ಬೋಟಡ್(ಗುಜರಾತ್): ರಾಜ್ಯದಲ್ಲಿ ಅಕ್ರಮ ಮದ್ಯಕ್ಕೆ ಸಂಬಂಧಿಸಿದಂತೆ ಹಲವು ಚರ್ಚೆಗಳು ಮುನ್ನೆಲೆಗೆ ಬರುತ್ತಲೇ ಇವೆ. ರಾಜಕೀಯ ಕಿತ್ತಾಟವೂ ಕಂಡು ಬರುತ್ತಿದ್ದು, ಇದೀಗ ಬೋಟಡ್ ಜಿಲ್ಲೆಯಲ್ಲಿ ಪ್ರಮುಖ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಘಟನೆಯಲ್ಲಿ 10 ಮಂದಿ ಗಂಭೀರವಾಗಿದ್ದು, ಎಂಟು ಮಂದಿ ಸಾವಿಗೀಡಾದ ಶಂಕೆ ಇದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಧಂಧೂಕಾದಲ್ಲಿ ಆರು ಜನರು ಮತ್ತು ಬೋಟಾಡ್ ಆಸ್ಪತ್ರೆಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.
ಬೊಟಾಡ್ ಜಿಲ್ಲೆಯ ರೋಜಿದ್ ಗ್ರಾಮದಲ್ಲಿ ಅಕ್ರಮ ಮದ್ಯ ಸೇವಿಸಿ ಸುಮಾರು 10 ಮಂದಿ ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟು 10 ಮಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಂಟು ಮಂದಿ ಸಾವಿಗೀಡಾದ ಬಗ್ಗೆ ಶಂಕೆ ವ್ಯಕ್ಯವಾಗಿದೆ.
ಇದನ್ನೂ ಓದಿ: ಕಬಡ್ಡಿ..ಕಬಡ್ಡಿ.. ಎನ್ನುತ್ತ ರೈಡ್ ಮಾಡುವಾಗಲೇ ಉಸಿರು ನಿಲ್ಲಿಸಿದ ಆಟಗಾರ - ವಿಡಿಯೋ