ನಾಗೌರ್ (ರಾಜಸ್ಥಾನ್) : ಮೆರ್ಟಾ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯಲ್ಲಿ 7 ವರ್ಷದ ಬಾಲಕಿ ಮೇಲೆ ಇಬ್ಬರು ಅಪ್ರಾಪ್ತರು ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ 6 ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇಬ್ಬರು ಅಪ್ರಾಪ್ತ ಆರೋಪಿಗಳು ಟೆರೇಸ್ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ. ಆರೋಪಿಗಳಿಬ್ಬರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ವಿಷಯದ ಗಂಭೀರತೆ ಗಮನಿಸಿದ ಪೊಲೀಸ್ ವರಿಷ್ಠಾಧಿಕಾರಿ ರಾಮಮೂರ್ತಿ ಜೋಶಿ ಅವರು ಮೆರ್ಟಾ ರೋಡ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಆರೋಗ್ಯ ಹದಗೆಟ್ಟಾಗ ಘಟನೆ ಬಹಿರಂಗ: ವರದಿ ಪ್ರಕಾರ ಜುಲೈ 4 ರಂದು ಬಾಲಕಿಯ ಆರೋಗ್ಯ ಹದಗೆಟ್ಟಾಗ ಪೋಷಕರು ಆಸ್ಪತ್ರೆಗೆ ದಾಖಲು ಮಾಡಿದ್ದರು. ನಂತರ ಬಾಲಕಿಗೆ ಹೊಟ್ಟೆನೋವಿಗೆ ಔಷಧ ನೀಡಲಾಗಿದೆ. ಮರುದಿನ ಅಂದರೆ ಜುಲೈ 5 ರಂದು ಯಾವುದೇ ಸುಧಾರಣೆ ಕಾಣಲಿಲ್ಲ, ಆಗ ಹೆದರಿದ ಹುಡುಗಿ ತನಗೆ ಆದ ಘಟನೆಯನ್ನು ತನ್ನ ತಂದೆಗೆ ತಿಳಿಸಿದ್ದಾಳೆ.
ಬಾವಿಗೆ ಕರೆದೊಯ್ದು ಕೃತ್ಯ: ಸುಮಾರು 5 - 6 ದಿನಗಳ ಹಿಂದೆ ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಇಬ್ಬರು ಅಪ್ರಾಪ್ತ ಆರೋಪಿಗಳು ಬಾಲಕಿಗೆ ಆಮಿಷ ಒಡ್ಡಿ ತಾರಸಿಗೆ ಕರೆದೊಯ್ದಿದ್ದಾರೆ. ಬಾಲಕಿ ಅಳುವುದಕ್ಕೆ ಮುಂದಾದಾಗ ನಿನ್ನ ತಾಯಿ ನಿನ್ನ ತಂದೆಯನ್ನು ಚಾಕುವಿನಿಂದ ಕೊಚ್ಚಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಬೆದರಿಕೆಯಿಂದ ಬೆದರಿದ ಬಾಲಕಿ ಸುಮ್ಮನಾಗಿ ನಾಲ್ಕು ದಿನಗಳ ವರೆಗೂ ಘಟನೆ ಮುಚ್ಚಿಟ್ಟಿದ್ದಾಳೆ.
ತನಿಖೆಯನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ ಮೆರ್ಟಾ ಅವರಿಗೆ ಹಸ್ತಾಂತರಿಸಲಾಗಿದೆ. ಪೊಲೀಸರು ಸಂತ್ರಸ್ತೆಗೆ ವೈದ್ಯಕೀಯ ಚಿಕಿತ್ಸೆ ನೀಡಿದ್ದಾರೆ. ಹಾಗೆ ಅಪ್ರಾಪ್ತ ಮಕ್ಕಳ ವಯಸ್ಸಿನ ಬಗ್ಗೆ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ದೇಶದಲ್ಲಿ ತೆರಿಗೆ ಕಟ್ಟುವುದನ್ನು ತಪ್ಪಿಸಲು ಶೇ 50ರಷ್ಟು ವಹಿವಾಟು ಚೀನಾಕ್ಕೆ ರವಾನಿಸಿದ ವಿವೋ