ಲಡಾಖ್(ಜಮ್ಮು-ಕಾಶ್ಮೀರ): ಭಾರತೀಯ ಸೇನಾ ವಾಹನದಲ್ಲಿ ಯೋಧರು ಪ್ರಯಾಣಿಸುತ್ತಿದ್ದ ವೇಳೆ, ನಿಯಂತ್ರಣ ಕಳೆದುಕೊಂಡು ನದಿಗೆ ಉರುಳಿ ಬಿದ್ದಿರುವ ಘಟನೆ ಜಮ್ಮು-ಕಾಶ್ಮೀರದ ಲಡಾಖ್ನಲ್ಲಿ ನಡೆದಿದೆ. ಪರಿಣಾಮ ಏಳು ಯೋಧರು ಹುತಾತ್ಮರಾಗಿದ್ದಾರೆ. ಉಳಿದಂತೆ 19 ಯೋಧರು ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗ್ತಿದೆ. ತುರ್ತುಕ್ ಸೆಕ್ಟರ್ನ ಲಡಾಖ್ನಲ್ಲಿ ಈ ಘಟನೆ ನಡೆದಿದೆ.
ಗಂಭೀರವಾಗಿ ಗಾಯಗೊಂಡವರನ್ನ ವಿಮಾನದ ಮೂಲಕ ಬೇರೆ ಆಸ್ಪತ್ರೆಗೆ ಸ್ಥಳಾಂತರ ಮಾಡುವ ಕೆಲಸ ಮಾಡಲಾಗ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ. 26 ಸೈನಿಕರ ತಂಡ ಪಾರ್ತಾಪುರದ ಟ್ರಾನ್ಸಿಟ್ ಕ್ಯಾಂಪ್ನಿಂದ ಮುಂದಿನ ಸ್ಥಳಕ್ಕೆ ಪ್ರಯಾಣಿಸುತ್ತಿತ್ತು. ಬೆಳಗ್ಗೆ 9 ಗಂಟೆಗೆ ಥೋಯಿಸ್ನಿಂದ 25 ಕಿಲೋ ಮೀಟರ್ ದೂರ ಚಲಿಸಿದ ಬಳಿಕ ಸೇನಾ ವಾಹನ ಸ್ಕಿಡ್ ಆಗಿ ಲಡಾಖ್ನ ತುರ್ತುಕ್ ಸೆಕ್ಟರ್ನ ಶ್ಯೋಕ್ ನದಿಯಲ್ಲಿ ಉರುಳಿ ಬಿದ್ದಿದೆ. ಪರಿಣಾಮ ಏಳು ಯೋಧರು ಹುತಾತ್ಮರಾಗಿದ್ದಾರೆ.
-
7 Indian Army soldiers lost their lives so far in a vehicle accident in Turtuk sector (Ladakh), grievous injuries to others too. Efforts on to ensure best medical care for injured, incl requisition of air effort from IAF to shift more serious ones to Western Command: Army Sources
— ANI (@ANI) May 27, 2022 " class="align-text-top noRightClick twitterSection" data="
">7 Indian Army soldiers lost their lives so far in a vehicle accident in Turtuk sector (Ladakh), grievous injuries to others too. Efforts on to ensure best medical care for injured, incl requisition of air effort from IAF to shift more serious ones to Western Command: Army Sources
— ANI (@ANI) May 27, 20227 Indian Army soldiers lost their lives so far in a vehicle accident in Turtuk sector (Ladakh), grievous injuries to others too. Efforts on to ensure best medical care for injured, incl requisition of air effort from IAF to shift more serious ones to Western Command: Army Sources
— ANI (@ANI) May 27, 2022
ವಾಹನ ಸುಮಾರು 50-60 ಅಡಿ ಆಳಕ್ಕೆ ಬಿದ್ದಿದೆ ಎಂದು ತಿಳಿದು ಬಂದಿದೆ. ಇಲ್ಲಿಯವರೆಗೆ ಏಳು ಯೋಧರು ಹುತಾತ್ಮರಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, 19 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನೆಲ್ಲ ಚಂಡಿಮಂದಿರ್ ಕಮಾಂಡ್ ಆಸ್ಪತ್ರೆಗೆ ಏರ್ಲಿಫ್ಟ್ ಮಾಡಲಾಗಿದೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ನಡೆಸಲಾಗಿದೆ.
ಇದನ್ನು ಓದಿ:ಮಹಾರಾಷ್ಟ್ರದ ವಘೋಬಾ ಘಾಟ್ ಬಳಿ ಕಂದಕಕ್ಕೆ ಉರುಳಿದ ಬಸ್: 15 ಮಂದಿಗೆ ಗಾಯ