ETV Bharat / bharat

ಏನ್‌ ಗಟ್ಟಿರೀ ಈಕೆ.. ವಯಸ್ಸು 81 ಆದ್ರೂ ಕೆಲಸಕ್ಕೆಂದು 22 ಕಿ.ಮೀ ಸೈಕಲ್​ ತುಳಿಯುವ ಅಜ್ಜಿ!

ಇವರು ವಾಸಿಸುವ ಪ್ರದೇಶದಿಂದ 22 ಕಿಲೋಮೀಟರ್​ ದೂರದಲ್ಲಿರುವ ಮನೆಗಳಿಗೆ ಕೆಲಸ ಮಾಡಲು ಹೋಗುವ ಶಾಂತಿಬಾಯಿ ಅವರು, ತಮ್ಮ ಹಳೆಯ ಸೈಕಲ್​ ಅನ್ನೇ ವಾಹನವನ್ನಾಗಿ ಮಾಡಿಕೊಂಡಿದ್ದಾರೆ. ದಿನವೂ ಸೈಕಲ್​ ಸವಾರಿ ಮಾಡಿಕೊಂಡೇ ಕೆಲಸಕ್ಕೆ ಹೋಗುತ್ತಾರಂತೆ..

cycling
ಸೈಕಲ್ ಅಜ್ಜಿ
author img

By

Published : Jan 8, 2022, 6:53 PM IST

ಜಬಲ್​ಪುರ(ಮಧ್ಯಪ್ರದೇಶ) : ಆರೋಗ್ಯ ಕಾಪಾಡಿಕೊಳ್ಳಲು ಸೈಕ್ಲಿಂಗ್​ ಜಾಥಾ ಮಾಡ್ತಾರೆ. ಇನ್ನೂ ಕೆಲವರು ಕಿಲೋಮೀಟರ್​ಗಟ್ಟಲೇ ಸೈಕ್ಲಿಂಗ್​ ಮಾಡಿಕೊಂಡು ಹೋಗಿ ಆರೋಗ್ಯ ಕಾಪಾಡಿಕೊಳ್ಳುತ್ತಾರೆ. ಆದರೆ, ಇಲ್ಲೊಬ್ಬರು ದುಡಿಮೆಗೆ ದಿನವೂ 20 ರಿಂದ 22 ಕಿಲೋಮೀಟರ್​ ಸೈಕಲ್​ ಸವಾರಿ ಮಾಡುತ್ತಾರೆ.

ಮಧ್ಯಪ್ರದೇಶದ ಜಬಲ್​ಪುರ ನಿವಾಸಿಯಾದ ಶಾಂತಿಬಾಯಿ ಎಂಬುವರು ದಿನವೂ 22 ಕಿ.ಮೀ ಸೈಕಲ್​ ತುಳಿದುಕೊಂಡು ಹೋಗಿ ಮನೆಗಳಲ್ಲಿ ಕೆಲಸ ಮಾಡಿ ಬಳಿಕ ಅದೇ ಸೈಕಲ್​ ತುಳಿದುಕೊಂಡು ವಾಪಸ್​ ಮನೆಗೆ ಬರುತ್ತಾರಂತೆ. ನೋಡಲು ಸಣ್ಣಗೆ ಇದ್ದರೂ ಮೈಯಲ್ಲಿನ ಕಸುವು ಮಾತ್ರ ನೀಗಿಲ್ಲ. ಅಂದಹಾಗೆ ಇವರ ವಯಸ್ಸು ಈಗ ಬರೀ 81 ವರ್ಷ.

ವಯಸ್ಸು 81 ಆದ್ರೂ ಕೆಲಸಕ್ಕೆಂದು 22 ಕಿ.ಮೀ. ಸೈಕಲ್​ ತುಳಿಯುವ ಈ ಅಜ್ಜಿ!
ವಯಸ್ಸು 81 ಆದ್ರೂ ಕೆಲಸಕ್ಕೆಂದು 22 ಕಿ.ಮೀ ಸೈಕಲ್​ ತುಳಿಯುವ ಈ ಅಜ್ಜಿ!

ಓದು-ಬರಹ ಬಾರದ ಶಾಂತಿಬಾಯಿಗೆ ಇಬ್ಬರು ಮಕ್ಕಳಿದ್ದಾರೆ. ಅವರಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಇದೀಗ ಏಕಾಂಗಿಯಾಗಿ ಜೀವಿಸುತ್ತಿರುವ ಶಾಂತಿಬಾಯಿ ಜೀವನಕ್ಕಾಗಿ ಮನೆಕೆಲಸ ಮಾಡಿಕೊಂಡಿದ್ದಾರೆ.

ಇವರು ವಾಸಿಸುವ ಪ್ರದೇಶದಿಂದ 22 ಕಿಲೋಮೀಟರ್​ ದೂರದಲ್ಲಿರುವ ಮನೆಗಳಿಗೆ ಕೆಲಸ ಮಾಡಲು ಹೋಗುವ ಶಾಂತಿಬಾಯಿ ಅವರು, ತಮ್ಮ ಹಳೆಯ ಸೈಕಲ್​ ಅನ್ನೇ ವಾಹನವನ್ನಾಗಿ ಮಾಡಿಕೊಂಡಿದ್ದಾರೆ. ದಿನವೂ ಸೈಕಲ್​ ಸವಾರಿ ಮಾಡಿಕೊಂಡೇ ಕೆಲಸಕ್ಕೆ ಹೋಗುತ್ತಾರಂತೆ.

ವಯಸ್ಸು 81 ಆದರೂ ಪರಾವಲಂಬಿಯಾಗದೇ ತಾವೇ ಸ್ವತಃ ದುಡಿದು ತಿನ್ನುವ ಛಾತಿ ಇವರದಾಗಿದೆ. ಕೆಲಸಕ್ಕೆಂದು ಸೈಕಲ್​ ತುಳಿದು ಹೋಗುವಾಗ ಸುಸ್ತಾದರೆ ದಾರಿ ಮಧ್ಯೆಯೇ ಕೆಲ ಹೊತ್ತು ಕುಳಿತು ಸುಧಾರಿಸಿಕೊಂಡು ಮತ್ತೆ ಗಮ್ಯಸ್ಥಾನಕ್ಕೆ ತೆರಳುತ್ತಾರಂತೆ.

ಅಲ್ಲದೇ, ಈ ಇಳಿವಯಸ್ಸಿನಲ್ಲೂ ಅಜ್ಜಿ ಶಾಂತಿಬಾಯಿಯ ಕಣ್ಣುಗಳು ನಿಚ್ಚಳವಾಗಿ ಕಾಣುತ್ತವಂತೆ. ಯಾವುದೇ ಕನ್ನಡಕದ ಸಹಾಯವೂ ಇವರಿಗೆ ಬೇಕಿಲ್ಲವಂತೆ. ಹಲವು ವರ್ಷಗಳಿಂದ ಈ ರೀತಿ ಸೈಕಲ್​ ತುಳಿದೆ ಕೆಲಸಕ್ಕೆ ಹೋಗುವ ಅಜ್ಜಿ ಶಾಂತಿಬಾಯಿ ಇಂದಿನ ಯುವಕರಿಗೆ ಮಾದರಿ ಎಂದೇ ಹೇಳಬಹುದು.

ಇದನ್ನೂ ಓದಿ: ಬಿಜೆಪಿಯ ಸರಬ್ಜಿತ್ ಕೌರ್​ಗೆ ಚಂಡೀಗಢ ಮೇಯರ್​ ಪಟ್ಟ.. ಒಂದೇ ವೋಟ್​ನಿಂದ ಎಎಪಿಗೆ ಸೋಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.