ಬೆಮೆತರಾ (ಛತ್ತೀಸ್ಗಢ) : ಸಾಜಾ ಬ್ಲಾಕ್‌ನ ಪರಪೋಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೆಂಟಿಲೇಟರ್ ಬೆಡ್ ಸಿಗದೆ 8 ತಿಂಗಳ ಗರ್ಭಿಣಿಯಾಗಿದ್ದ ನರ್ಸ್ ಮೃತಪಟ್ಟಿದ್ದಾರೆ.
ಛತ್ತೀಸ್ಗಢದ ಬೆಮೆತರಾ ಜಿಲ್ಲೆಯ ಪರ್ಪೋಡಿ ಸರ್ಕಾರಿ ಆಸ್ಪತ್ರೆಯಲ್ಲಿ ನೇಮಕಗೊಂಡ ಆರೋಗ್ಯ ಕಾರ್ಯಕರ್ತೆ ದುಲಾರಿ ಧೀಮರ್ ಎಂಬುವರಿಗೆ 29 ವರ್ಷ ವಯಸ್ಸು. ಇವರು ಕೊರೊನಾ ಸೋಂಕಿಗೆ ಒಳಗಾದ ನಂತರ ಏಪ್ರಿಲ್ 26ರಂದು ಏಮ್ಸ್ಗೆ ದಾಖಲಿಸಲಾಯಿತು. 2 ವರ್ಷಗಳಿಂದ ಸಾಜಾ ಬ್ಲಾಕ್‌ನ ಪರ್ಪೋಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾದಿಯಾಗಿ ಕೆಲಸ ಮಾಡುತ್ತಿದ್ದರು. ಇವರಿಗೆ 3 ವರ್ಷದ ಮಗಳು ಸಹ ಇದ್ದಾಳೆ. 8 ತಿಂಗಳ ಗರ್ಭಿಣಿಯಾದ ನಂತರ ಆಕೆಗೆ ರಜೆ ನೀಡಲಿಲ್ಲ. ದುರದೃಷ್ಟ ಎಂಬಂತೆ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ.
ಸೋಂಕಿಗೆ ತುತ್ತಾದ ಬಳಿಕ ಇವರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಯಿತು. ಈ ವೇಳೆ ಬೆಮೆತರಾ ಮತ್ತು ದುರ್ಗ್‌ನ ಯಾವುದೇ ವೈದ್ಯಕೀಯ ಮಳಿಗೆಗಳಲ್ಲಿ ರೆಮ್ಡಿಸಿವಿರ್ ಚುಚ್ಚುಮದ್ದು ಸಿಗಲಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. 4 ಸಾವಿರ ರೂಪಾಯಿಗಳ ಎರಡು ಚುಚ್ಚುಮದ್ದಿಗೆ 15 ಸಾವಿರ ರೂ. ನೀಡಬೇಕಾಗಿತ್ತು. ಚುಚ್ಚುಮದ್ದಿನ ನಂತರ 2 ದಿನಗಳ ಕಾಲ ದುಲಾರಿ ಚೆನ್ನಾಗಿಯೇ ಇದ್ದರು. ಆದರೆ ಇದ್ದಕ್ಕಿದ್ದಂತೆ ಅವರ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸಿತು. ನಂತರ ರಾಯ್‌ಪುರ ಏಮ್ಸ್ಗೆ ರೆಫರ್ ಮಾಡಲಾಗಿತ್ತು. ಅಲ್ಲಿ ವೆಂಟಿಲೇಟರ್ ಇರಲಿಲ್ಲ. 2 ದಿನಗಳ ಕಾಲ ಕಾದ ನಂತರ ಹಾಸಿಗೆ ಸಿಕ್ಕಿತು. ಆದರೆ ವೆಂಟಿಲೇಟರ್ ಸಿಗಲಿಲ್ಲ. ಇದರಿಂದಾಗಿ ದುಲಾರಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕೊರೊನಾಗೆ 28 ದಿನಗಳಲ್ಲಿ ಬೆಮೆತರಾದಲ್ಲಿ 128 ಜನ ಬಲಿಯಾಗಿದ್ದಾರೆ.