ETV Bharat / bharat

ಇಂದೋರ್‌ನಲ್ಲಿ 550 ಟನ್ ಸಾಮರ್ಥ್ಯದ 'ಗೋಬರ್-ಧನ್' ಘಟಕ ಉದ್ಘಾಟಿಸಿದ ಪ್ರಧಾನಿ ಮೋದಿ - Bio-CNG plant

ಮಧ್ಯಪ್ರದೇಶದ ಇಂದೋರ್ ನಗರದಲ್ಲಿ 150 ಕೋಟಿ ರೂ. ವೆಚ್ಚದ 550 ಟನ್ ಸಾಮರ್ಥ್ಯದ 'ಗೋಬರ್-ಧನ್' ಜೈವಿಕ ಸಿಎನ್​ಜಿ ಸ್ಥಾವರವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.

ಮೋದಿ
ಮೋದಿ
author img

By

Published : Feb 20, 2022, 1:41 PM IST

ಇಂದೋರ್: ನಗರ ಪ್ರದೇಶಗಳಲ್ಲಿ ದಶಕಗಳಿಂದ ಸುರಿಯುತ್ತಿರುವ ಕಸದ ರಾಶಿಯಿಂದ ಜೈವಿಕ ಗುಣಮಟ್ಟದ ಸಾವಯವ ರಸಗೊಬ್ಬರ ತಯಾರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ದೇಶದ ವಿವಿಧ ಬೃಹತ್‌ ನಗರಗಳಲ್ಲಿನ ತ್ಯಾಜ್ಯವನ್ನು ಬಳಸಿಕೊಂಡು ಜೈವಿಕ- ಸಿಎನ್‌ಜಿ ಉತ್ಪಾದಿಸುವ ಗುಣಮಟ್ಟದ ಸಾವಯವ ರಸಗೊಬ್ಬರ ತಯಾರಿಸುವ ಏಷ್ಯಾದಲ್ಲೇ ಅತಿದೊಡ್ಡ ‘ಗೋಬರ್‌- ಧನ್‌’ ಘಟಕಕ್ಕೆ ಶನಿವಾರ ಮೋದಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, 2014 ರಿಂದ ಈಚೆಗೆ ದೇಶದ ನಗರ ಪ್ರದೇಶಗಳ ಕಸ ವಿಲೇವಾರಿ ಸಾಮರ್ಥ್ಯ ನಾಲ್ಕು ಪಟ್ಟು ಹೆಚ್ಚಿದೆ. ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ಭಾರತವು ಇತರೆ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಜೈವಿಕ ಇಂಧನ ಬಳಕೆಯಾಗಲಿದೆ ಎಂದರು.

ಇಂದೋರ್​ನಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಘಟಕವು 550 ಟನ್ ಸಾಮರ್ಥ್ಯದ ಸಾವಯವ ರಸಗೊಬ್ಬರ ಉತ್ಪಾದಿಸಬಲ್ಲದು. ಈ ಕ್ರಮದಿಂದಾಗಿ ವಾತಾವರಣಕ್ಕೆ ಹಸಿರು ಮನೆ ಅನಿಲ ಬಿಡುಗಡೆ ಕಡಿಮೆಯಾಗುವುದರ ಜೊತೆಗೆ, ಬಳಕೆಗೆ ಸ್ವಚ್ಛ ಇಂಧನ ಲಭ್ಯವಾಗಲಿದೆ.

ದೇಶಾದ್ಯಂತ ನಗರಗಳಲ್ಲಿ ದಶಕಗಳಿಂದ ಸಾವಿರಾರು ಎಕರೆ ಭೂಮಿಯಲ್ಲಿ ಲಕ್ಷಗಟ್ಟಲೆ ಟನ್ ಕಸ ನಿಂತಿದೆ. ಇದು ವಾಯು ಮತ್ತು ಜಲ ಮಾಲಿನ್ಯವನ್ನು ಉಂಟುಮಾಡುವ ರೋಗಗಳ ಹರಡುವಿಕೆಗೆ ಪ್ರಮುಖ ಕಾರಣವಾಗಿದೆ. ಜೈವಿಕ ಸಿಎನ್​ಜಿ ಸ್ಥಾವರ ಸ್ಥಾಪನೆ ಮೂಲಕ ಭಾರತದ ನಗರಗಳನ್ನು ಸ್ವಚ್ಛ, ಮಾಲಿನ್ಯ ಮುಕ್ತವಾಗಿ ಮಾಡಲಾಗುವುದು ಎಂದು ಮೋದಿ ಹೇಳಿದರು.

ಮುಂದಿನ ಎರಡು-ಮೂರು ವರ್ಷಗಳಲ್ಲಿ ನಮ್ಮ ನಗರಗಳು ಕಸದ ರಾಶಿಯಿಂದ ಮುಕ್ತವಾಗಿ ಹಸಿರು ವಲಯಗಳಾಗಿ ಪರಿವರ್ತನೆಯಾಗಬೇಕು ಎಂಬ ಗುರಿ ಹೊಂದಲಾಗಿದ್ದು, ಈ ಗುರಿಯನ್ನು ಸಾಧಿಸಲು ರಾಜ್ಯ ಸರ್ಕಾರಗಳಿಗೆ ಎಲ್ಲಾ ರೀತಿಯ ಸಹಾಯವನ್ನು ನೀಡಲಾಗುತ್ತಿದೆ. ಮುಂಬರುವ ಎರಡು ವರ್ಷಗಳಲ್ಲಿ ದೇಶದ 75 ದೊಡ್ಡ ಪುರಸಭೆಗಳಲ್ಲಿ ಇಂತಹ 'ಗೋಬರ್ ಧನ್' ಬಯೋ- ಸಿಎನ್‌ಜಿ ಪ್ಲಾಂಟ್‌ಗಳನ್ನು ಸ್ಥಾಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.