ETV Bharat / bharat

ಕೋವಿಡ್​ ವೇಳೆ 80 ಕೋಟಿ ಭಾರತೀಯರಿಗೆ ಉಚಿತ ಪಡಿತರ: ಪ್ರಧಾನಿ ಮೋದಿ

ಕಳೆದ 100 ವರ್ಷಗಳಲ್ಲಿ ಕೋವಿಡ್​ ಸಾಂಕ್ರಾಮಿಕವು ಮಾನವ ಜನಾಂಗ ಎದುರಿಸಿದ ಅತಿದೊಡ್ಡ ವಿಪತ್ತು. ಈ ಸಂದರ್ಭದಲ್ಲಿ ಭಾರತವು ಬಿಕ್ಕಟ್ಟನ್ನು ಎದುರಿಸುವ ಕಾರ್ಯತಂತ್ರದಲ್ಲಿ ಬಡವರಿಗೆ ಪ್ರಮುಖ ಆದ್ಯತೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪ್ರಧಾನಿ ಮೋದಿ
ಪ್ರಧಾನಿ ಮೋದಿ
author img

By

Published : Aug 7, 2021, 1:46 PM IST

ನವದೆಹಲಿ: ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ 80 ಕೋಟಿ ಭಾರತೀಯರಿಗೆ ಉಚಿತ ಪಡಿತರ ನೀಡಲಾಗಿದೆ. ಇದರಲ್ಲಿ ಮಧ್ಯಪ್ರದೇಶದ ಐದು ಕೋಟಿ ಜನರಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಮಧ್ಯಪ್ರದೇಶದ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಂವಾದ ನಡೆಸಿದ ಪಿಎಂ ಮೋದಿ, ಕಳೆದ 100 ವರ್ಷಗಳಲ್ಲಿ ಕೋವಿಡ್​ ಸಾಂಕ್ರಾಮಿಕವು ಮಾನವ ಜನಾಂಗ ಎದುರಿಸಿದ ಅತಿದೊಡ್ಡ ವಿಪತ್ತು. ಈ ಸಂದರ್ಭದಲ್ಲಿ ಭಾರತವು ಬಿಕ್ಕಟ್ಟನ್ನು ಎದುರಿಸುವ ಕಾರ್ಯತಂತ್ರದಲ್ಲಿ ಬಡವರಿಗೆ ಪ್ರಮುಖ ಆದ್ಯತೆ ನೀಡಿದೆ ಎಂದು ತಿಳಿದರು.

ಇದನ್ನೂ ಓದಿ: ಭಾರತೀಯ ಇತಿಹಾಸದಲ್ಲೇ ವಿಶೇಷತೆ ಹೊಂದಿದೆ 'ರಾಷ್ಟ್ರೀಯ ಕೈಮಗ್ಗ ದಿನ': ಹೇಗೆ ಗೊತ್ತಾ?

ದೇಶದಲ್ಲಿ ಕೋವಿಡ್ -19 ಆರಂಭವಾದ ನಂತರ 80 ಕೋಟಿಗೂ ಹೆಚ್ಚು ನಾಗರಿಕರಿಗೆ ಉಚಿತ ಪಡಿತರವನ್ನು ನೀಡಲಾಗಿದೆ. ಕೇವಲ ಗೋಧಿ, ಅಕ್ಕಿ ಅಥವಾ ದ್ವಿದಳ ಧಾನ್ಯಗಳು ಮಾತ್ರವಲ್ಲದೇ 8 ಕೋಟಿಗೂ ಹೆಚ್ಚು ಬಡ ಕುಟುಂಬಗಳಿಗೆ ಲಾಕ್‌ಡೌನ್ ಸಮಯದಲ್ಲಿ ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ಸಹ ನೀಡಲಾಯಿತು. 20 ಕೋಟಿಗೂ ಹೆಚ್ಚು ಮಹಿಳೆಯರು ತಮ್ಮ ಜನ್ ಧನ್ ಬ್ಯಾಂಕ್ ಖಾತೆಗಳಿಗೆ ಸುಮಾರು 30,000 ಕೋಟಿ ರೂಪಾಯಿಗಳನ್ನು ನೇರವಾಗಿ ಪಡೆದರು ಎಂದು ಪ್ರಧಾನಿ ಹೇಳಿದರು.

ವೈರಸ್ ಹರಡುವುದನ್ನು ತಡೆಗಟ್ಟಲು ಜನರು ಮಾಸ್ಕ್​​ ಧರಿಸುವುದು, ಕೈಗಳನ್ನು ಸ್ವಚ್ಛಗೊಳಿಸುತ್ತಿರುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಮುಂದುವರೆಸಬೇಕು ಎಂದು ಇದೇ ವೇಳೆ ಮೋದಿ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.