಡವು ಇತರ ಸಿಬ್ಬಂದಿ ಮಾದರಿ ಸಹ ತೆಗೆದುಕೊಂಡಿತು. ಎರಡನೇ ಬಾರಿಗೆ 27 ಜನರಿಗೆ ಪಾಸಿಟಿವ್ ಇರುವುದು ತಿಳಿದುಬಂತು. ಸೋಮವಾರ ಮತ್ತೆ 32 ಜನರಲ್ಲಿ ಕೊರೊನಾ ಇರುವಿಕೆ ಕಂಡುಬಂದಿದೆ.

ತಾಜ್ ಹೋಟೆಲ್‌ನಲ್ಲಿ ಈವರೆಗೆ ಒಟ್ಟು 82 ಸಿಬ್ಬಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಋಷಿಕೇಶದಲ್ಲಿ ಎಲ್ಲರನ್ನೂ ಪ್ರತ್ಯೇಕಿಸಲಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡ ಸ್ಥಳೀಯಾಡಳಿತ, ತಾಜ್ ಹೋಟೆಲ್ ಅನ್ನು ಎರಡು ದಿನಗಳ ಕಾಲ ಮುಚ್ಚಿದೆ. ಹೋಟೆಲ್ ರೂಮ್​ ಕಾಯ್ದಿರಿಸುವುದಕ್ಕೂ ನಿರ್ಬಂಧ ಹೇರಲಾಗಿದೆ ಎಂದು ಉಪ ಜಿಲ್ಲಾಧಿಕಾರಿ ಮಿಶ್ರಾ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.