ಭುವನೇಶ್ವರ: ಒಡಿಶಾದಲ್ಲಿ ಯಾಸ್ ಚಂಡಮಾರುತದ ಆರ್ಭಟ ಜೋರಾಗಿದೆ. ಈ ನಡುವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸೈಕ್ಲೋನ್ ಪೀಡಿತ 10 ಕರಾವಳಿ ಜಿಲ್ಲೆಗಳಲ್ಲಿದ್ದ 750 ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದೆ.
ಡಿಎಸ್‌ಡಬ್ಲ್ಯುಒ, ಸಿಡಿಪಿಒ, ಅಂಗನವಾಡಿ ಕಾರ್ಯಕರ್ತರು ಸೇರಿ ವಿವಿಧ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ 4,555 ಗರ್ಭಿಣಿಯರನ್ನು ಗುರುತಿಸಲಾಗಿದೆ. ಇವರಲ್ಲಿ ಈಗಾಗಲೇ 2,107 ಮಂದಿಯನ್ನು ಮೇ 24 ರಿಂದಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ:ಯಾಸ್ ಅಬ್ಬರಕ್ಕೆ ಜಾರ್ಖಂಡ್ನಲ್ಲಿ ಭೀಕರ ಪ್ರವಾಹ..ಕೊಚ್ಚಿ ಹೋದ ವಾಹನ..!
ಬಾಲ್ಸೋರ್ನಲ್ಲಿ 58, ಭದ್ರಾಕ್ನಲ್ಲಿ 98, ಕಟಕ್ನಲ್ಲಿ 61, ಜಗತ್ಸಿಂಗ್ ಪುರದಲ್ಲಿ 84, ಜಜ್‌ಪುರದಲ್ಲಿ 69, ಕಿಯೋಂಘರ್ನಲ್ಲಿ 55, ಮಯೂರ್ಭಂಜ್ನಲ್ಲಿ 36, ಕೇಂದ್ರಪಾರದಲ್ಲಿ 166, ಖೋರ್ಧಾದಲ್ಲಿ 95 ಮತ್ತು ಪುರಿ ಜಿಲ್ಲೆಯ 28 ಗರ್ಭಿಣಿಯರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಭೀಕರ ಚಂಡಮಾರುತದ ನಡುವೆಯೂ ಮೇ 25 ಮತ್ತು 26 ರಂದು 750 ಜನರಿಗೆ ಸುರಕ್ಷಿತ ಹೆರಿಗೆ ಮಾಡಿಸಲಾಗಿದ್ದು, ತಾಯಂದಿರು ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ.