ETV Bharat / bharat

Live video: ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದ 7 ಅಂತಸ್ತಿನ ಕಟ್ಟಡ - ಹಿಮಾಚಲ ಪ್ರದೇಶ ಶಿಮ್ಲಾ

ಏಳು ಅಂತಸ್ತಿನ ಕಟ್ಟಡವೊಂದು ದಿಢೀರ್​ ಕುಸಿದಿರುವ ಘಟನೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆದಿದೆ.

Building collapsed
Building collapsed
author img

By

Published : Sep 30, 2021, 8:03 PM IST

ಶಿಮ್ಲಾ(ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಏಳಂತಸ್ತಿನ ಕಟ್ಟಡವೊಂದು ದಿಢೀರ್​ ಕುಸಿದಿರುವ ಘಟನೆ ನಡೆದಿದೆ. ಈ ಅನಾಹುತ ನಡೆಯುವುದಕ್ಕೂ ಕೆಲ ಗಂಟೆಗಳ ಮೊದಲು ಜಿಲ್ಲಾಡಳಿತ ಕುಟುಂಬಗಳನ್ನು ಬೇರೆ ಪ್ರದೇಶಗಳಿಗೆ ಶಿಫ್ಟ್​ ಮಾಡಿದ್ದಾಗಿ ತಿಳಿದು ಬಂದಿದೆ.

ಕಟ್ಟಡ ಕುಸಿಯುವ ಮುನ್ಸೂಚನೆ ಲಭ್ಯವಾಗಿದ್ದರಿಂದ ಕಳೆದ 15 ದಿನಗಳ ಹಿಂದೆ ಶಿಮ್ಲಾ ಮುನ್ಸಿಪಲ್​ ಕಾರ್ಪೋರೇಷನ್​​ ಎಲ್ಲ ಮನೆ ಖಾಲಿ ಮಾಡುವಂತೆ ಸೂಚನೆ ನೀಡಿತ್ತು. ಆದರೆ ಕೆಲ ಕುಟುಂಬಗಳು ಇದಕ್ಕೆ ಹಿಂದೇಟು ಹಾಕಿದ್ದವು. ಆದರೆ ಇಂದು ಕೆಲ ಗಂಟೆಗಳ ಮುಂಚಿತವಾಗಿ ಅವರಿಗೆ ಮನೆಯಿಂದ ಬೇರೆ ಕಡೆ ಶಿಫ್ಟ್ ಮಾಡಲಾಗಿತ್ತು.

ನೋಡು ನೋಡುತ್ತಿದ್ದಂತೆ ಕುಸಿದು ಬಿದ್ದ 7 ಅಂತಸ್ತಿನ ಕಟ್ಟಡ

ಶಿಮ್ಲಾದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣದಿಂದ ಅನೇಕ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದ್ದು, ಮಣ್ಣು ಸಡಿಲಗೊಂಡಿದೆ. ಹೀಗಾಗಿ ಈ ಬೃಹತ್ ಕಟ್ಟಡ ಕುಸಿದು ಬಿದ್ದಿದೆ. ಶಿಮ್ಲಾದಲ್ಲಿ ಇನ್ನೂ 5ರಿಂದ 12 ಬೃಹತ್​ ಕಟ್ಟಡಗಳಿದ್ದು, ಅಲ್ಲಿನ ನಿವಾಸಿಗಳಿಗೂ ಅಪಾರ್ಟ್​ಮೆಂಟ್​ ಖಾಲಿ ಮಾಡುವಂತೆ ಮುನ್ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.