ETV Bharat / bharat

ಒಂದೇ ಶಾಲೆಯ 67 ವಿದ್ಯಾರ್ಥಿಗಳು, 25 ಸಿಬ್ಬಂದಿಗೆ ಕೊರೊನಾ ಸೋಂಕು! - ಹಿಮಾಚಲ ಪ್ರದೇಶದಲ್ಲಿ ಕೊರೊನಾ ಸೊಂಕು

ಸುಜಾದ ಟಿಬೆಟಿಯನ್ ಗ್ರಾಮದ ಶಾಲೆಯಲ್ಲಿ ಹೊರಗಿನ ರಾಜ್ಯಗಳಿಂದ ಬಂದ 67 ಮಕ್ಕಳು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ವಿದ್ಯಾರ್ಥಿಗಳು ನೇಪಾಳ, ಅರುಣಾಚಲ ಪ್ರದೇಶ, ಮಹಾರಾಷ್ಟ್ರ ಮತ್ತು ಲಡಾಖ್‌ನಿಂದ ಆಗಮಿಸಿದ್ದರು ಎನ್ನಲಾಗ್ತಿದೆ.

67 students found corona positive in mandi district
ಒಂದೇ ಶಾಲೆಯ 67 ವಿದ್ಯಾರ್ಥಿಗಳಿಗೆ ಕೊರೊನಾ
author img

By

Published : Nov 8, 2020, 7:14 AM IST

ಮಂಡಿ(ಹಿಮಾಚಲ ಪ್ರದೇಶ): ಶಾಲೆ ಪ್ರಂಭವಾಗಲಿದೆ ಎಂದು ವಿವಿಧ ರಾಜ್ಯಗಳಿಂದ ಆಗಮಿಸಿದ 67 ಮಕ್ಕಳಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಮಕ್ಕಳಷ್ಟೇ ಅಲ್ಲದೆ 25 ಮಂದಿ ಶಾಲಾ ಸಿಬ್ಬಂದಿಗೂ ಸೋಂಕು ವಕ್ಕರಿಸಿದೆ.

ಜೋಗಿಂದರ್‌ನಗರ ಉಪವಿಭಾಗದಲ್ಲಿರುವ ಟಿಬೆಟಿಯನ್ ಗ್ರಾಮದ ಶಾಲೆಗೆ ನೇಪಾಳ, ಅರುಣಾಚಲ ಪ್ರದೇಶ, ಮಹಾರಾಷ್ಟ್ರ ಮತ್ತು ಲಡಾಖ್‌ನಿಂದ ವಿದ್ಯಾರ್ಥಿಗಳು ಆಗಮಿಸಿದ್ದರು. ಈ ಎಲ್ಲ ಮಕ್ಕಳು 10 ಮತ್ತು 12 ನೇ ತರಗತಿಯವರಾಗಿದ್ದಾರೆ.

ಹೊರಗಿನ ರಾಜ್ಯಗಳಿಂದ ಬಂದಿದ್ದರಿಂದ ಜಿಲ್ಲಾಡಳಿತವು ಮುನ್ನೆಚ್ಚರಿಕೆ ಕ್ರಮವಾಗಿ ಮಾದರಿಯನ್ನು ಪರೀಕ್ಷೆಗೆ ತೆಗೆದುಕೊಂಡಿತ್ತು, ಇದೀಗ ಹಲವರಲ್ಲಿ ಸೋಂಕು ಕಂಡುಬಂದಿದೆ. ಶಾಲಾ ಆವರಣದಲ್ಲಿ ಲಭ್ಯವಿರುವ ವ್ಯವಸ್ಥೆ, ಮುಂಜಾಗ್ರತಾ ಕ್ರಮಗಳನ್ನು ಗಮನಿಸಿದ ನಂತರ ಜಿಲ್ಲಾಡಳಿತವು ಅವರನ್ನು ಪ್ರತ್ಯೇಕವಾಗಿ ಇರಿಸಿದೆ.

ಮಕ್ಕಳು ಮತ್ತು ಸಿಬ್ಬಂದಿ ಸೇರಿದಂತೆ ಸುಜಾದ ಟಿಬೆಟಿಯನ್ ಗ್ರಾಮದ ಶಾಲೆಯಲ್ಲಿ ಒಟ್ಟು 92 ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋಂಕಿತ ಮಕ್ಕಳಲ್ಲಿ 47 ಬಾಲಕಿಯರು ಮತ್ತು 20 ಬಾಲಕರು ಸೇರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಆರೋಗ್ಯ ಇಲಾಖೆ ತಂಡ ಅವರ ಮೇಲೆ ನಿಗಾ ವಹಿಸಿದೆ. ಅಗತ್ಯಕ್ಕೆ ಅನುಗುಣವಾಗಿ ಅವರನ್ನು ಕೋವಿಡ್ ಕೇರ್ ಸೆಂಟರ್ ಅಥವಾ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದರು. ಶಾಲೆಯನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ. ಆದರೆ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳೂ ಸಹ ಕೊರೊನಾ ಸೋಂಕಿಗೆ ಒಳಗಾಗುತ್ತಿರುವುದರಿಂದ ಸರ್ಕಾರದ ಆತಂಕಕ್ಕೆ ಕಾರಣವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.