ಇಂದೋರ್: ವಿದೇಶದಿಂದ ಖರೀದಿಸಿ ತಂದು ಮುಂಬೈನಿಂದ ಇಂದೋರ್ಗೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 3 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಇಂದೋರ್ ಡಿಆರ್‌ಐ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.
ಮುಂಬೈನಿಂದ ಇಂದೋರ್ಗೆ ಕಾರಿನಲ್ಲಿ ಅಕ್ರಮವಾಗಿ ವಿದೇಶದಿಂದ ಖರೀದಿಸಿ ತಂದ ಅಧಿಕ ಮೊತ್ತದ ಚಿನ್ನವನ್ನು ಸಾಗಣೆ ಮಾಡಲಾಗುತ್ತದೆ ಎಂಬ ಮಾಹಿತಿ ಅರಿತ ಪೊಲೀಸರು ತಂಡ ರಚಿಸಿಕೊಂಡು ದಾಳಿಗೆ ಇಳಿದರು.
ಖಚಿತ ಮಾಹಿತಿ ಮೇರೆಗೆ ಕಾರು ತಡೆದು ಪರಿಶೀಲಿಸಿದಾಗ ಚಿನ್ನ ಪತ್ತೆಯಾಗಿದೆ. ಇದು 3 ಕೋಟಿಗೂ ಹೆಚ್ಚು ಮೌಲ್ಯದ್ದು ಎಂದು ಅಂದಾಜಿಸಲಾಗಿದೆ. 7.1 ಕೆಜಿ ತೂಕವಿದೆ ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಚಿನ್ನ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿ ಕೇಸ್ ದಾಖಲಿಸಿದ್ದಾರೆ.
ಓದಿ: ಶಾಸಕರ ತಂದೆಯ ಸೈಟ್ಗೆ ನಕಲಿ ಮಾಲೀಕರನ್ನು ಸೃಷ್ಟಿಸಿದ ವಂಚಕರು: ಮೈಸೂರಿನಲ್ಲಿ ಮೂವರ ಬಂಧನ