ದಾಮೋಹ್(ಮಧ್ಯಪ್ರದೇಶ): ಆಟವಾಡುತ್ತಿದ್ದಾಗ ತೆರೆದ ಬೋರ್ವೆಲ್ ಒಳಗೆ ಬಿದ್ದಿದ್ದ ಮೂರು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಸ್ಥಳೀಯ ಆಡಳಿತ ಮತ್ತು ಎಸ್‌ಡಿಆರ್‌ಎಫ್ ತಂಡದ ಸತತ 7 ಗಂಟೆಗಳ ಕಾರ್ಯಾಚರಣೆ ನಡುವೆಯೂ ಬಾಲಕ ಬದುಕುಳಿಯಲಿಲ್ಲ.
ಮಧ್ಯಪ್ರದೇಶದ ಬರಖೇರಾ ಘಟನೆ ಸಂಭವಿಸಿದ್ದು, ಬೋರ್ವೆಲ್ನ 15 ಅಡಿ ಆಳದಲ್ಲಿ ಬಾಲಕ ಸಿಲುಕಿಕೊಂಡಿದ್ದ. ದಾಮೋಹ್ ಜಿಲ್ಲೆಯ ಧರ್ಮೇಂದ್ರ ಅತ್ಯಾ ಎಂಬುವರ ಮಗ ಪ್ರಿನ್ಸ್ ಎಂಬಾತ ಮೃತ ಬಾಲಕ. 7 ಗಂಟೆಗಳ ಕಾರ್ಯಾಚರಣೆ ಬಳಿಕ ಈತನನ್ನು ಹೊರತೆಗೆಯಲಾಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅದಾಗಲೇ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
-
ग्राम बरखेरा बेस में बोरवेल के गड्ढे में गिरे बच्चे का रेस्क्यू पूरा
— Collector Damoh (@CollectorDamoh) February 27, 2022 " class="align-text-top noRightClick twitterSection" data="
=====
जांच के दौरान डॉक्टर ने बच्चे को मृत घोषित किया
=====@mohdept @JansamparkMP pic.twitter.com/0Wg6ma2M3m
">ग्राम बरखेरा बेस में बोरवेल के गड्ढे में गिरे बच्चे का रेस्क्यू पूरा
— Collector Damoh (@CollectorDamoh) February 27, 2022
=====
जांच के दौरान डॉक्टर ने बच्चे को मृत घोषित किया
=====@mohdept @JansamparkMP pic.twitter.com/0Wg6ma2M3mग्राम बरखेरा बेस में बोरवेल के गड्ढे में गिरे बच्चे का रेस्क्यू पूरा
— Collector Damoh (@CollectorDamoh) February 27, 2022
=====
जांच के दौरान डॉक्टर ने बच्चे को मृत घोषित किया
=====@mohdept @JansamparkMP pic.twitter.com/0Wg6ma2M3m
ಹಲವು ಗಂಟೆಗಳ ಕಾಲ ಬೋರ್‌ವೆಲ್‌ನಲ್ಲಿದ್ದ ಬಾಲಕ ಉಸಿರುಗಟ್ಟುವಿಕೆ, ಹಸಿವು ಮತ್ತು ಭಯದಿಂದ ಪ್ರಜ್ಞೆ ಕಳೆದುಕೊಂಡು ಮೃತಪಟ್ಟಿರುವ ಸಾಧ್ಯತೆಯಿದೆ. ಬಾಲಕ ಆಟವಾಡುತ್ತಿದ್ದಾಗ ದಿಢೀರನೇ ಬೋರ್ವೆಲ್ ಒಳಗೆ ಬಿದ್ದಿದ್ದನ್ನು ಅಲ್ಲೇ ಕೆಲಸ ಮಾಡುತ್ತಿದ್ದ ಜನರು ಕಂಡಿದ್ದರು.
ತಕ್ಷಣ ಗ್ರಾಮಸ್ಥರು ಪೊಲೀಸರಿಗೆ ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಜೆಸಿಬಿಯೊಂದಿಗೆ ಆಗಮಿಸಿದ್ದರಲ್ಲದೆ, ಎಸ್‌ಡಿಆರ್‌ಎಫ್ ತಂಡವು ಸತತ ರಕ್ಷಣಾ ಕಾರ್ಯಾಚರಣೆ ನಡೆಸಿತ್ತು.
ಓದಿ: ಬೈಕ್ ಕೊಡಿಸಲಿಲ್ಲ ಎಂದು ತ್ರಿವಳಿ ತಲಾಖ್ ನೀಡಿದ ಪತಿ : ದೂರು ದಾಖಲಿಸಿದ ಗರ್ಭಿಣಿ