ರಾಷ್ಟ್ರಗೀತೆ ನಮ್ಮ ಮೈ ನವಿರೇಳಿಸುತ್ತದೆ. ಅದೇ ರಾಷ್ಟ್ರಭಕ್ತಿ ಗೀತೆಯ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಊದಿದ ಮಹನೀಯ ರಾಮ್ ಸಿಂಗ್ ಠಾಕೂರ್.. ತಮ್ಮ ಸಂಗೀತದ ಮೂಲಕವೇ ದೇಶಾಭಿಮಾನ ಕೆರಳಿಸಿದವರು.
ದೇಶವು ಪ್ರಕ್ಷುಬ್ಧತೆ ಮತ್ತು ಉದ್ವಿಗ್ನತೆಯಲ್ಲಿ ಸಿಲುಕಿದ್ದಾಗ, ರಾಮ್ ಸಿಂಗ್ ಠಾಕೂರ್ 'ಕದಂ ಕದಂ ಬಡಾಯೇ ಜಾ' ಮತ್ತು 'ಸಬ್ ಸುಖ್ ಚೈನ್' ಸೇರಿ ವಿವಿಧ ರಾಷ್ಟ್ರಭಕ್ತಿ ಗೀತೆಗಳನ್ನು ರಚಿಸಿದರು.
ಠಾಕೂರ್ ಹಿಮಾಚಲ ಪ್ರದೇಶದ ಧರ್ಮಸಾಲದಿಂದ ಬಂದವರು. ಅವರು ಆಗಸ್ಟ್ 15, 1914 ರಂದು ಜನಿಸಿದರು. ತಮ್ಮ 14ನೇ ವಯಸ್ಸಿನಲ್ಲಿ ಅವರು ಗೂರ್ಖಾ ರೈಫಲ್ಸ್ ಸೇರಿದರು. ಆಗಸ್ಟ್ 1941ರಲ್ಲಿ ಅವರನ್ನು 2ನೇ ಮಹಾಯುದ್ಧದ ಸಮಯದಲ್ಲಿ ಮಲಯ ಮತ್ತು ಸಿಂಗಾಪುರದ ವಿರುದ್ಧ ಹೋರಾಡಲು ಕಳುಹಿಸಲಾಯಿತು.
ಇಲ್ಲಿ ಜಪಾನಿಯರು ಅವರನ್ನು ಯುದ್ಧ ಕೈದಿಗಳನ್ನಾಗಿ ಮಾಡಿದರು. 1942ರಲ್ಲಿ ಬಿಡುಗಡೆಯಾದ ನಂತರ, ರಾಮ್ ಸಿಂಗ್ ಠಾಕೂರ್, ಸುಭಾಸ್ ಚಂದ್ರ ಬೋಸ್ ಅವರನ್ನು ಸಂಪರ್ಕಿಸಿದರು. ರಾಮ್ ಸಿಂಗ್ ಠಾಕೂರ್ ಕೌಶಲ್ಯಕ್ಕೆ ಮೆಚ್ಚಿದ್ದ ಪಿಟೀಲನ್ನ ಉಡುಗೊರೆಯಾಗಿ ನೀಡಿದ್ದರು ಸುಭಾಷ್ ಚಂದ್ರ ಬೋಸ್.
ಕೇಳುಗರು ಅವರ ರಾಗಕ್ಕೆ ಮನಸೋತಿದ್ದರಿಂದ, ಠಾಕೂರ್ಗೆ ಪ್ರಖ್ಯಾತ ಹಾಡು ಆಜಾದ್ ಹಿಂದ್ ಫೌಜ್ ಮತ್ತು ಝಾನ್ಸಿಯ ರಾಣಿ ರೆಜಿಮೆಂಟ್‌ನ 'ಹಮ್ ಭಾರತ್ ಕಿ ಲಡ್ಕಿ ಹೈ' ಗೀತೆಗೆ ಸಂಗೀತ ಸಂಯೋಜಿಸುವ ಅವಕಾಶ ದೊರೆಯಿತು. ಕೇಳುಗರನ್ನು ಬೆಸೆಯುವಲ್ಲಿ ಠಾಕೂರ್ ಸಾಮರ್ಥ್ಯವನ್ನು ಗುರುತಿಸಿದ ನೇತಾಜಿ ಸುಖ್ ಚೈನ್ ಅವರ 'ಬರ್ಖಾ ಬರ್ಸೆ' ಚಿತ್ರಕ್ಕೆ ಸಂಗೀತ ನೀಡುವ ಜವಾಬ್ದಾರಿಯನ್ನು ನೀಡಿದರು.
ಈ ಹಾಡನ್ನು ಮೊದಲು ಬಂಗಾಳಿ ಭಾಷೆಯಲ್ಲಿ ಟ್ಯಾಗೋರ್ ಬರೆದಿದ್ದಾರೆ. ಇದನ್ನು ಮೊದಲು ಮಹಾತ್ಮ ಗಾಂಧಿಯವರ ಮುಂದೆ ಪ್ರಸ್ತುತಪಡಿಸಲಾಯಿತು. ಆಗಸ್ಟ್ 15, 1947ರಂದು ಜವಾಹರಲಾಲ್ ನೆಹರೂ ಪ್ರಮಾಣವಚನ ಸ್ವೀಕರಿಸುವಾಗ, 'ಸಬ್ ಸುಖ್ ಚೈನ್ ಕಿ ಬರ್ಖಾ ಬರ್ಸೆ' ಹಾಡು ಕ್ಯಾಪ್ಟನ್ ರಾಮ್ ಸಿಂಗ್ ನೇತೃತ್ವದಲ್ಲಿ ಪ್ರತಿಧ್ವನಿಸಿತು.
ರಾಷ್ಟ್ರಕ್ಕೆ ನೀಡಿದ ಅವರ ಕೊಡುಗೆ ಮತ್ತು ಶೌರ್ಯವನ್ನು ಗೌರವಿಸಿ, ಉತ್ತರಪ್ರದೇಶ ಸರ್ಕಾರವು ಅವರನ್ನು ಇನ್ಸ್‌ಪೆಕ್ಟರ್ ಆಗಿ ನೇಮಿಸಿತು. ಅವರು 2002ರಲ್ಲಿ ಲಖನೌದಲ್ಲಿ ರಾಮ್ ಸಿಂಗ್ ಠಾಕೂರ್ ಕೊನೆಯುಸಿರೆಳೆದರು.